ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ
U G ಕೃಷ್ಣಮೂರ್ತಿ ಬಹುಶಃ ತಮ್ಮ ಇಪ್ಪತ್ತನೇಯ ವಯಸ್ಸಿನಲ್ಲಿ, ತಮ್ಮ ಅಧ್ಯಾತ್ಮಿಕ ಹುಡುಕಾಟದ ಮೊದಲ ದಿನಗಳಲ್ಲಿ ಒಮ್ಮೆ ಮಹರ್ಷಿ ರಮಣರನ್ನು ಭೇಟಿ ಮಾಡುತ್ತಾರೆ. UG ಅಲ್ಲಿಗೆ ಹೋದಾಗ ರಮಣರು ತರಕಾರಿ ಹೆಚ್ಚುತ್ತ ಕುಳಿತಿರುತ್ತಾರೆ. ಅವರಿಬ್ಬರ ನಡುವಿನ ಮಾತುಕತೆ ಹೀಗೆ ಮುಂದುವರೆಯುತ್ತದೆ……
“ನಿಮಗೆ ಜ್ಞಾನೋದಯವಾಗಿದೆಯ?”
“ನಾನು ಹಾಗೆ ಹೇಳುವುದಿಲ್ಲ.”
“ನಿಮ್ಮ ಬಳಿ ಇರುವುದನ್ನ ( liberation) ನನಗೆ ಕೊಡಬಲ್ಲಿರ?”
“I can give, Can you take ?”
ರಮಣರ ಈ ಮಾತುಗಳನ್ನ ಕೇಳುತ್ತಿದ್ದಂತೆಯೇ, UG ಗೆ ದಿಗಿಲಾಗುತ್ತದೆ. ರಮಣರು ಕೊಡುವುದನ್ನ ಸ್ವೀಕರಿಸಬಲ್ಲವರು ಯಾರಾದರೂ ಇದ್ದರೆ ಅದು ತಾವು ಎನ್ನುವುದು UG ನಂಬಿಕೆಯಾಗಿತ್ತು. ರಮಣರ ಉತ್ತರ UG ಅವರ ಅಹಂಗೆ ತೀವ್ರ ಆಘಾತವನ್ನುಂಟು ಮಾಡಿತ್ತು.
ಮುಂದೆ UG ಅವರಿಗೆ, ಅವರ 49 ನೇಯ ವಯಸ್ಸಿನಲ್ಲಿ ಆದ ಅನುಭವ ( ಇದರಲ್ಲಿ ಯಾವ ಅಧ್ಯಾತ್ಮಿಕತೆ ಇಲ್ಲ, ಇದು ಶುದ್ಧ ದೈಹಿಕ ಬದಲಾವಣೆ. ಇದನ್ನು enlightenment ಎಂದೆಲ್ಲ ಹೇಳಿಕೊಳ್ಳಬಾರದು, ಇದು calamity ಎನ್ನುತ್ತಾರೆ UG) ಅವರ ಬದುಕನ್ನೇ ಬದಲಾಯಿಸುತ್ತದೆ. ಮುಂದೆ mind ಎನ್ನುವುದು ಮಿಥ್ಯೆ, Enlightenment ಎನ್ನುವುದು ಸುಳ್ಳು ಎಂದು ಅಧ್ಯಾತ್ಮದ ಕುರಿತಾಗಿ ವಿಭಿನ್ನ ನಿಲುವು ತಳೆಯುತ್ತಾರೆ.

