ಝೆನ್ ನಾಲ್ಕನೇಯ ದೃಷ್ಟಿಕೋನವನ್ನು ಹೊಂದಿದೆ. ಮನುಷ್ಯ ಮ್ಯಾಟರ್ ಅಲ್ಲ, ಅವನು ಮ್ಯಾಟರ್ ನ ಧರಿಸಿಕೊಂಡಿರುವಾಗಲೂ. ಮನುಷ್ಯ ಮೈಂಡ್ ಕೂಡ ಅಲ್ಲ ಅವನು ಮೈಂಡ್ ನಿಂದ ಕವರ್ ಆಗಿರುವಾಗಲೂ. ಅವನು ವೈಯಕ್ತಿಕ ಆತ್ಮ ಕೂಡ ಅಲ್ಲ. ಅವನು ಪರಿಪೂರ್ಣ nothingness. । ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಅವರ್ಣನೀಯವನ್ನು ವರ್ಣನೆ ಮಾಡಲು ನಾಲ್ಕು ರೀತಿಗಳಿವೆ. ಮನುಷ್ಯ ಅಪ್ರಜ್ಞಾಪೂರ್ವಕವಾಗಿ ಈ ನಾಲ್ಕು ರೀತಿಗಳ ಮುಖಾಂತರ ಫಿಲಾಸೊಫಿಗಳನ್ನು ಕಟ್ಟಿಕೊಂಡಿದ್ದಾನೆ.
ಆ ನಾಲ್ಕು ರೀತಿಗಳು ಕೂಡುವ ಕ್ರಾಸ್ ರೋಡಿನಲ್ಲಿ ಮನುಷ್ಯ ನಿಂತಿಕೊಂಡಿದ್ದಾನೆ. ಮೊದಲ ದಾರಿ ಭೌತಿಕ ಸ್ಥಿತಿಯದು (matter). ಒಬ್ಬ ನಾಸ್ತಿಕ, ಒಬ್ಬ ವಿಜ್ಞಾನಿ ಈ ದಾರಿಯ ಮೂಲಕ ಪ್ರಯಾಣ ಮಾಡುತ್ತಾನೆ. Man is nothing but a matter, ಚಾರ್ವಾಕರಿಂದ ಹಿಡಿದು ಆಧುನಿಕ ಚಿಂತಕ ಬರ್ಟ್ರಾಂಡ್ ರಸಲ್ ವರೆಗೆ ಎಷ್ಟೋ ಧೀಮಂತರು ಈ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಬಹುತೇಕ ಅರ್ಧಕ್ಕಿಂತ ಹೆಚ್ಚು ಜಗತ್ತು ಕೂಡ ಇದೇ ದಾರಿಯಲ್ಲಿದೆ ಏಕೆಂದರೆ ಕಮ್ಯೂನಿಸಂ ಭೌತಿಕ ಸ್ಥಿತಿಯ ಹೊರತಾಗಿ ಬೇರೆ ಯಾವುದನ್ನೂ ನಂಬುವುದಿಲ್ಲ. ಅವರಿಗೆ ಮೈಂಡ್ ಎನ್ನುವುದು ಒಂದು ಉಪಉತ್ಪನ್ನ ಮಾತ್ರ. ಉಪಉತ್ಪನ್ನ ಎಂದರೆ ನೆರಳು. ಮನುಷ್ಯ ನಾಶವಾದರೆ ಈ ನೆರಳು ಕೂಡ ಮಾಯವಾಗುತ್ತದೆ. ಹುಟ್ಟಿಗೆ ಮುಂಚೆ ಮತ್ತು ಸಾವಿನ ಆಚೆಗೆ ಏನೂ ಇಲ್ಲ. ಹುಟ್ಟು ಮತ್ತು ಸಾವಿನ ನಡುವೆ ನೀವು ಪರಿಪೂರ್ಣರು. ನಿಮಗೆ ಸಾಧ್ಯವಾಗುವುದು ಇಷ್ಟೇ.
ಎರಡನೇಯ ದಾರಿ ಮನುಷ್ಯ, ಮೈಂಡ್ ಮತ್ತು ಮ್ಯಾಟರ್ ಗಳ ನಡುವಿನ ದ್ವಂದ್ವ ಎಂದು ವ್ಯಾಖ್ಯಾನ ಮಾಡುತ್ತದೆ. ಜಗತ್ತಿನ ಬಹುತೇಕ ತತ್ವಜ್ಞಾನಿಗಳು ಈ ದಾರಿಯನ್ನು ಹಿಡಿದಿದ್ದಾರೆ ಏಕೆಂದರೆ ಇಲ್ಲೊಂದು ಸಂಪೂರ್ಣ rational (ತರ್ಕ) ಇದೆ ಎಂದು ಅವರಿಗೆ ಅನಿಸುತ್ತದೆ. ನಮಗೆ ಮನುಷ್ಯನ ಬಗ್ಗೆ ಗೊತ್ತಿರುವ ಪ್ರಕಾರ ಅವನ ದೇಹ matter ನಿಂದ ಕೂಡಿದೆ ಮತ್ತು ಅವನಲ್ಲಿ ಆಲೋಚನೆಗಳಿವೆ ಆದರೆ ಅವು ಭೌತಿಕ ಅಲ್ಲ. ಈ ಸಂಗತಿಗಳನ್ನ ಹೊರಗಿನಿಂದ ಗಮನಿಸಬಹುದು. ಹಾಗಾಗಿ ಮನುಷ್ಯ ಮೂಲಭೂತವಾಗಿ matter ಆದರೆ ಹೆಚ್ಚುವರಿಯಾಗಿ ಅವನಿಗೆ ಮೈಂಡ್ ಎನ್ನುವ ನೆರಳು ಇದೆ. ದೇಹ ತೀರಿಕೊಂಡಾಗ ಮೈಂಡ್ ಕೂಡ ತೀರಿಕೊಳ್ಳುತ್ತದೆ. ಈ ದಾರಿಯಲ್ಲಿ ಕೂಡ ಬದುಕು ಇರುವುದು ಹುಟ್ಟು ಮತ್ತು ಸಾವಿನ ನಡುವೆ ಮಾತ್ರ.
ಮೂರನೇ ಸಾಧ್ಯತೆ ಯಾವುದನ್ನ ಬಹುತೇಕ ಎಲ್ಲ ಧರ್ಮಗಳೂ ಒಪ್ಪಿಕೊಳ್ಳುತ್ತವೆಯೋ ಅದರ ಪ್ರಕಾರ ಮನುಷ್ಯ ಕೇವಲ ಮ್ಯಾಟರ್ ಅಲ್ಲ, ಅಥವಾ ಕೇವಲ ಮೈಂಡ್ ಅಲ್ಲ ಅವನು ಆತ್ಮ (soul) ಕೂಡ ಹೌದು. ಮ್ಯಾಟರ್ ಅವನ ಹೊರಗಿನ ಅಭಿವ್ಯಕ್ತಿ ಮತ್ತು ಆತ್ಮ ಅವನ ಅಂತರಂಗದ ಅಭಿವ್ಯಕ್ತಿ. ಹಾಗು ಮೈಂಡ್ ಈ ಎರಡರ ನಡುವಿನ ಸೇತುವೆಯಂತೆ ಕೆಲಸ ಮಾಡುತ್ತದೆ. ಈ ಮೂರನೇ ದಾರಿಯಲ್ಲಿ ಸಾವಿನ ನಂತರದ ಬದುಕಿನ ಸಾಧ್ಯತೆ ಇದೆ. ಈ ದಾರಿಯನ್ನು ಒಪ್ಪಿಕೊಂಡಿರುವ ಜನ ಈ ದಾರಿಯ ಅಡಿಪಾಯದ ಮೇಲೆ ಪುನರ್ಜನ್ಮ ಎನ್ನುವ ಐಡಿಯಾವನ್ನು ಹುಟ್ಟುಹಾಕಿದ್ದಾರೆ. ಪ್ರತಿ ಜನ್ಮದಲ್ಲೂ ಮನುಷ್ಯ ಬೇರೆ ಬೇರೆ ದೇಹವನ್ನು ಧರಿಸುತ್ತಾನೆ ಆದರೆ ಆತ್ಮ ಮಾತ್ರ ಒಂದೇ ಆಗಿರುತ್ತದೆ.
ಝೆನ್ ನಾಲ್ಕನೇಯ ದೃಷ್ಟಿಕೋನವನ್ನು ಹೊಂದಿದೆ. ಮನುಷ್ಯ ಮ್ಯಾಟರ್ ಅಲ್ಲ, ಅವನು ಮ್ಯಾಟರ್ ನ ಧರಿಸಿಕೊಂಡಿರುವಾಗಲೂ. ಮನುಷ್ಯ ಮೈಂಡ್ ಕೂಡ ಅಲ್ಲ ಅವನು ಮೈಂಡ್ ನಿಂದ ಕವರ್ ಆಗಿರುವಾಗಲೂ. ಅವನು ವೈಯಕ್ತಿಕ ಆತ್ಮ ಕೂಡ ಅಲ್ಲ. ಅವನು ಪರಿಪೂರ್ಣ nothingness. ಈ ನಾಲ್ಕನೇಯ ದೃಷ್ಟಿಕೋನ, ಯಾವುದು ಝೆನ್ ನ ದಾರಿಯೂ ಹೌದು ಇದರ ಪ್ರಕಾರ, ಮನುಷ್ಯ ಬಹುತೇಕ ಒಂದು ಈರುಳ್ಳಿಯಂತೆ. ಒಳಗೆ ಏನೋ ಇದೆ ಎಂದು ಒಂದಾದ ಮೋಲೊಂದರಂತೆ ಸಿಪ್ಪೆ ಸುಲಿಯುತ್ತ ಹೋಗುತ್ತೀರಿ. ಎಲ್ಲವನ್ನೂ ಸುಲಿದ ಮೇಲೆ ಅಲ್ಲಿ ನಿಮಗೆ ಏನೂ ಸಿಗುವುದಿಲ್ಲ. ನಿಮ್ಮ ಕೈಯಲ್ಲಿರುವುದು ಈಗ ಖಾಲೀತನ ಮಾತ್ರ. ಈರುಳ್ಳಿ ಎನ್ನುವುದು ಒಂದರ ಮೇಲೊಂದು ಹೊದ್ದುಕೊಂಡಿರುವ ಸಿಪ್ಪೆಗಳ ಸಮೂಹ ಮಾತ್ರ. ಈ ಸಿಪ್ಪೆಗಳ ಒಳಗೆ ಏನೂ ಇಲ್ಲ, ಇರುವುದು ಖಾಲೀತನ ಮಾತ್ರ. ಈ ಖಾಲಿತನ ಕಣ್ಣಿಗೆ ಕಾಣಿಸುವುದಿಲ್ಲ, ಕೈಗೆ ಸಿಗುವುದಿಲ್ಲ.
ಝೆನ್ ಮನುಷ್ಯನ ಕುರಿತಾದ ಆತ್ಯಂತಿಕ ದೃಷ್ಟಿಕೋನವನ್ನು ಹೊಂದಿದೆ, ಇದನ್ನು ದಾಟವುದು ಸಾಧ್ಯವಾಗುವುದಿಲ್ಲ. ಎಲ್ಲ ಪ್ರಯಾಣವೂ ಇಲ್ಲಿಗೆ ಬಂದು ಕೊನೆಗೊಳ್ಳುತ್ತದೆ. ಒಬ್ಬ SEEKER ನ ತೀರ್ಥಯಾತ್ರೆ ಇಲ್ಲಿಗೆ ಮುಕ್ತಾಯವಾಗುತ್ತದೆ.
ಝೆನ್, ಭೌತಿಕತೆಯಲ್ಲಿ (matter) ನಿಂತು ಬಿಡಬೇಡಿ ಎಂದು ಹೇಳುತ್ತದೆ. Matter ನ ಗೌರವಿಸಿ ಅದು ನಿಮ್ಮನ್ನು ಸಲಹುತ್ತದೆ, ನಿಮ್ಮ ಬಗ್ಗೆ ಕಾಳಜಿ ಮಾಡುತ್ತದೆ. ಝೆನ್, ನೀವು ಮೈಂಡ್ ಕೂಡ ಅಲ್ಲ ಎನ್ನುವುದನ್ನ ನೆನಪಿಸುತ್ತದೆ. ಮೈಂಡ್ ಒಬ್ಬ ಉತ್ತಮ ಸಹಾಯಕ (servant), ಅದನ್ನು ನಿಮ್ಮ ಮಾಸ್ಟರ್ ಮಾಡಿಕೊಳ್ಳಲು ಹೋಗಬೇಡಿ. ಅದನ್ನು ಉಪಯೋಗ ಮಾಡಿ, ಉಪಯೋಗ ಮಾಡಿ ಏಕೆಂದರೆ ನೀವು ಅದನ್ನು ದಾಟಿ ಹೋಗಬೇಕು. ಮೈಂಡ್ ಒಂದು ಏಣಿ ಇದ್ದಂತೆ, ಹತ್ತಿ ಹೋಗಲು ಅದು ಉಪಯೋಗಕ್ಕೆ ಬರುತ್ತದೆ. ಆದರೆ ಅಲ್ಲಿಯೇ ಸಿಕ್ಕಿಹಾಕಿಕೊಳ್ಳಬೇಡಿ.
Öshó / The Miracle~Chapter:1

