ಹಿಂದಿ ಸಿನೆಮಾದ ಇಬ್ಬರು ಅಪ್ರತಿಮ ಗೀತಕಾರರು ಮತ್ತು ಉರ್ದು ಕಾವ್ಯಲೋಕದ ಇಬ್ಬರು ಮಹಾನ್ ಕವಿಗಳಾದ ಶಕೀಲ್ ಬದಾಯೂನಿ ಮತ್ತು ಸಾಹಿರ್ ಲೂಧಿಯಾನ್ವಿ, ಜಗತ್ತಿನ ಅದ್ಭುತಗಳಲ್ಲೊಂದಾದ ತಾಜ್ ಮಹಲ್ ನ ತಮ್ಮ ಹಾಡುಗಳಲ್ಲಿ ಚಿತ್ರಿಸಿರುವ ಬಗೆ ಬಹಳ ಕುತೂಹಲಕಾರಿಯಾಗಿದೆ. । ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ
ಶಕಿಲ್ ಬದಾಯೂನಿ ತಾಜ್ ಮಹಲ್ ಕುರಿತು ಹೀಗೆ ಬರೆಯುತ್ತಾರೆ….
ಇಕ್ ಶಹನ್ ಶಾಹ್ ನೇ ಬನವಾಕೆ ಹಸೀನ್ ತಾಜ್ ಮಹಲ್
ಸಾರೀ ದುನಿಯಾಕೋ ಮಹೊಬ್ಬತ್ ಕೀ ನಿಶಾನಿ ದೀ ಹೈ
( ಒಬ್ಬ ರಾಜ, ಸುಂದರ ತಾಜಮಹಲ್ ನ ನಿರ್ಮಿಸಿ
ಇಡೀ ಜಗತ್ತಿಗೆ ಪ್ರೇಮದ ಸಂಕೇತವೊಂದನ್ನು ನೀಡಿದ್ದಾನೆ)
ಈ ಸಾಲುಗಳಿಗೆ ತದ್ವಿರುದ್ಧ ಎನ್ನುವಂತೆ ಕವಿ ಸಾಹಿರ್ ಲೂಧಿಯಾನ್ವಿ ತಾಜ ಮಹಲ್ ನ ಹೀಗೆ ಚಿತ್ರಿಸುತ್ತಾರೆ…
ಇಕ್ ಶಹನ್ ಶಾಹ್ ನೇ ದೌಲತ್ ಕಾ ಸಹಾರಾ ಲೇಕರ್
ಹಮ್ ಗರೀಬೋಂ ಕೀ ಮೊಹಬ್ಬತ್ ಕಾ ಉಡಾಯಾ ಹೈ ಮಝಾಕ್.
(ಒಬ್ಬ ಸುಲ್ತಾನ ತನ್ನ ಹೆಂಡತಿಯ ನೆನಪಿನಲ್ಲಿ
ತಾಜಮಹಲನು ಕಟ್ಟಿಸಿ,
ಬಡವರ ಪ್ರೇಮವನ್ನು ತಮಾಷೆ ಮಾಡಿದ್ದಾನೆ
ತನ್ನ ಎಲ್ಲ ಸಂಪತ್ತನ್ನು ಬಳಸಿ)

