ಹರ್ಷ ಭೋಗ್ಲೆ, ಇಂಗ್ಲೆಂಡಿನ ಮಾಜಿ ಕ್ರಿಕೆಟ್ ಕ್ಯಾಪ್ಟನ್ ನಾಸಿರ್ ಹುಸೇನ್ ಹೇಳಿದ ಕಥೆಯೊಂದನ್ನ ಹೇಳುತ್ತಾರೆ…… | ಸಂಗ್ರಹ – ನಿರೂಪಣೆ : ಚಿದಂಬರ ನರೇಂದ್ರ
ಒಂದು ಮೂವತ್ತು ಅಡಿ ಉದ್ದ, ಮೂರು ಅಡಿ ಅಗಲದ wooden plank ತೆಗೆದುಕೊಂಡು ನೆಲದ ಮೇಲೆ ಇಟ್ಟು, ಅದರ ಮೇಲೆ ನಡೆದಾಡಲು ಜನರಿಗೆ ಹೇಳಿ. ಜನ ತಮ್ಮ ವ್ಯಕ್ತಿತ್ವ, ಮೂಡ್ ಗೆ ಅನುಗುಣವಾಗಿ ಆ ಪ್ಲ್ಯಾಂಕ್ ಮೇಲೆ ಓಡಾಡುತ್ತಾರೆ. ಕೆಲವರು ಸಮಾಧಾನದಿಂದ ಓಡಾಡಿದರೆ, ಕೆಲವರು ಹಾಡುತ್ತ ಕುಣಿಯುತ್ತ ಓಡಾಡುತ್ತಾರೆ, ಕೆಲವರು ರಿಯಾಂಪ್ ವಾಕ್ಮಾಡಬಹುದು. ಆದರೆ ಎಲ್ಲ ನಿರಾತಂಕವಾಗಿ ಓಡಾಡುತ್ತಾರೆ ಮಾತ್ರ.
ಆದರೆ ಇದೆ wooden plank ನ ಎರಡು ಇಪ್ಪತ್ತು ಮಹಡಿ ಕಟ್ಟಡಗಳ ನಡುವೆ ಸೇತುವೆಯಂತೆ ಇಟ್ಟು ಜನರಿಗೆ ಈಗ ಈ ಪ್ಲ್ಯಾಂಕ್ ಮೇಲೆ ನಡೆಯಲು ಹೇಳಿ. ಎಷ್ಟು ಜನ ಮುಂದೆ ಬರುತ್ತಾರೆ? ಒಮ್ಮೆ ನೀವು ಫಲಿತಾಂಶದ ಬಗ್ಗೆ ಯೋಚಿಸಲು ಶುರು ಮಾಡಿದಿರಾದರೆ ನೀವು ವರ್ತಮಾನದ ಬಗ್ಗೆ ಹೆದರಲು ಶುರು ಮಾಡುತ್ತೀರಿ. ಇದು ಅದೇ wooden plank ಅಲ್ಲವೇ? ನೆಲದ ಮೇಲೆ ಇಟ್ಟಾಗ ಅದರ ಮೇಲೆ ಆರಾಮಾಗಿ ಓಡಾಡಿದವರು ಈಗ ಯಾಕೆ ಆತಂಕಿತರಾಗಿದ್ದಾರೆ?
ಒಂದು Big Day ದಿನ ಪಿಚ್ ಗೆ ಇಳಿಯುವ ಕ್ರಿಕೆಟ್ ಆಟಗಾರರು ಹೀಗೆ ಆತಂಕಿತರಾಗಬಹುದಾ? ಅವರ ಕಣ್ಣ ಮುಂದೆ ರಿಸಲ್ಟ ನ ಭಯ ಇರುವಾಗ, ಲಕ್ಷಾಂತರ ಜನರ ಕನಸುಗಳು ಅವರ ಮನಸ್ಸಿನಲ್ಲಿರುವಾಗ ಅವರು ನಿರಾಂತಕದಿಂದ ಆಡುವುದು ಸಾಧ್ಯವಾ? ಸಾಧ್ಯ, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಅಂಥವಿರಿಗೆ ಸಾಧ್ಯ. ಇದು just another match ಎಂದು ಆಟ ಆಡುವುದು ನಿಜವಾದ ಆಟಗಾರರಿಗೆ ಮಾತ್ರ ಸಾಧ್ಯ.

