ಪ್ರಸಿದ್ಧ ಕ್ರಿಕೆಟ್ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ಸೋಲಿನ ದಾರಿಯನ್ನು ಗುರುತಿಸುವುದು ಹೀಗೆ… |ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ
ಯಾವಾಗ ನೀವು ಯಶಸ್ವಿಗಳಾಗಿ ಗೆಲುವಿನ ದಾರಿಯಲ್ಲಿ ಮುನ್ನಡೆಯುತ್ತಿರುತ್ತೀರೋ ಆಗ ಥಟ್ಟನೇ ಮೂರು ನೆರಳುಗಳು ನಿಮ್ಮ ಜೊತೆ ನಡೆಯಲಾರಂಭಿಸುತ್ತವೆ. ಮೊದಲನೇಯ ನೆರಳು over confidence (ಅತಿಯಾದ ಆತ್ಮವಿಶ್ವಾಸ). ಇನ್ನು ನನ್ನನ್ನು ತಡೆಯುವವರು ಯಾರೂ ಇಲ್ಲ ಎನ್ನುವ ಭ್ರಮೆ.
ಎರಡನೇಯ ನೆರಳು complacency (ಅಲಕ್ಷ್ಯ). ನಾನು ಸಮರ್ಥ, ನನ್ನ ಸೋಲಿಸುವುದು ಅಸಾಧ್ಯ ಎನ್ನುವುದು ತಿಳುವಳಿಕೆ.
ಈ ಎರಡು ನೆರಳುಗಳು ಜೊತೆ ನಡೆಯುವುದು ಒಪ್ಪಿತವಲ್ಲವಾದರೂ, ಪರವಾಗಿಲ್ಲ ಮ್ಯಾನೇಜ್ ಮಾಡಬಹುದು. ಆದರೆ ಈ ಮೂರನೇಯ ನೆರಳು ego (ಅಹಂ) ಇದೆಯಲ್ಲ ಅದು ನಿಮ್ಮನ್ನು ಕಟ್ಟಿಹಾಕಿಬಿಡುತ್ತದೆ. ಆಗ ನೀವು ಕಲಿಯುವುದನ್ನು ನಿಲ್ಲಿಸಿ, ಉಪದೇಶ ಮಾಡಲಿಕ್ಕೆ ಶುರು ಮಾಡುತ್ತೀರಿ. ಆಗಲೇ ನಿಮ್ಮ ಅಪಯಶಸ್ಸಿನ ದಾರಿ ಶುರುವಾಗಿ ಬಿಡುತ್ತದೆ. ನೀವು ಎಚ್ಚೆತ್ತು ಕೊಳ್ಳದಿದ್ದರೆ ಸೋಲಿನ ಪಾತಾಳವನ್ನು ಮುಟ್ಟಬೇಕಾಗುತ್ತದೆ.

