ಸುಷ್ಮಿತಾ ಸೇನ್ ತಮ್ಮ ಮಿಸ್ ಯುನಿವರ್ಸ್ ಸ್ಪರ್ಧೆಯ ಗೆಲುವಿನ ಕ್ಷಣಗಳನ್ನು ನೆನಪಿಸಿಕೊಳ್ಳುತ್ತ ಹೇಳುತ್ತಾರೆ…. । ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ
ಸೆಕೆಂಡ್ ರನ್ನರ್ ಅಪ್ ಆಗಿ ಮಿಸ್ ವೆನೆಜುವೆಲಾ ವೇದಿಕೆಯಿಂದ ನಿರ್ಗಮಿಸಿದ ಮೇಲೆ ಸ್ಟೇಜ್ ಮೇಲೆ ನಾನು ಮತ್ತು ಮಿಸ್ ಕೊಲಂಬಿಯಾ ಇಬ್ಬರೇ ಉಳಿದುಕೊಂಡಿದ್ದೆವು. ತೀರ್ಪುಗಾರರು ನನ್ನ ಹೆಸರನ್ನ ಮಿಸ್ ಯುನಿವರ್ಸ್ ಎಂದು ಘೋಷಿಸುತ್ತಿದ್ದಂತೆಯೇ, ನೀವು ನೋಡಬೇಕು ಮಿಸ್ ಕೋಲಂಬಿಯೀ ಹೇಗೆ ತಾನೇ ಗೆದ್ದಂತೆ, ತನ್ನ ಕೈಗಳನ್ನು ಚಾಚುತ್ತ ನನ್ನ ಗೆಲುವನ್ನ ಸಂಭ್ರಮಿಸಿದಳು ಅಂತ. ಇದು ನನಗೆ ಬಹಳ ದೊಡ್ಡ ಘನತೆಯ ಪಾಠ.
ಆಹಾ ಎಂಥ ಮುಕ್ತ ಮನಸ್ಸು ಎಂಥ ಉತ್ಕ್ರಷ್ಟ ಔದಾರ್ಯದ ಮನಸ್ಸು ಅವಳದು. ಬಹುಶಃ ಇಂಥದನ್ನ ನಾನು ಕಲಿಯಬೇಕೆಂದೇ ನನಗೆ ಆ ಕಿರೀಟ ತೊಡಿಸಲಾಯಿತೇನೋ. ಅವಳು ಈ ಯಾವುದನ್ನೂ ಹೊಸದಾಗಿ ಕಲಿಯಬೇಕಿರಲಿಲ್ಲ. ಇದು ಅವಳಲ್ಲಿ ಮೊದಲೇ ಇತ್ತು”.

