ಜೈಲಿನಲ್ಲಿದ್ದ ದೊತೊವಸ್ಕಿ ತನ್ನ ಸಂಬಂಧಿಗೆ ಪತ್ರ ಬರೆದು ಕೇಳಿದ್ದೇನು ಗೊತ್ತಾ? । ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ
ಪ್ರಸಿದ್ಧ ಕವಿ ಲೋರ್ಕಾ, ಮಹಾ ಕಾದಂಬರಿಕಾರ ದೊಸ್ತೊವಸ್ಕಿಯ ಕುರಿತಾದ ಪ್ರಸಂಗವೊಂದನ್ನು ನೆನಪು ಮಾಡಿಕೊಳ್ಳುತ್ತಾನೆ.
ದೊಸ್ತೊವಸ್ಕಿಯನ್ನು ದೂರದ ಸೈಬೇರಿಯನ್ ಜೈಲಿನಲ್ಲಿ ಬಂಧಿಸಿಡಲಾಗಿರುತ್ತದೆ. ಸುತ್ತ ಮುತ್ತೆಲ್ಲ ಕೊರೆಯುವ ಚಳಿ, ದಟ್ಟ ಹಿಮ. ಉಸಿರಾಡುವುದೂ ಕಷ್ಟವಾಗಿರುವಂಥ ಅಸಾಧ್ಯ ವಾತಾವರಣ. ಅಂಥ ಸ್ಥಿತಿಯಲ್ಲಿ ದೊಸ್ತೊವಸ್ಕಿ ತನ್ನ ದೂರದ ಸಂಬಂಧಿಗೆ ಸಹಾಯ ಕೇಳಿ ಪತ್ರ ಬರೆಯುತ್ತಾನೆ.
“Send me books, books, and many more books, so my soul doesn’t die!”
ದೊಸ್ತೊವಸ್ಕಿಯ ದೇಹ ಮರಗಟ್ಟುತ್ತಿತ್ತು, ಆದರೆ ಅವನು ಬೆಚ್ಚಗಾಗಲು ಬೆಂಕಿಯನ್ನು ಕೇಳಲಿಲ್ಲ. ಅವನು ಬಾಯಾರಿಕೆಯಿಂದ ಬಳಲುತ್ತಿದ್ದ, ಆದರೂ ಅವನು ಕುಡಿಯಲು ನೀರು ಕೇಳಲಿಲ್ಲ. ಅವನು ಕೇಳಿದ್ದು ಪುಸ್ತಕಗಳನ್ನು. ಅವನಿಗೆ ಖಂಡಿತವಾಗಿ ಗೊತ್ತಿತ್ತು, ಪುಸ್ತಕಗಳೆಂದರೆ, ಹೃದಯ ಮತ್ತು ಆತ್ಮಗಳ ತುತ್ತತುದಿಯನ್ನೇರುವ ಏಣಿಗಳೆನ್ನುವುದು.

