ಓಶೋ ರಜನೀಶ್, ಹಿಂದಿ ಭಾಷೆಯ ಮಹಾಕವಿ ರಾಮಧಾರಿಸಿಂಗ್ ದಿನಕರ್ ಅವರ ಜೊತೆಗಿನ ತಮ್ಮ ಸಂಬಂಧವನ್ನು ಹೀಗೆ ವಿವರಿಸುತ್ತಾರೆ… । ಚಿದಂಬರ ನರೇಂದ್ರ
ರಾಮಧಾರಿಸಿಂಗ್ ದಿನಕರ್ ಬಹಳ ಒಳ್ಳೆಯ ಕವಿ, ನನಗೆ ಅವರ ಕವಿತೆಗಳೆಂದರೆ ಬಹಳ ಇಷ್ಟ. ದಿನಕರ್ ಅವರಿಗೂ ನಾನು ಎಂದರೆ ಬಹಳ ಪ್ರೀತಿ, ನನಗೂ ಅವರ ಮೇಲೆ ಲವ್ ಇತ್ತು ಆದರೆ ಅವರನ್ನು ಲೈಕ್ ಮಾಡುವುದು ನನಗೆ ಸಾಧ್ಯವಾಗುತ್ತಿರಲಿಲ್ಲ. ಲವ್ ಯಾರ ಮೇಲೂ ಆಗಬಹುದು ಏಕೆಂದರೆ ಅದು ಅಧ್ಯಾತ್ಮಿಕ. ಆದರೆ ಲೈಕ್ ಮಾಡುವುದು ಬೇರೆಯೇ ಸವಾಲು.
ದಿನಕರ್ ನನ್ನ ಬಳಿ ಬಂದಾಗಲೆಲ್ಲ ಏನೇನೋ ಮೂರ್ಖತನದ ಮಾತುಗಳನ್ನಾಡುತ್ತಿದ್ದರು. “ದಿನಕರ್ ನೀವು ಕವಿ, ಕಾವ್ಯಾತ್ಮಕವಾಗಿ ಮಾತನಾಡಬೇಕು, ನನಗೆ ಅದು ಇಷ್ಟ” ಎಂದು ನಾನು ಅವರನ್ನು ತರಾಟೆಗೆ ತೆಗೆದುಕೊಂಡಾಗ ಆವರು, “ ಹೌದು ನಾನು ಕವಿ ನಿಜ, ಆದರೆ ನಾನು ಇಪ್ಪತ್ನಾಲ್ಕು ಗಂಟೆ ಕವಿ ಅಲ್ಲ” ಎಂದು ಸಬೂಬು ನೀಡುತ್ತಿದ್ದರು. “ಹಾಗಾದರೆ ನೀವು ಕವಿಯಾಗಿದ್ದಾಗ ಮಾತ್ರ ನನ್ನ ಹತ್ತಿರ ಬನ್ನಿ. ನನ್ನ ಸಂಬಂಧ ಇರೋದು ಕವಿ ದಿನಕರ್ ಜೊತೆಗೆ, ನಿಮ್ಮ ಜೊತೆ ಅಲ್ಲ” ನಾನು ಅವರಿಗೆ ಎಚ್ಚರಿಕೆ ಕೊಟ್ಟುಬಿಟ್ಟೆ.

