ಶರಣಾಗತಿ ಸಂಭವಿಸುವ ಘಳಿಗೆ : ಓಶೋ ವ್ಯಾಖ್ಯಾನ

ದಿವ್ಯದ ಹಾಜರಾತಿ ನಿಮಗೆ ಕಂಡ ಕ್ಷಣದಲ್ಲಿ, ಅಜ್ಞಾತದ ಅನುಭವವನ್ನು ನಿಮ್ಮ ದೇಹದೊಳಗೆ ಅನುಭವಿಸಿದ ಗಳಿಗೆಯಲ್ಲಿ – ಮಾಸ್ಟರ್ ನ ಕಣ್ಣುಗಳಲ್ಲಿ ತೆರೆದ ಬಾಗಿಲು ಕಾಣಿಸಿದಾಗ, ಶರಣಾಗತಿ ತಾನೇ ತಾನಾಗಿ ಸಂಭವಿಸಿಬಿಡುತ್ತದೆ… | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಮಾಸ್ಟರ್ ವ್ಯಕ್ತಿಯಲ್ಲ (Person) , ಮಾಸ್ಟರ್ ಒಂದು ಹಾಜರಾತಿ (Presence). ಹಾಜರಾತಿಯೊಂದಿಗೆ ಸಂಬಂಧ ಸ್ಥಾಪಿಸಿಕೊಳ್ಳುವುದು ಹೇಗೆ ಸಾಧ್ಯ? ನೀವು ಅದನ್ನು ನೋಡಬಹುದು ಮತ್ತು ಅದರೊಳಗೆ ಕರಗಿ ಹೋಗಬಹುದು ಅಥವಾ ಅದು ನಿಮಗೆ ಕಾಣಿಸದೇ ಹೋಗಬಹುದು. ಆದರೆ ಅದರ ಜೊತೆ ಸಂಬಂಧ ಮಾತ್ರ ಸಾಧ್ಯವಿಲ್ಲ. ಮಾಸ್ಟರ್ ಮತ್ತು ಶಿಷ್ಯರ ನಡುವೆ ಸಂಬಂಧ ಅಸಾಧ್ಯ. ಇಲ್ಲಿ ಸಂಬಂಧ ಎನ್ನುವ ಶಬ್ದವೇ ಅಪ್ರಸ್ತುತ. ಹೊರಗಿನವರಿಗೆ ಇದು ಸಂಬಂಧದ ಹಾಗೆ ಕಾಣಬಹುದು ಆದರೆ ಹೊರಗಿನವರು ಇದನ್ನು ತಿಳಿದುಕೊಳ್ಳುವ ವ್ಯಾಪ್ತಿಯಲ್ಲಿ ಇಲ್ಲ.

ಶಿಷ್ಯನಿಗೆ ಮಾಸ್ಟರ್ ಜೊತೆಗಿನ ಸಂಬಂಧದ ಬಗ್ಗೆ ಗೊತ್ತಿಲ್ಲ, ಅವನು ಸುಮ್ಮನೇ ಮಾಸ್ಟರ್ ಜೊತೆ ಒಂದಾಗಿದ್ದಾನೆ. ಮಾಸ್ಟರ್ ಗೆ ಶಿಷ್ಯನ ಜೊತೆಗಿನ ಸಂಬಂಧದ ಬಗ್ಗೆ ಗೊತ್ತಾಗುವುದು ಹೇಗೆ ಸಾಧ್ಯ? He is not. He is disappeared, ಆದ್ದರಿಂದಲೇ ಅವನು ಮಾಸ್ಟರ್. ಮಾಸ್ಟರ್ ವ್ಯಕ್ತಿಯಲ್ಲ, ಹಾಜರಾತಿ. ಮತ್ತು ಹಾಜರಾತಿಯೊಂದಿಗೆ ಎಂಥ ಸಂಬಂಧ ಸಾಧ್ಯ? ಹಾಜರಾತಿಯನ್ನು ಗುರುತಿಸಿದ ಕೂಡಲೇ ನೀವು ಅದರೊಳಗೆ ಕರಗಿಹೋಗಿಬಿಡುತ್ತೀರಿ, ಒಂದಾಗಿಬಿಡುತ್ತೀರಿ, ಮಾಯವಾಗಿಬಿಡುತ್ತೀರಿ, ಕಾಣೆಯಾಗಿಬಿಡುತ್ತೀರಿ.

ಮಾಸ್ಟರ್ ಒಂದು ಬಾಗಿಲು, ಅಜ್ಞಾತದ ಕುರಿತಾದ ಸುಳಿವು (a gesture of unknown), ಕೈ ಬೀಸಿ ಕರೆಯುತ್ತಿರುವ ಬೆಳಕು, ಆದರೆ ವ್ಯಕ್ತಿ ಮಾತ್ರ ಖಂಡಿತ ಅಲ್ಲ. ಮಾಸ್ಟರ್, ತೆರೆದ ಬಾಗಿಲು, ನಿಗೂಢ ಖಾಲಿಯೊಳಗಿಂದ (wilderness) ಬರುತ್ತಿರುವ ದನಿ, ಒಂದು ಪ್ರಚೋದನೆ, ದಿವ್ಯದ ಕಡೆಗಿನ ಸೆಳೆತ, ಒಂದು ಆಹ್ವಾನ, ಆದರೆ ವ್ಯಕ್ತಿ ಮಾತ್ರ ಅಲ್ಲವೇ ಅಲ್ಲ.

ಆದ್ದರಿಂದ ನಾವು ಮೊದಲು ತಿಳಿದುಕೊಳ್ಳಬೇಕಾದ ವಿಷಯ ಏನೆಂದರೆ, ಮಾಸ್ಟರ್ – ಶಿಷ್ಯ ಸಂಬಂಧ ಎನ್ನುವುದು ಒಂದು ತಪ್ಪು ಬಳಕೆಯ ಪದ. ಅವರು ಜೊತೆಯಲ್ಲಿ ಇರುತ್ತಾರೆ ಆದ್ದರಿಂದ ಅದು ಹೊರಗಿನವರಿಗೆ ಸಂಬಂಧದ ಹಾಗೆ ಕಾಣುತ್ತದೆ , ಆದರೆ ಇದು ಸಹವಾಸ (togetherness) ಅಲ್ಲ, ಇದು ಒಂದಾಗುವುದು (union) ಅಲ್ಲ, ಇದು ಏಕತ್ವ (unity) ; ಒಳಗಿನ ಅಸ್ತಿತ್ವದಲ್ಲಿ ಅವರು ಇಬ್ಬರಲ್ಲ, ಒಬ್ಬರೇ.

ಎರಡನೇಯ ವಿಷಯ, ಶಿಷ್ಯ ಮಾಸ್ಟರ್ ಗೆ ಶರಣಾಗುವುದಿಲ್ಲ. ಅವನ್ನಾದರೂ ಹಾಗೆ ಮಾಡಿದ್ದಾದರೆ, ಇದು ಒಂದು ಪರಿಪಾಠದ( conditioning) ಭಾಗ ಅಷ್ಟೇ, ಆಗ ಅವನು ಇಡೀ ಪಾಯಿಂಟ್ ನ್ನೇ ಮಿಸ್ ಮಾಡಿಕೊಂಡು ಬಿಡುತ್ತಾನೆ. ಶರಣಾಗತಿ ಮಾಡಿಕೊಳ್ಳುವುದಲ್ಲ, ಅದು ತನ್ನಿಂದ ತಾನೇ ಆಗುವಂಥದು ; ನೀವು ಶರಣಾಗುತ್ತಿರುವುದನ್ನು ನೀವು ಅನುಭವಿಸುತ್ತೀರ.

ದಿವ್ಯದ ಹಾಜರಾತಿ ನಿಮಗೆ ಕಂಡ ಕ್ಷಣದಲ್ಲಿ, ಅಜ್ಞಾತದ ಅನುಭವವನ್ನು ನಿಮ್ಮ ದೇಹದೊಳಗೆ ಅನುಭವಿಸಿದ ಗಳಿಗೆಯಲ್ಲಿ – ಮಾಸ್ಟರ್ ನ ಕಣ್ಣುಗಳಲ್ಲಿ ತೆರೆದ ಬಾಗಿಲು ಕಾಣಿಸಿದಾಗ, ಶರಣಾಗತಿ ತಾನೇ ತಾನಾಗಿ ಸಂಭವಿಸಿಬಿಡುತ್ತದೆ. ಶರಣಾಗತಿ ಎನ್ನುವುದು ನೀವಾಗಿಯೇ ಮಾಡುವ ಸಂಗತಿ ಅಲ್ಲ, ಹಾಗೇನಾದರೂ ಮಾಡಿದರೆ ನೀವು ಶರಣಾಗತಿಯಿಂದ ತಪ್ಪಿಸಿಕೊಂಡುಬಿಡುತ್ತೀರಿ. ಬುದ್ಧಿಪೂರ್ವಕ ಶರಣಾಗತಿ ಯಾವ ಶರಣಾಗತಿಯೂ ಅಲ್ಲ. ಆಗ ಅದು ಮೈಂಡ್ ನ ಕಂಡಿಷನಿಂಗ್ ಮಾತ್ರ.

ಈ ಮಾಡುವವ (doer) ಎಂದರೆ ಯಾರು? ಅದು ಮೈಂಡ್ ಮಾತ್ರ. ಮಾಡುವುದು ಅಥವಾ ಮಾಡದೇ ಇರುವುದು ಅದು ಏನೇ ಇರಲಿ, ಆಗ ನೀವು ಮಾಡುವವ (doer) ಮಾತ್ರ. ಮಾಡದೇ ಇರುವುದು ಎಂದರೆ ಕೂಡ ಒಂದು ರೀತಿಯಲ್ಲಿ ಕೂಡ ಮಾಡುವುದೇ.

ಒಬ್ಬ ವ್ಯಕ್ತಿ ಶರಣಾಗುತ್ತಾನೆ, ಶರಣಾಗುವ ಪ್ರಯತ್ನ ಮಾಡುತ್ತಾನೆ, ಶರಣಾಗಲು ಹಲವಾರು ಕ್ರಮಗಳಿಗೆ ಮುಂದಾಗುತ್ತಾನೆ. ಇನ್ನೊಬ್ಬ ವ್ಯಕ್ತಿ ತನ್ನನ್ನು ತಾನು ಹಿಡಿದಿಟ್ಟುಕೊಳ್ಳುತ್ತಾನೆ, ಶರಣಾಗತಿಯಿಂದ ಹಿಂದೆ ಸರಿಯುತ್ತಾನೆ. ಈ ಇಬ್ಬರು ವ್ಯಕ್ತಿಗಳೂ ಒಂದೇ, ಇಬ್ಬರೂ ಪಾಯಿಂಟ್ ಮಿಸ್ ಮಾಡಿಕೊಳ್ಳುತ್ತಿದ್ದಾರೆ.

ಶರಣಾಗತಿ ತಾನಾಗಿಯೇ ಸಂಭವಿಸುವಂಥದು. ಶಿಷ್ಯ ಸುಮ್ಮನೇ ಕರಗಿಹೋಗುತ್ತಿದ್ದಾನೆ, ಕಾಣೆಯಾಗುತ್ತಿದ್ದಾನೆ (disappearing), ಅವನ ಸುತ್ತಲಿನ ಗಡಿಗಳು ಮಸುಕಾಗುತ್ತಿವೆ, ಅವನು ಮೋಡದಂತಾಗುತ್ತಿದ್ದಾನೆ, ಅವನು ನಿಹಾರಿಕೆ (nebula) ಆಗುತ್ತಿದ್ದಾನೆ. ಬಹಳ ಧೈರ್ಯ ಬೇಕಾಗುತ್ತದೆ ಹೀಗೆಲ್ಲ ಆಗಲು.


Source – Osho : The Revolution / Chapter:: 8

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.