ಬಹುಜನರ ಸ್ಫೂರ್ತಿ ಸ್ರೋತ ಸೆಲೆಯೊಡೆದ ಘಟನೆ ದಾಖಲಾಗಿರೋದು ಹೀಗೆ… । ಚಿದಂಬರ ನರೇಂದ್ರ
ಪಂಜಾಬಿನ ಚಮ್ಮಾರ ಕುಟುಂಬದಲ್ಲಿ ಹುಟ್ಟಿ, B.Sc ಪದವಿಧರನಾದ ಒಬ್ಬ ಯುವಕನಿಗೆ 1958 ರಲ್ಲಿ ಪುಣೆಯ DRDO ದಲ್ಲಿ ಲ್ಯಾಬ್ ಅಸಿಸ್ಟಂಟ್ ಕೆಲಸ ಸಿಗುತ್ತದೆ. ಅಲ್ಲಿನ ಅಧಿಕಾರಿಗಳು ಒಮ್ಮೆ ಜ್ಯೋತಿಬಾ ಫುಲೆಯವರ ಜಯಂತಿಗೆ ನೀಡಲಾಗುತ್ತಿದ್ದ ರಜೆಯನ್ನು ರದ್ದುಗೊಳಿಸಿಬಿಡುತ್ತಾರೆ. ಇದರಿಂದಾಗಿ ಸಿಟ್ಚಿಗೆದ್ದ ಆ ಯುವಕ ತನ್ನ ಸಹೋದ್ಯೋಗಿಗಳೊಡನೆ ಸೇರಿ ಅಧಿಕಾರಿಗಳ ವಿರುದ್ಧ ತೀವ್ರ ಪ್ರತಿಭಟನೆ ಮಾಡಿ ಮತ್ತೆ ಆ ರಜೆಯನ್ನು ಕಾಯಂ ಗೊಳಿಸುತ್ತಾನೆ. ಇದೇ ಘಟನೆಯಿಂದ ಪ್ರೇರಿತನಾಗಿ ಆ ಯುವಕ , ಬಾಬಾ ಸಾಹೇಬ ಅಂಬೇಡ್ಕರ್ ಅವರು ಬರೆದ Annihilation of Caste ಓದುತ್ತಾನೆ. ಮುಂದೆ ಇದೇ ಯುವಕ ಬಾಬಾಸಾಹೇಬರ ವಿಚಾರಧಾರೆಗೆ ತನ್ನನ್ನು ತಾನು ಸಮರ್ಪಿಸಿಕೊಂಡು ದಲಿತ ಬಹುಜನರ ಸಂಘಟನೆ ಮಾಡಿ ಒಂದು ದೊಡ್ಡ ಆಂದೋಲನವನ್ನೇ ಹುಟ್ಟುಹಾಕುತ್ತಾನೆ.
ಈ ಯುವಕ ಬೇರಾರೂ ಅಲ್ಲ, ಮುಂದೆ ಲಕ್ಷಾಂತರ ಬಹುಜನರಿಗೆ ಸ್ಪೂರ್ತಿಯ ಸೆಲೆಯಾದವರು, ಜನರಿಂದ ಮಾನ್ಯವರ ಕಾಂಶಿರಾಮ್ ಸಾಹೇಬ್ ಎಂದು ಗುರುತಿಸಲ್ಪಟ್ಟವರು. ಹೀಗೆ ಮಾನ್ಯವರ ಕಾಂಶಿರಾಮ್ ರ ಪ್ರತಿಭಟನೆಯ ಹುಟ್ಟನ್ನು ಗುರುತಿಸುತ್ತಾರೆ ಅವರ ಜೀವನ ಚರಿತ್ರೆ ಬರೆದ ಬದ್ರಿನಾರಾಯಣ ಅವರು.

