ನಿರೂಪಣೆ: ಚಿದಂಬರ ನರೇಂದ್ರ
ಗುಲ್ಜಾರ್ ನಿರ್ದೇಶಿತ ಮಿರ್ಜಾ ಗಾಲೀಬ್ ಟಿ ವಿ ಸೀರಿಯಲ್ ನಲ್ಲಿ ಒಂದು ಪ್ರಸಂಗ ಹೀಗಿದೆ…
ಬಹುದಿನಗಳಿಂದ ಬರಬೇಕಾಗಿದ್ದ ಬಾಕಿ ಕೈ ಗೆ ಬಂದಾಗ ಆ ಹಣ ಏನು ಮಾಡಿದಿರಿ ಎಂದು ಹೆಂಡತಿ, ಮಿರ್ಜಾ ಗಾಲೀಬ್ ನ ವಿಚಾರಣೆ ಮಾಡುತ್ತಿರುತ್ತಾಳೆ.
ಇಷ್ಟು ಹಣ ಅವರಿಗೆ ಕೊಟ್ಟೆ, ಇವರಿಗೆ ಕೊಟ್ಟೆ ಎಂದು ಗಾಲೀಬ್ ವಿವರ ಒಪ್ಪಿಸುತ್ತಾನೆ. ಬಾಕಿ ಹಣ ಏನು ಮಾಡಿದಿರಿ ಎಂದು ಹೆಂಡತಿ ಕೇಳಿದಾಗ , ಬಾಕಿ ಉಳಿದ ಹಣದಲ್ಲಿ ಶರಾಬ್ ಕೊಂಡುಕೊಂಡೆ ಎನ್ನುತ್ತಾನೆ ಗಾಲೀಬ್.
ಇನ್ನೂ ಎಷ್ಟೋ ಮನೆ ಖರ್ಚು ಇತ್ತು ಶರಾಬ್ ಯಾಕೆ ಕೊಂಡುಕೊಂಡಿರಿ ಎನ್ನುತ್ತ ಹೆಂಡತಿ ಸಿಟ್ಟಿಗೆದ್ದಾಗ, ಗಾಲೀಬ್ ಹೇಳುತ್ತಾನೆ…….
ಹುಟ್ಟಿಸಿದ ದೇವರು ಊಟಕ್ಕೆನೋ ಒಂದು ವ್ಯವಸ್ಥೆ ಮಾಡೇ ಮಾಡಿರ್ತಾನೆ, ಆದರೆ ಕುಡಿಯಲಿಕ್ಕೆ ಮಾತ್ರ ನಾವೇ ಏನಾದರೂ ವ್ಯವಸ್ಥೆ ಮಾಡಿಕೊಳ್ಳಬೇಕು.

