ಯಾವಾಗ ನಿಮ್ಮ ಪ್ರೇಮ ಇನ್ನೊಬ್ಬರ ಕುರಿತಾದ ಬಯಕೆ ಅಲ್ಲವೋ, ಯಾವಾಗ ನಿಮ್ಮ ಪ್ರೇಮ ಅವಶ್ಯಕತೆ ಅಲ್ಲವೋ, ಯಾವಾಗ ನಿಮ್ಮ ಪ್ರೇಮ ಕೊಡುವುದರ ಪ್ರತಿಯಾಗಿ ಏನನ್ನೂ ಬಯಸುವುದಿಲ್ಲವೋ …. ಯಾವಾಗ ನಿಮಗೆ ಕೊಡುವುದಕ್ಕಿಂತ ಬೇರೆ ಯಾವುದರಲ್ಲೂ ಹೆಚ್ಚಿನ ಖುಶಿ ಸಿಗುವುದಿಲ್ಲವೋ ಆಗ ನೀವು ಅದಕ್ಕೆ ಧ್ಯಾನವನ್ನು add ಮಾಡಿದಾಗ ಪರಿಮಳ ಸಾಧ್ಯವಾಗುತ್ತದೆ. ಅದು ಅಂತಃಕರಣ. ಅಂತಃಕರಣ ಎಲ್ಲಕ್ಕಿಂತಲೂ ಉನ್ನತವಾದ ವಿದ್ಯಮಾನ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಪ್ರೇಮದ ಮೂರು ಹಂತಗಳಲ್ಲಿ ಕಾಮ ಪ್ರಾಥಮಿಕ ಮಟ್ಟದ್ದು, ದೈಹಿಕವಾದದ್ದು. ಮತ್ತು ಅತ್ಯಂತ ಎತ್ತರದ್ದು ಹಾಗು ಅತ್ಯಂತ ಶ್ರೇಷ್ಠವಾದದ್ದು ಅಂತಃಕರಣ. ಕಾಮ, ಪ್ರೇಮದ ಕೆಳಗಿನ ಮಟ್ಟ, ಅಂತಃಕರಣ ಪ್ರೇಮದ ಉನ್ನತ ಮಟ್ಟ. ಕಾಮ ಮತ್ತು ಅಂತಃಕರಣಗಳ ನಡುವಿನದು ಪ್ರೇಮ.
ಪ್ರೇಮ ಎಂದರೇನು ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ. ಶೇಕಡಾ ತೊಂಭತ್ತರಷ್ಟು ಜನ ಲೈಂಗಿಕತೆಯನ್ನು ಪ್ರೇಮ ಎಂದು ತಿಳಿದುಕೊಂಡಿದ್ದಾರೆ, ಆದರೆ ಅದು ಹಾಗಲ್ಲ. ಲೈಂಗಿಕತೆ ಅಂತ್ಯಂತ animal ಆದದ್ದು. ಖಂಡಿತ ಸೆಕ್ಸ್ ಗೆ ಬೆಳೆದು ಪ್ರೇಮವಾಗುವ ಸಾಧ್ಯತೆ ಇದೆ ಆದರೆ ಸೆಕ್ಸ್ ಪ್ರೇಮವಲ್ಲ, ಅದು ಪ್ರೇಮವಾಗಬಹುದಾದ ಒಂದು ಸಾಧ್ಯತೆ ಅಷ್ಟೇ.
ನೀವು ಪ್ರಜ್ಞೆ, ಎಚ್ಚರಿಕೆ ಮತ್ತು ಧ್ಯಾನವನ್ನು ಒಳಗೊಂಡರೆ ಕಾಮವನ್ನ ಪ್ರೇಮವಾಗಿ ಪರಿವರ್ತಿಸಬಹುದು. ಮತ್ತು ನಿಮ್ಮ ಧ್ಯಾನದ ಅಸ್ತಿತ್ವ (meditative being) ಪೂರ್ಣವಾಗಿ ಹರಳುಗಟ್ಟಿದಾಗ ಪ್ರೇಮವನ್ನು ಅಂತಃಕರಣವಾಗಿ ಪರಿವರ್ತನೆ ಮಾಡಬಹುದು.
ಕಾಮ ಬೀಜವಾದರೆ, ಪ್ರೇಮ ಹೂವು ಮತ್ತು ಅಂತಃಕರಣ ಪರಿಮಳ.
ಬುದ್ಧ, ಅಂತಃಕರಣವನ್ನು ಪ್ರೇಮ ಪ್ಲಸ್ ಧ್ಯಾನ ಎಂದು ವ್ಯಾಖ್ಯಾನ ಮಾಡಿದ್ದಾನೆ.
ಯಾವಾಗ ನಿಮ್ಮ ಪ್ರೇಮ ಇನ್ನೊಬ್ಬರ ಕುರಿತಾದ ಬಯಕೆ ಅಲ್ಲವೋ, ಯಾವಾಗ ನಿಮ್ಮ ಪ್ರೇಮ ಅವಶ್ಯಕತೆ ಅಲ್ಲವೋ, ಯಾವಾಗ ನಿಮ್ಮ ಪ್ರೇಮ ಕೊಡುವುದರ ಪ್ರತಿಯಾಗಿ ಏನನ್ನೂ ಬಯಸುವುದಿಲ್ಲವೋ …. ಯಾವಾಗ ನಿಮಗೆ ಕೊಡುವುದಕ್ಕಿಂತ ಬೇರೆ ಯಾವುದರಲ್ಲೂ ಹೆಚ್ಚಿನ ಖುಶಿ ಸಿಗುವುದಿಲ್ಲವೋ ಆಗ ನೀವು ಅದಕ್ಕೆ ಧ್ಯಾನವನ್ನು add ಮಾಡಿದಾಗ ಪರಿಮಳ ಸಾಧ್ಯವಾಗುತ್ತದೆ. ಅದು ಅಂತಃಕರಣ. ಅಂತಃಕರಣ ಎಲ್ಲಕ್ಕಿಂತಲೂ ಉನ್ನತವಾದ ವಿದ್ಯಮಾನ.
ನಾವು ಯಾವುದನ್ನ ಪ್ರೇಮ ಎಂದು ಗುರುತಿಸುತ್ತೇವೆಯೋ ಅದು ರಿಲೇಷನಶಿಪ್ ನ ಎಲ್ಲ ಆಯಾಮಗಳನ್ನು ಒಳಗೊಂಡಿದೆ, ಭೂಮಿಯಿಂದ ಸ್ವರ್ಗದ ತನಕ. ಭೂಮಿಯ ಹಂತದಲ್ಲಿ ಪ್ರೇಮ ಕೇವಲ ಲೈಂಗಿಕ ಆಕರ್ಷಣೆ. ನಾವು ಬಹಳಷ್ಟು ಜನ ಇಲ್ಲಿಯೇ ಸಿಕ್ಕಿಹಾಕಿಕೊಂಡು ಬಿಡುತ್ತೇವೆ. ಏಕೆಂದರೆ ನಮ್ಮ ತರಬೇತಿ ನಮ್ಮ ಲೈಂಗಿಕತೆಯನ್ನು ಎಲ್ಲ ಬಗೆಯ ನಿರೀಕ್ಷೆಗಳಿಂದ ಮತ್ತು ಹತ್ತಿಕ್ಕುವಿಕೆಗಳಿಂದ ತಯಾರು ಮಾಡಿದೆ.ಲೈಂಗಿಕ ಪ್ರೇಮದ ಕುರಿತಾದ ಒಂದು ದೊಡ್ಡ ಸಮಸ್ಯೆ ಎಂದರೆ ಇದು ಬಹುಕಾಲ ಇರುವಂಥದ್ದಲ್ಲ. ಇದನ್ನು ಒಪ್ಪಿಕೊಂಡಾಗ ಮಾತ್ರ ನಾವು ಸೆಕ್ಸ್ ನ ಸ್ವಾಗತಿಸಬಹುದು, ಸಂಭ್ರಮಿಸಬಹುದು ಮತ್ತು ಕೃತಜ್ಞತೆಯಿಂದ ವಿದಾಯ ಹೇಳಬಹುದು.
ಆಗ ನಾವು ಪ್ರಬುದ್ಧರಾಗುತ್ತೇವೆ, ಲೈಂಗಿಕತೆಯ ಆಚೆಗಿನ ಪ್ರೇಮವನ್ನು ಅನುಭವಿಸುತ್ತೇವೆ ಮತ್ತು ಆಗ ನಮಗೆ ಪರಸ್ಪರರ ಕುರಿತಾದ ಗೌರವ ಸಾಧ್ಯವಾಗುತ್ತದೆ. ಆಗ ನಮಗೆ ನಮ್ಮ ಸಂಗಾತಿ ಕನ್ನಡಿಯಂತಾಗುತ್ತಾರೆ, ನಮ್ಮ ಅಗೋಚರ ಆಳದ ಸೆಲ್ಫ್ ನ ಪ್ರತಿಫಲಿಸುತ್ತ ನಾವು ಇಡಿ ಯಾಗಿ ಪೂರ್ಣಗೊಳ್ಳಲು ನೆರವಾಗುತ್ತಾರೆ. ಈ ಪ್ರೇಮ ಬಯಕೆಗಳ ಮೇಲೆ, ಅವಶ್ಯಕತೆಗಳ ಮೇಲೆ ನಿಂತಿರುವಂಥದಲ್ಲ , ಇದು ಬಿಡುಗಡೆಯ ಮೇಲೆ, ಸ್ವಾತಂತ್ರ್ಯದ ಮೇಲೆ ನಿಂತಿರುವಂಥದು. ಆಗ ನಮಗೆ ಹುಟ್ಟಿಕೊಳ್ಳುವ ರೆಕ್ಕೆಗಳು ನಮ್ಮನ್ನು ಎತ್ತರೆತ್ತರೆತ್ತರಕ್ಕೆ ವಿಶ್ವಾತ್ಮಕ ಪ್ರೇಮದತ್ತ ( universal love) ಕರೆದೊಯ್ಯುತ್ತದೆ ಮತ್ತು ಈ ಅನುಭವ ಎಲ್ಲವೂ ಒಂದು ಎನ್ನುವುದನ್ನ ನಮಗೆ ಗೊತ್ತು ಮಾಡುತ್ತದೆ.
~ Osho

