ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ
ಒಮ್ಮೆ ಒಬ್ಬ ಯುವಕ ತನ್ನ ಮನೆಯ ಅಂಗಳದಲ್ಲಿ ಕೂತಿರ್ತಾನೆ. ಆಗಲೇ ಅಲ್ಲಿಗೆ ಒಬ್ಬ ವೃದ್ಧರ ಆಗಮನವಾಗುತ್ತದೆ. ಅವರು ಬಂದವರೇ ತಮ್ಮ ಜೋಳಿಗೆ ಬಿಚ್ಚಿ ಅದರಲ್ಲಿಯ ಪುಸ್ತಕಗಳನ್ನು ಹೊರತೆಗೆದು ಅವನ್ನು ಕೊಂಡುಕೊಳ್ಳುವಂತೆ ಯುವಕನನ್ನು ಕೇಳಿಕೊಳ್ಳುತ್ತಾರೆ.
ಆ ಯುವಕ ಕಠಿಣ ಮಾತುಗಳನ್ನಾಡಿ ಆ ವೃದ್ಧರನ್ನು ಮನೆಯಿಂದ ಹೊರಗೆ ಹಾಕಿಬಿಡುತ್ತಾನೆ. ಮನೆಯ ಹಿರಿಯರಿಗೆ ಈ ಸುದ್ದಿ ತಿಳಿದಾಗ ಅವರು ಆ ಯುವಕನನ್ನು ಬಯ್ದು ಆ ವೃದ್ಧರನ್ನು ಹುಡುಕಿಕೊಂಡು ಬರುವಂತೆ ಹೇಳುತ್ತಾರೆ.
ಯುವಕ, ವೃದ್ಧರನ್ನು ಹುಡುಕುತ್ತ ಊರೆಲ್ಲ ಅಲೆಯುತ್ತಾನೆ, ಅವರು ಕಣ್ಣಿಗೆ ಬೀಳುವುದೇ ಇಲ್ಲ. ಕೊನೆಗೆ ನಿರಾಶನಾಗಿ ಯುವಕ ಊರ ಹೊರಗಿನ ಝರಿಯ ಬಳಿ ಹೋದಾಗ ಅಲ್ಲಿ ಆ ವೃದ್ಧರು ತಾವು ಉಟ್ಟುಕೊಂಡಿದ್ದ ಧೋತರನ್ನು ಒಗೆದು ಒಣಗಲು ಹಾಕಿ ಅಲ್ಲಿಯೇ ಕುಳಿತಿರುತ್ತಾರೆ. ಯುವಕ ಅವರ ಬಳಿ ಹೋಗಿ ಕ್ಷಮೆ ಕೇಳಿ ಅವರನ್ನು ಮನೆಗೆ ಕರೆದುಕೊಂಡು ಬರುತ್ತಾನೆ.
ಮನೆ ಮನೆಗೆ ತಮ್ಮ ಜೋಳಗಿಯಲ್ಲಿ ಕನ್ನಡ ಪುಸ್ತಕಗಳನ್ನು ತುಂಬಿಕೊಂಡು ಹೋಗಿ ಮಾರಾಟ ಮಾಡುತ್ತಿದ್ದ ಆ ಹಿರಿಯ ವ್ಯಕ್ತಿ ಬೇರಾರೂ ಅಲ್ಲ, ಅವರು ಕನ್ನಡದ ಧೀಮಂತರಲ್ಲೊಬ್ಬರಾದ ಗಳಗನಾಥರು. ಅವರನ್ನು ಮೊದಲು ಬಯ್ದು ನಂತರ ಹುಡುಕಾಡಿದ ವ್ಯಕ್ತಿಯೂ ಕನ್ನಡಿಗರಿಗೆ ಪರಿಚಿತರೇ. ಅವರು ಬೀಚಿ (?).

