ಶಾಸ್ತ್ರೀಯ ಸಂಗೀತ ಲೋಕದ ದಿಗ್ಗಜ ಭೀಮಸೇನ ಜೋಶಿಯವರ ಈ ಸಮಾಧಾನದಲ್ಲಿ ಎಷ್ಟು ದೊಡ್ಡ ಮೆಚ್ಚುಗೆ ಅಡಗಿತ್ತು ನೋಡಿ! ~ ಚಿದಂಬರ ನರೇಂದ್ರ
ಹಿಂದೊಮ್ಮೆ ಒಂದು ನನ್ನ ಹಾಡಿನ ರಿಕಾರ್ಡಿಂಗ್ ಗೆ ಹೋಗಿದ್ದಾಗ ಅಲ್ಲಿ ಒಬ್ಬ ಸೌಂಡ್ ರಿಕಾರ್ಡಿಸ್ಟ್ ಹೇಳ್ತಾ ಇದ್ರು…
ಒಮ್ಮೆ ರಿಕಾರ್ಡಿಂಗ್ ಒಂದರ ಬಿಡುವಿನ ಸಮಯದಲ್ಲಿ ಪಂಡಿತ್ ಭಿಮಸೇನ್ ಜೋಶಿ ಹೆಡ್ ಫೋನ್ ಲ್ಲಿ ಏನೋ ಕೇಳುತ್ತ ತನ್ಮಯರಾಗಿ ಕುಳಿತಿದ್ದರು. ಅವರು ಹೆಡ್ ಫೋನ್ ತೆಗೆದ ಮೇಲೆ ಯಾರೋ ಅವರನ್ನ ಕೇಳಿದರು,“ಏನು ಪಂಡಿತ್ ಜೀ ಯಾವ ರಾಗ ಇಷ್ಟು ತನ್ಮಯರಾಗಿ ಕೇಳತ್ತಾ ಇದ್ರಿ? “ ಯಾವ ರಾಗವೂ ಅಲ್ಲ, ಕಿಶೋರ್ ಕುಮಾರ್ ನ ಹಾಡು ಕೇಳ್ತಾ ಇದ್ದೆ” ಅಂತ ಉತ್ತರಿಸಿದರಂತೆ ಭೀಮಸೇನರು.
ನೀವು ಇಂಥಾ ದೊಡ್ಡ ಸಂಗೀತಕಾರರು ಸಿನೇಮಾ ಹಾಡು ಕೇಳ್ತಾ ಇದಿರಲ್ಲಾ ಅಂತ ಅವರನ್ನ ಕೇಳಿದಾಗ, ಪಂಡಿತ್ ಜಿ ಹೇಳಿದರಂತೆ, “ನಮ್ಮ ಅದೃಷ್ಟ ಈ ಕಿಶೋರ್ ಕುಮಾರ್ ಶಾಸ್ತ್ರೀಯ ಸಂಗೀತ ಕಲೀಲಿಲ್ಲ “ ಅಂತ!

