ಶ್ರೀಧರ ಪಂತ್ ಹೆಸರಿನ ಅಪ್ಪಟ ಮನುಷ್ಯ… । Coffeehouse ಕತೆಗಳು

ಜಾತಿ ವಿನಾಶದ ಸಂಘರ್ಷದ ಬಗೆಗಿನ ಹಲವಾರು ಅಪರೂಪದ ಘಟನೆಗಳನ್ನ, ಅಂಕಿ ಅಂಶಗಳನ್ನ, ಸೂರಜ್ ಯೇಂಗ್ಡೆ ತಮ್ಮ ಹೊಸ ಪುಸ್ತಕ Caste Matters ಲ್ಲಿ ದಾಖಲಿಸಿದ್ದಾರೆ. ಅವುಗಳಲ್ಲೊಂದು, ಇಲ್ಲಿದೆ… । ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ

ಶ್ರೀಧರ್ ಪಂತ್ ಅನ್ನೋ ಒಬ್ಬ ವ್ಯಕ್ತಿ ಅಂಬೇಂಡ್ಕರ್ ರ ಅತ್ಯಂತ ನಿಷ್ಠಾವಂತ ಅನುಯಾಯಿ. ಪುಣೆಯಲ್ಲಿ ಅಕ್ಟೋಬರ್ 2, 1927 ರಂದು ನಡೆದ ಶೋಷಿತ ವರ್ಗದ ವಿದ್ಯಾರ್ಥಿಗಳ ಸಮ್ಮೇಳನದಲ್ಲಿ ಅಂಬೇಡ್ಕರ್ ಜೊತೆ ಶ್ರೀಧರಪಂತ ಕೂಡ ಮಾತನಾಡ್ತಾರೆ. ಅಂದು ಸಂಜೆ ಬಾಬಾಸಾಹೇಬರ ಗೌರವಾರ್ಥ ತಮ್ಮ ಮನೆಯಲ್ಲಿ ಚಹಾ ಪಾರ್ಟಿ ಏರ್ಪಾಡು ಮಾಡ್ತಾರೆ. ಮುಂದೇ ಇದೇ ಸಂಪ್ರದಾಯ ಮುಂದುವರೆಸಿ ತಮ್ಮ ಮನೆಯಲ್ಲಿ ಅಸ್ಪೃಶ್ಯರೊಂದಿಗೆ ಸಹಭೋಜನಗಳನ್ನ ಏರ್ಪಾಟು ಮಾಡ್ತಾರೆ. ತಮ್ಮ ಮನೆಯ ಬಾಗಿಲಲ್ಲಿ ‘ಚಾತುರ್ವರ್ಣ ವಿಧ್ವಂಸಕ ಸಮಿತಿ’ ಅಂತ ಬೋರ್ಡ್ ಬರೆಸಿ ಹಾಕ್ತಾರೆ. ಇದು ಪ್ರಬಲ ಕೋಮಿನವರಾದ ಅವರ ಮನೆಯವರಿಗೆ ಇಷ್ಟ ಆಗಲ್ಲ. ಅವರ ಪ್ರಸಿದ್ಧ ಸಂಪ್ರದಾಯವಾದಿ ಅಪ್ಪನ ಹೆಸರಿನಲ್ಲಿದ್ದ ಟ್ರಸ್ಟ್ ನ ಟ್ರಸ್ಟಿಗಳಿಗೆ ಇದು ಇಷ್ಟ ಆಗಲ್ಲ. ಪಂತರು ಮನೆಯವರಿಂದ, ಬಂಧುಗಳಿಂದ ತೀವ್ರ ಅವಮಾನ ಎದುರಿಸಬೇಕಾಗುತ್ತದೆ. ಅವರ ಅಪ್ಪ ಶುರು ಮಾಡಿದ್ದ ಪತ್ರಿಕೆ ಪಂತರ ವಿರುದ್ಧ ಅವಹೇಳನಕಾರಿ ಲೇಖನ ಪ್ರಕಟ ಮಾಡುತ್ತದೆ. ಪಂತರ ವಿರುದ್ಧ ಕೋರ್ಟಲ್ಲಿ ಕೇಸು ಹಾಕಲಾಗತ್ತೆ. ಈ ಎಲ್ಲದರಿಂದ ತೀವ್ರ ಮಾನಸಿಕ ಕ್ಷೋಭೆ ಅನುಭವಿಸಿದ ಪಂತರು ಮುಂಬಯಿ-ಪುಣೆ ಎಕ್ಸಪ್ರೆಸ್ ರೈಲಿನ ಎದುರು ಹಾರಿ ಈ ಎಲ್ಲದರ ವಿರುದ್ಧ ತಮ್ಮ ಪ್ರತಿಭಟನೆಯನ್ನ ದಾಖಲು ಮಾಡುತ್ತಾರೆ.

ಸಾಯುವ ಮುನ್ನ ಪಂತರು ಕೊನೆಯ ಬಾರಿಗೆ ಬಾಬಾ ಸಾಹೇಬರಿಗೆ ಒಂದು ಪತ್ರ ಬರೀತಾರೆ. ಆ ಪತ್ರ 29 ಜೂನ್, 1928 ರಂದು ಸಮತಾ ದಲ್ಲಿ ಪ್ರಕಟ ಆಗ್ತದೆ. ಆ ಪತ್ರ ಹೀಗಿದೆ,

Before the letter reaches your hand, the news of (my) leaving the world would have(reached) your ears. In order to advance the work of your ‘Samaj -Samata-Sangh’ educated and social reformist youth need to be attracted to the movement. I am extremely delighted to see your persistent efforts in this and I am confident that god will bless you with success. If the Maharashtrian youth take this cause, then the problem of untouchability will be resolved in merely 5 years. To convey the grievances of my depressed classes brothers to God Krishna, I am going ahead. Please convey my regards to friends. With regards, Sincerely,

Yours Truly,
Shridhar Pant
25/5/28

ಹೀಗೊಂದು ಎದೆಯೊಡೆಯುವಂಥ ಪತ್ರವನ್ನ ಬಾಬಾಸಾಹೇಬರಿಗೆ ಬರೆದು ತನ್ನ ಈ ಲೋಕದ ಯಾತ್ರೆ ಮುಗಿಸಿದ ಶ್ರೀಧರ ಪಂತ್ ಬೇರಾರೂ ಅಲ್ಲ, ‘ಲೋಕಮಾನ್ಯ’ರೆಂದು ಹೆಸರಾದ ಬಾಲ ಗಂಗಾಧರ ತಿಲಕರ ಮಗ.
‘ಚಾತುರ್ವರ್ಣ ವಿಧ್ವಂಸಕ ಸಮಿತಿ’ ಅಂತ ಆತ ಬೋರ್ಡ್ ಬರೆಸಿ ಹಾಕಿದ ಮನೆಯ ಹೆಸರು ‘ ಲೋಕಮಾನ್ಯ’

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.