ಯಾವ ಆಯ್ಕೆಗಳಿಗೆ ಮುಂದಾಗದಂತೆ ಬದುಕುವ ವಿಧಾನವೂ ಒಂದಿದೆ, Living choicelessly ; ಕೇವಲ ಗಮನಿಸುವುದು, ಯಾವ ಆಯ್ಕೆಗೂ ಮುಂದಾಗದಿರುವುದು. ಮತ್ತು ಈ ಆಯ್ಕೆರಹಿತ ಗಮನಿಸುವಿಕೆಯ ಕಾರಣವಾಗಿ ಯಾವುದು ನಿಮಗೆ ಒಳ್ಳೆಯದೋ ಅದು ಸಂಭವಿಸಲು ಶುರುವಾಗುತ್ತದೆ ~ ಓಶೋ ರಜನೀಶ್ । ಕನ್ನಡಕ್ಕೆ: ಚಿದಂಬರ ನರೇಂದ್ರ
ಯಾವಾಗ ನೀವು ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳುತ್ತೀರೋ, ಆಗ ನೀವು ಇಡಿಯಾಗಿ ಇರುವುದಿಲ್ಲ. ನೀವು ಇಡಿಯಾಗಿ (total) ಇದ್ದಿದ್ದರೆ ನಿಮ್ಮೊಳಗೆ ಆಯ್ಕೆಯ ಪ್ರಶ್ನೆಯೇ ಹುಟ್ಟುತ್ತಿರಲಿಲ್ಲ. ನೀವು ಆಯ್ಕೆ ಮಾಡಿಕೊಳ್ಳುತ್ತಿದ್ದೀರಿ ಎಂದರೆ ನಿಮ್ಮ ಮೈಂಡ್ ನ ಒಂದು ಭಾಗ ಒಂದನ್ನು ಬಯಸುತ್ತಿದ್ದೆ ಮತ್ತು ಇನ್ನೊಂದು ಮತ್ತೊಂದನ್ನು ಮತ್ತು ಮೇಜರ್ ಭಾಗದ ಮಾತು ಕೇಳಿ ನೀವು ಆಯ್ಕೆಗೆ ಮುಂದಾಗಿದ್ದೀರಿ.
ಎಲ್ಲ ಆಯ್ಕೆಗಳು ಒಂದು ರೀತಿಯಲ್ಲಿ ಪಾರ್ಲಿಮೆಂಟರಿ ನಿರ್ಧಾರಗಳು. ಒಂದು ಮೈನಾರಿಟಿ ಯಾವುದು ಆಯ್ಕೆಗಳನ್ನು ಒಪ್ಪುತ್ತಿಲ್ಲವೋ ಅದು ಎಂದಾದರೊಮ್ಮೆ ತನ್ನ ಸೇಡು ತೀರಿಸಿಕೊಳ್ಳುತ್ತದೆ, ಯಾವಾಗಲಾದರೂ ಫೈಟ್ ಬ್ಯಾಕ್ ಮಾಡುತ್ತದೆ. ಯಾವಾಗಲಾದರೂ ಅದಕ್ಕೆ ಮೆಜಾರಿಟಿ ಆಗುವ ಅವಕಾಶ ಸಿಕ್ಕರೆ, ಅದು ಹಳೆಯ ಆಯ್ಕೆಯನ್ನ ಒದ್ದೋಡಿಸಿ ಇನ್ನೊಂದು ತೀರ ವಿರುದ್ಧದ ತೀರ್ಮಾನ ತೆಗೆದುಕೊಳ್ಳುತ್ತದೆ. ಆದ್ದರಿಂದಲೇ ಜನ ತೀರ ವಿರುದ್ಧದ ನಿರ್ಧಾರಗಳ ನಡುವೆ ಹೊಯ್ದಾಡುತ್ತಿರುತ್ತಾರೆ. ಇವತ್ತು ಹೊಟ್ಟೆ ಬಿರಿಯುವಂತೆ ತಿನ್ನುವ ಅವರು, ನಾಳೆ ಉಪವಾಸ ಮಾಡುತ್ತ ಡಯಟ್ ಗೆ ಮುಂದಾಗುತ್ತಾರೆ ಹಾಗು ಮಾರನೇ ದಿನ ಮತ್ತೆ ಬೇಸತ್ತು ಹೊಟ್ಟೆ ತುಂಬ ತಿನ್ನುತ್ತಾರೆ. ಆಯ್ಕೆ ಯಾವಾಗಲೂ ಸಮಸ್ಯೆಗಳನ್ನು ಹುಟ್ಚುಹಾಕುತ್ತದೆ.
ಯಾವ ಆಯ್ಕೆಗಳಿಗೆ ಮುಂದಾಗದಂತೆ ಬದುಕುವ ವಿಧಾನವೂ ಒಂದಿದೆ, Living choicelessly ; ಕೇವಲ ಗಮನಿಸುವುದು, ಯಾವ ಆಯ್ಕೆಗೂ ಮುಂದಾಗದಿರುವುದು. ಮತ್ತು ಈ ಆಯ್ಕೆರಹಿತ ಗಮನಿಸುವಿಕೆಯ ಕಾರಣವಾಗಿ ಯಾವುದು ನಿಮಗೆ ಒಳ್ಳೆಯದೋ ಅದು ಸಂಭವಿಸಲು ಶುರುವಾಗುತ್ತದೆ. ಇಲ್ಲಿ ನೀವು ಈಯ್ಕೆ ಮಾಡುವುದಿಲ್ಲವಾದರೂ ಬದುಕು ನಿಮಗಾಗಿ ಆಯ್ಕೆ ಮಾಡಲು ಶುರು ಮಾಡುತ್ತದೆ. ನೀವು ಆಯ್ಕೆ ಮಾಡಲಿಲ್ಲವಾದರೆ ಅಸ್ತಿತ್ವ ನಿಮಗಾಗಿ ತಾನು ಆಯ್ಕೆ ಮಾಡುತ್ತದೆ, ಸಮಸ್ತವೂ ನಿಮ್ಮ ಆಯ್ಕೆಯಲ್ಲಿ ಪಾಲ್ಗೊಳ್ಳುತ್ತದೆ. ಇದು ಸರಿಯಾದ ಆಯ್ಕೆ. ಯಾವಾಗ ಅಸ್ತಿತ್ವ ನಿಮಗಾಗಿ ಆಯ್ಕೆ ಮಾಡುತ್ತದೆಯೋ ಮತ್ತು ನೀವು ವಿನೀತರಾಗಿ ಆ ಆಯ್ಕೆಯನ್ನು ಒಪ್ಪಿಕೊಳ್ಳುತ್ತೀರೋ ಅದು ಸರಿಯಾದ ನಿರ್ಧಾರ. ನೀವು ಆಯ್ಕೆ ಮಾಡುವ ಹುಕಿ ಬಿಟ್ಟು ಬಿಡಿ, ಆ ನಿರ್ಧಾರವನ್ನು ಅಸ್ತಿತ್ವ, ಸಮಸ್ತ (whole) ನಿಮಗಾಗಿ ತೆಗೆದುಕೊಳ್ಳಲಿ.
ಕಷ್ಟಕಾಲದಲ್ಲಿ ತನಗೆ ಸಹಾಯ ಮಾಡಿದ ಮುಲ್ಲಾ ನಸ್ರುದ್ದೀನ್ ಗೆ ಸತ್ಕಾರ ಮಾಡಬೇಕೆಂದು ಸುಲ್ತಾನ ಅವನನ್ನು ರಾಜ ದರ್ಬಾರಕ್ಕೆ ಆಹ್ವಾನಿಸಿದ.
ರಾಜ ಸಭೆಯಲ್ಲಿ ಸುಲ್ತಾನ, “ ನಿನಗೇನು ಬೇಕು? ಹೇಳು “ ಎಂದು ನಸ್ರುದ್ದೀನ್ ನ ಕೇಳಿಕೊಂಡ.
“ 1000 ಬಂಗಾರದ ನಾಣ್ಯ ಕೊಟ್ಟರೆ ಸಾಕು “ ಮುಲ್ಲಾ ತನ್ನ ಬೇಡಿಕೆ ಮಂಡಿಸಿದ.
ಸುಲ್ತಾನನಿಗೆ ಮುಲ್ಲಾನ ಈ ಬೇಡಿಕೆ ಕೇಳಿ ಆಶ್ಚರ್ಯವಾಯ್ತು. “ ನಸ್ರುದ್ದೀನ್ 1000 ಬಂಗಾರದ ನಾಣ್ಯ ತುಂಬ ಹೆಚ್ಚಾಯಿತಲ್ಲವೆ ನಿನ್ನ ಬೇಡಿಕೆ? ಸ್ವಲ್ಲ ಕಡಿಮೆ ಮಾಡಿಕೋ “ ಸುಲ್ತಾನ ಕೇಳಿಕೊಂಡ.
“ ಆಯಿತು ಸುಲ್ತಾನರೆ, 5 ಬಂಗಾರದ ನಾಣ್ಯ ಕೊಡಿ ಹಾಗಾದರೆ “ ಮಲ್ಲಾ ತನ್ನ ಮರು ಬೇಡಿಕೆಯನ್ನು ಮಂಡಿಸಿದ.
ಸುಲ್ತಾನನಿಗೆ ಮತ್ತೆ ಆಶ್ಚರ್ಯವಾಯಿತು. “ ನಸ್ರುದ್ದೀನ್, ಒಮ್ಮೆ 1000 ನಾಣ್ಯ ಕೇಳುತ್ತೀಯ ಇನ್ನೊಮ್ಮೆ 5 ಬಂಗಾರದ ನಾಣ್ಯ ಸಾಕು ಎನ್ನುತ್ತೀಯ? ಈ ಅಂತರ ಬಹಳ ಆಯಿತಲ್ಲವೆ? “
ಮುಲ್ಲಾ ನಸ್ರುದ್ದೀನ್ ಉತ್ತರಿಸಿದ
“ ನಿಜ ಸುಲ್ತಾನರೇ, ಈ ಅಂತರ ಬಹಳ ಜಾಸ್ತಿ. ಆದರೆ ನಾನೇನು ಮಾಡಲಿ “ 1000 ಬಂಗಾರದ ನಾಣ್ಯ ನಿಮ್ಮ ಯೋಗ್ಯತೆ, 5 ಬಂಗಾರದ ನಾಣ್ಯ ನನ್ನ ಯೋಗ್ಯತೆ “
Source : Osho / Let go

