ಅದೃಷ್ಟಶಾಲಿ ಭಾಷೆ, ಆದರೆ… : coffeehouse ಕತೆಗಳು

ಸಂಗ್ರಹ ಮತ್ತು ನಿರೂಪಣೆ : ಚಿದಂಬರ ನರೇಂದ್ರ

ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ಒಬ್ಬರು ಮರಾಠಿ ಸಾಹಿತಿ, ಗಿರೀಶ್ ಕಾರ್ನಾಡರಿಗೆ ಹೇಳಿದರಂತೆ…

“ನಿಮ್ಮ ಕನ್ನಡ ಬಹಳ ಅದೃಷ್ಟಶಾಲಿ ಭಾಷೆ, 7 ಜ್ಞಾನಪೀಠ ಸಿಕ್ಕಿದೆ ಅದಕ್ಕೆ” ಅಂತ ( ಆಗ ಇನ್ನೂ ಕಂಬಾರರಿಗೆ ಪ್ರಶಸ್ತಿ ಬಂದಿರಲಿಲ್ಲ )

“ ಹಾಗೆ ನೋಡಿದರೆ ಕನ್ನಡ ಬಹಳ ದುರದೃಷ್ಟಶಾಲಿ ಭಾಷೆ, ಒಂದೇ ಸಮಯದಲ್ಲಿ ಜ್ಞಾನಪೀಠಕ್ಕೆ ಸಮರ್ಥರಾದವರು ಬಹಳಷ್ಟು ಜನ ಇರೋದು. ಎಷ್ಟೋ ಜನರಿಗೆ ಈ ಸಮಯದ ಕಾರಣವಾಗಿ ಜ್ಞಾನಪೀಠ ಸಿಗಲೇ ಇಲ್ಲ”

ಕಾರ್ನಾಡರು ಆ ಮರಾಠಿ ಸಾಹಿತಿಗೆ ಹೀಗೆ ಉತ್ತರಿಸುತ್ತಾರೆ. ಅಡಿಗ, ತೇಜಸ್ವಿ, ಲಂಕೇಶರಿಗೆ ಬರದ ಪ್ರಶಸ್ತಿ ತಮಗೆ ಸಿಕ್ಕಿದ್ದರ ಬಗ್ಗೆ ಕಾರ್ನಾಡರಿಗೆ ಮುಜುಗರ ಇತ್ತು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.