ಒಂದಿಲ್ಲ ಒಂದು ರೀತಿಯಲ್ಲಿ ಭಾರತೀಯ ಭಕ್ತಿ ಪಂಥಗಳು ಪರಸ್ಪರ ಹೆಣೆದುಕೊಂಡಿವೆ ಮತ್ತು ಈ ಪಂಥಗಳ ನಡುವೆ ಪರಸ್ಪರ ಕೊಡು ಕೊಳ್ಳುವಿಕೆ ನಿರಂತರವಾಗಿ ನಡೆದಿರುತ್ತದೆ. ಈ ಕುರಿತಾದ ಒಂದು ಅಪರೂಪದ ಸಂಗತಿಯನ್ನು ಚಿಂತಕ ನಟರಾಜ ಬೂದಾಳ ಅವರು ಹೀಗೆ ದಾಖಲು ಮಾಡಿದ್ದಾರೆ । ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ
ಆದಿಮೂರ್ತಿ ಅಲ್ಲಮಪ್ರಭೂ
ಮುಲ್ಲ ಮಹಮ್ಮದ ರಸೂಲಿಲ್ಲ ಬಹುಪರಾಕ್
ಇದು ತಿಂಥಿಣಿ ಮೋನಪ್ಪಯ್ಯನಿಗೆ ಹೇಳುವ ಪರಾಕು. ಸೂಫಿ ಪರಂಪರೆಗೂ ಅಲ್ಲಮಪ್ರಭುವಿಗೂ ಒಡನಾಟವಿದೆ. ಅಲ್ಲಮನ ತೋರು ಗದ್ದುಗೆಗಳೆಲ್ಲ ಸೂಫಿ ಗದ್ದುಗೆಗಳ ಮಾದರಿಯಲ್ಲಿವೆ. ಹಾಗಾಗಿ ಅಲ್ಲಮ ಪರಂಪರೆಯನ್ನು ಸೂಫಿ ಪರಂಪರೆಯನ್ನಾಗಿ ನೋಡುವ ನೋಟವೊಂದನ್ನು ಗುರುತಿಸಬಹುದು. ಸೂಫಿ ಮತ್ತು ಕನ್ನಡದ ಒಡನಾಟ ಇಂದಿಗೂ ಅನಿರ್ಬಾಧಿತವಾಗಿ ಮುಂದುವರೆದಿದೆ ಎನ್ನಿಸುವುದಕ್ಕೆ ಮೇಲಿನ ಉಗ್ಗಡಿಸುವಿಕೆಯನ್ನು ಈಗಲೂ ತಿಂಥಿಣಿ ಮೋನಪ್ಪಯ್ಯನ ಗದ್ದುಗೆಯಲ್ಲಿ ಕೇಳಬಹುದು. ಸೂಫಿ ಗದ್ದುಗೆಗಳ ಮೇಲೆ ಅಲ್ಲಮ ಎಂಬ ಗೌರವ ಸೂಚಕ ಪದವೊಂದು ಬಹುಪಾಲು ಎಲ್ಲಕಡೆಯೂ ಇದೆ.

