ಧಾರವಾಡದಲ್ಲಿ ಕವಿತಾದ ವಾಸನಿ! : Coffeehouse ಕತೆಗಳು

ಧಾರವಾಡದಲ್ಲಿ ಕೇಳಿದ್ದು (ಬಹುಶಃ ಗಿರೀಶ್ ಕಾರ್ನಾಡರಿಂದ ?) ………| ಚಿದಂಬರ ನರೇಂದ್ರ

ಒಮ್ಮೆ ಇಬ್ಬರು ಸಾಹಿತ್ಯ ಪ್ರೇಮಿಗಳು ಪ್ರಸಿದ್ಧ ಸಂಶೋಧಕ ಶಂಬಾ ಅವರ ಮನೆಗೆ ಬರ್ತಾರೆ. ಮನೆಯ ಅಂಗಳದಲ್ಲೇ ಕುಳಿತಿದ್ದ ಶಂಬಾ ಅತಿಥಿಗಳನ್ನ ಸ್ವಾಗತ ಮಾಡುತ್ತ ಅವರಿಗೊಂದು ಪ್ರಶ್ನೆ ಕೇಳ್ತಾರೆ.

“ ಆ ಮನಿಗೆ ಹೋಗಿ ಬಂದ್ರೇನು?”

( ಆ ಮನಿ ಅಂದ್ರೆ ಬೇಂದ್ರೆಯವರ ಮನೆ. ಶಂಬಾ ಮತ್ತು ಬೇಂದ್ರೆ ಜಗಳ ಬಹಳ ಪ್ರಸಿದ್ಧವಾದದ್ದು)

“ ಹೌದ್ರಿ. ಆದ್ರ ನಿಮಗೆಂಗ ಗೊತ್ತಾತು ? “ ಅಂತ ಅತಿಥಿಗಳು ಶಂಬಾ ಅವರನ್ನ ತಿರುಗಿ ಪ್ರಶ್ನೆ ಮಾಡ್ತಾರ.

“ ನಿಮ್ಮ ಮೈಯಾಗಿಂದ ಕವಿತಾದ ವಾಸನಿ ಬರ್ಲಿಕತ್ತದ, ಅಷ್ಟ ಗೊತ್ತಾಗುದಿಲ್ಲೇನ ನನಗ ” ಶಂಬಾ ಕೊಟ್ಟ ಉತ್ತರ ಅತಿಥಿಗಳನ್ನ ಗಾಬರಿ ಮಾಡಿ ಬಿಡ್ತದ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.