ಘನತೆ ( Grace ) : ಓಶೋ 365 Day#14

ಘನತೆಯ ಕಾರಣವಾಗಿ ಚೆಲುವು
ಘನತೆ, ಸರಳ ವಾಗಿ ಹೇಳುವುದಾದರೆ, ಸಂಪೂರ್ಣ ಪ್ರಶಾಂತತೆಯನ್ನು ಸುತ್ತುವರೆದಿರುವ ಪ್ರಭಾವಳಿ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ನೀವು ಸಹಜವಾಗಿ, ಸ್ವಾಭಾವಿಕವಾಗಿ ಮೂವ್ ಮಾಡುವಿರಾದರೆ, ಪ್ರತಿ ‘ಕ್ಷಣ’ ತಾನು ಹೇಗಿರಬೇಕೆನ್ನುವುದನ್ನು ತಾನೇ ನಿರ್ಧರಿಸುತ್ತದೆ. ಈ ಕ್ಷಣ ಮುಂದಿನ ಕ್ಷಣ ಹೇಗಿರಬೇಕೆನ್ನುವುದನ್ನ ನಿರ್ಧರಿಸುವುದಿಲ್ಲ ಆಗ ನೀವು ಮುಕ್ತವಾಗಿರುತ್ತೀರ. ಮುಂದಿನ ಕ್ಷಣ ತನ್ನ ಅಸ್ತಿತ್ವವನ್ನು ತಾನೇ ನಿರ್ಧರಿಸುತ್ತದೆ ; ನಿಮ್ಮದು ಯಾವ ಪ್ಲಾನ್ ಇಲ್ಲ, ಯಾವ ಪೂರ್ವನಿರ್ಧಾರಿತ ಯೋಜನೆಯಿಲ್ಲ, ಯಾವ ನಿರೀಕ್ಷೆಯಿಲ್ಲ.

ಈ ದಿನ ಮಾತ್ರ ಸಾಕು ; ನಾಳೆಗಾಗಿ ಯಾವ ಪ್ಲಾನ್ ಮಾಡಬೇಡಿ, ಅಥವಾ ಮುಂದಿನ ಕ್ಷಣಕ್ಕಾಗಿ ಕೂಡ. ಇವತ್ತು ಮುಗಿದ ಮೇಲೆ ನಾಳೆ ಬರುತ್ತದೆ, ತನ್ನ ತಾಜಾತನದಲ್ಲಿ, ತನ್ನ ಮುಗ್ಧತೆಯಲ್ಲಿ, ಯಾವ ತಂತ್ರಗಳ (manipulator) ಸಹಾಯ ಇಲ್ಲದೇ. ಅದು ತನ್ನದೇ ಆದ ಷರತ್ತುಗಳ ಮೇಲೆ ತೆರೆದುಕೊಳ್ಳುತ್ತದೆ ಯಾವ ಹಿನ್ನೆಲೆಯ ಪ್ರಭಾವವಿಲ್ಲದೆ. ಇದು ಘನತೆ. ಮುಂಜಾನೆ ಅರಳುವ ಹೂವನ್ನು ಗಮನಿಸಿ. ಸುಮ್ಮನೇ ಗಮನಿಸುತ್ತ ಹೋಗಿ…. ಇದು ಘನತೆ. ಹೂವಿನ ಅರಳುವಿಕೆಯಲ್ಲಿ ಯಾವ ಪ್ರಯಾಸವಿಲ್ಲ, ಯಾವ ಪ್ರಯತ್ನವಿಲ್ಲ – ಹೂವು ಪ್ರಕೃತಿಗೆ ಅನುಗುಣವಾಗಿ ಅರಳುತ್ತ ಹೋಗುತ್ತದೆ. ಅಥವಾ ಬೆಕ್ಕು, ನಿರಾಯಾಸದಿಂದ ನಿದ್ದೆಯಿಂದೇಳುವುದನ್ನ ಗಮನಿಸಿ, ಆಗ ಆದರ ಸುತ್ತ ಇರುವ ಗ್ರೇಸ್ ನ ಗಮನಿಸಿ. ಇಡೀ ಪ್ರಕೃತಿ ತನ್ನದೇ  ಆದ ಗ್ರೇಸ್ ನಿಂದ ತುಂಬಿಕೊಂಡಿದೆ. ಆದರೆ ನಾವು ಮಾತ್ರ ಈ ಘನತೆಯನ್ನ ಕಳೆದುಕೊಂಡುಬಿಟ್ಟಿದ್ದೇವೆ ನಮ್ಮೊಳಗಿರುವ ವಿಭಜನೆಯ ಕಾರಣವಾಗಿ.

ಆದ್ದರಿಂದ ಸುಮ್ಮನೇ ಮೂವ್ ಆಗಿ, ಪ್ರತಿ ಕ್ಷಣ ತನ್ನ ನಿರ್ಧಾರಗಳನ್ನು ತಾನೇ ಮಾಡಲಿ, ನೀವು ಅವನ್ನು ಮ್ಯಾನೇಜ್ ಮಾಡಲು ಮುಂದಾಗಬೇಡಿ. ಇದನ್ನೇ ನಾನು Let go ಎನ್ನುವುದು. ಮತ್ತು ಈ ಕಾರಣವಾಗಿಯೇ ಎಲ್ಲವೂ ತಾನೇ ತಾನಾಗಿ ಸಂಭವಿಸುತ್ತದೆ. ಹೀಗಾಗುವುದಕ್ಕೆ ಒಂದು ಅವಕಾಶ ಮಾಡಿಕೊಡಿ.

ಒಂದು ದಿನ, ಝೆನ್ ಮಾಸ್ಟರ್, ತನ್ನ ಐವರು ಶಿಷ್ಯರು ದಾರಿಯಲ್ಲಿ ಸೈಕಲ್ ಮೇಲೆ  ಬರುತ್ತಿರುವುದನ್ನ ಗಮನಿಸಿದ. ಅವರು ಸೈಕಲ್ ನಿಂದ ಇಳಿದೊಡನೆ ನೇರವಾಗಿ  ಅವರ ಹತ್ತಿರ ಹೋಗಿ ಪ್ರಶ್ನೆ ಮಾಡಿದ. “ ನೀವು ಯಾಕೆ ಸೈಕಲ್ ಮೇಲೆ ಪ್ರಯಾಣ ಮಾಡುತ್ತಿದ್ದೀರಿ? “

ಮೊದಲ ಶಿಷ್ಯ ಉತ್ತರಿಸಿದ. “ ಆಲೂಗಡ್ಡೆ ಮೂಟೆ ಬೆನ್ನ ಮೇಲೆ ಹೊತ್ತು ತರುವುದು ಕಷ್ಟ ಮಾಸ್ಟರ್ ಅದಕ್ಕೇ ಸೈಕಲ್ ಉಪಯೋಗ ಮಾಡುತ್ತಿದ್ದೀನಿ”

“ ಜಾಣ ನೀನು” ಮಾಸ್ಟರ್ ಉತ್ತರಿಸಿದರು. “ವಯಸ್ಸಾದ ಮೇಲೆ ನೀನು, ನನ್ನ ಹಾಗೆ ಬೆನ್ನು ಬಾಗಿಸಿಕೊಂಡು ಓಡಾಡಬೇಕಿಲ್ಲ”

ಎರಡನೇಯ ಶಿಷ್ಯ ಉತ್ತರಿಸಿದ “ ದಾರಿ ಬದಿಯ ಗಿಡ ಮರಗಳು, ಹೊಲ ಗದ್ದೆಗಳನ್ನು ನೋಡುವುದೆಂದರೆ ನನಗೆ ಖುಶಿ ಮಾಸ್ಟರ್, ಅದಕ್ಕೇ ಸೈಕಲ್ ಹತ್ತಿ ವಿಹಾರಕ್ಕೆ ಹೋಗಿದ್ದೆ”
“ ಒಳ್ಳೆಯ ವಿಷಯ, ನಿನಗೆ ಒಳ್ಳೆಯ ಕಣ್ಣಗಳಿವೆ, ತೆರೆದ ಕಣ್ಣುಗಳಿಂದ ಜಗತ್ತನ್ನ ಗಮನಿಸುತ್ತಿದ್ದೀಯಾ”  ಮಾಸ್ಟರ್ ಉತ್ತರಿಸಿದರು.

ಮೂರನೇಯ ಶಿಷ್ಯ ಉತ್ತರಿಸಿದ “ ಸೈಕಲ್ ನ ಪೆಡಲ್ ತುಳಿಯುವಾಗಲೆಲ್ಲ ನಾನು ಮಂತ್ರ ಪಠಣ ಮಾಡುತ್ತೇನೆ ಮಾಸ್ಟರ್, ಸೈಕಲ್ ತುಳಿಯುವುದು ನನಗೆ ಮನಸ್ಸನ್ನು ಕೇಂದ್ರಿಕರಿಸುವ ಒಂದು ಸಾಧನ “
“ ಹೌದು, ನಿನ್ನ ಮನಸ್ಸು ಸೈಕಲ್ ನ ಗಾಲಿಯಂತೆ ಸರಾಗವಾಗಿ ಉರುಳುತ್ತದೆ” ಮಾಸ್ಟರ್ ಉತ್ತರಿಸಿದರು.

ನಾಲ್ಕನೇಯ ಶಿಷ್ಯ ಉತ್ತರಿಸಿದ “ ಸೈಕಲ್ ತುಳಿಯುವಾಗ ನಾನು ಸುತ್ತ ಮುತ್ತಲಿನ ಪ್ರಕೃತಿಯೊಂದಿಗೆ ಸಾಮರಸ್ಯದಲ್ಲಿ ಒಂದಾಗಿರುತ್ತೇನೆ ಮಾಸ್ಟರ್” ಈ ಉತ್ತರ ಕೇಳಿ ಮಾಸ್ಚರ್ ಗೆ ಖುಶಿಯಾಯಿತು “ ನೀನು ಯಾರೀಗೂ ಕೇಡಾಗದ ಸುವರ್ಣ ಮಾರ್ಗದಲ್ಲಿದ್ದೀಯ” ಮಾಸ್ಟರ್ ಉತ್ತರಿಸಿದರು.

“ ನಾನು ಸೈಕಲ್ ಸವಾರಿ ಮಾಡೋದು ಸೈಕಲ್ ಸವಾರಿ ಮಾಡಲಿಕ್ಕೆ ಮಾಸ್ಟರ್ “ ಐದನೇಯ ಶಿಷ್ಯ ಉತ್ತರಿಸಿದ.
ತಕ್ಷಣ ಮಾಸ್ಟರ್ ಐದನೇಯ ಶಿಷ್ಯನ ಕಾಲ ಬಳಿ ಕುಳಿತುಕೊಂಡು ಕೇಳಿಕೊಂಡರು “ ದಯಮಾಡಿ ನನ್ನನ್ನು ಶಿಷ್ಯನಾಗಿ ಸ್ವೀಕರಿಸು.


ನೆನ್ನೆಯ ಸಂಚಿಕೆ ಇಲ್ಲಿದೆ: https://aralimara.com/2025/01/31/osho-456/

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a reply to ವಿಶೇಷ ಭಯ ( Special Fear )  : ಓಶೋ 365 Day#14 – ಅರಳಿಮರ ಪ್ರತ್ಯುತ್ತರವನ್ನು ರದ್ದುಮಾಡಿ

This site uses Akismet to reduce spam. Learn how your comment data is processed.