ಸರಕಟಾ ಮತ್ತು ಸ್ತ್ರೀ : Coffeehouse ಕತೆಗಳು

ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ

ಒಬ್ಬ ಸಿನೇಮಾ ನಿರ್ದೇಶಕನಿಗೆ ಸೂಕ್ಷ್ಮ ಸಂವೇದನೆಗಳಿದ್ದಾಗ ಒಂದು ಜನಪ್ರೀಯ ಸಿನೇಮಾದಲ್ಲೂ ಆತ ಎಷ್ಟು ಸ್ಟ್ರಾಂಗ್ ಆಗಿ ತನ್ನ ಅಭಿಪ್ರಾಯವನ್ನ ತೆರೆಯ ಮೇಲೆ ಮೂಡಿಸಬಲ್ಲ ಎನ್ನುವುದಕ್ಕೆ ನಟ ಅಪಾರಶಕ್ತಿ ಖುರಾನ, ಸ್ತ್ರೀ – 2 ಸಿನೇಮಾದ ಒಂದು ದೃಶ್ಯದ ಉದಾಹರಣೆ ಕೊಡುತ್ತಾರೆ.

ಸರಕಟಾ ( ರುಂಡವಿಲ್ಲದ ಪಿಶಾಚಿ ) ಊರಿನ ಮೇಲೆ ಆಕ್ರಮಣ ಮಾಡಿದಾಗ, ಊರಿನ ನಾಲ್ವರು ಗಂಡಸರು ( ಹೀರೋ ಮತ್ತು ಅವನ ಗೆಳೆಯರು) ಜಾತ್ರೆಯ ಒಂದು ಅಂಗಡಿಯ ಹಿಂದೆ ಅಡಗಿಕೊಳ್ತಾರೆ. ಆದರೆ ಸ್ತ್ರೀ ತನ್ನ ಹೆರಳಿನಿಂದ ಸರಕಟಾ ಜೊತೆ ಫೈಟ್ ಮಾಡ್ತಾಳೆ. ಆ ಗಂಡಸರು ಅಡಗಿಕೊಂಡ ಅಂಗಡಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ನಿಮಗೆ ಗೊತ್ತಾಗುತ್ತದೆ ಅದು ಒಂದು ಬಳೆಯ ಅಂಗಡಿ.

ಹೆಂಗಸರ ಹಾಗೆ ನಾವು ಬಳೆ ತೊಟ್ಕೊಂಡಿಲ್ಲ ಅನ್ನೋ ಗಂಡಸರ ಡೈಲಾಗ್ ನೆನಪಾಯ್ತಾ ?

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.