ಹಿಂದೊಮ್ಮೆ ಅಲ್ಲಿ ಮಹಿಳೆಯರಿಗೂ ವೋಟ್ ಮಾಡುವ ಹಕ್ಕಿತ್ತು… | Coffeehouse ಕತೆಗಳು

“ಕಾಬೂಲ್ ನಲ್ಲಿ ಇಂದು ಒಂದು ಹಕ್ಕಿ ಹಾಡಬಹುದು ಆದರೆ ಪುಟ್ಟ ಹುಡುಗಿಗೆ, ಹೆಂಗಸಿಗೆ ಇದು ಸಾಧ್ಯವಿಲ್ಲ…” ಅಂತ ಆಫ್ಘಾನಿಸ್ತಾನದ ಪರಿಸ್ಥಿತಿಯನ್ನು ವಿವರಿಸ್ತಾರೆ ಜಗತ್ತಿನ ಅತ್ಯುತ್ತಮ ಸಿನೇಮಾ ನಟಿಯರಲ್ಲಿ ಒಬ್ಬರಾದ ಮೆರಿಲ್ ಸ್ಟ್ರೀಪ್ । ಸಂಗ್ರಹ – ನಿರೂಪಣೆ : ಚಿದಂಬರ ನರೇಂದ್ರ

1971 ಲ್ಲಿ ನಾನು ನ್ಯೂಯಾರ್ಕ್ ನಲ್ಲಿ ಕಾಲೇಜ್ ವಿದ್ಯಾಭ್ಯಾಸ ಮುಗಿಸಿ ಪದವಿಧರಳಾದೆ. ಅದೇ ವರ್ಷ ಸ್ವಿಟ್ಜರ್ಲ್ಯಾಂಡ್ ನ ಮಹಿಳೆಯರಿಗೆ ವೋಟ್ ಮಾಡುವ ಹಕ್ಕು ಸಿಕ್ಕಿತು. ಇದಕ್ಕೂ ಅರ್ಧ ಶತಮಾನ ಮೊದಲು ಅಫಘಾನಿಸ್ತಾನದ ಮಹಿಳೆಯರಿಗೆ ಮತದಾನ ಮಾಡುವ ಹಕ್ಕು ಇತ್ತು.

1919 ರಲ್ಲೇ ಅಫಘಾನಿಸ್ತಾನದ ಮಹಿಳೆಯರಿಗೆ ವೋಟ್ ಮಾಡುವ ಹಕ್ಕು ಸಿಕ್ಕಿತ್ತು, ಫ್ರಾನ್ಸ್ ನ ಮಹಿಳೆಯರಿಗಿಂತ 30 ವರ್ಷ ಮೊದಲು, ಅಮೇರಿಕೆಯ ಮಹಿಳೆಯರಿಗಿಂತ ಬಹಳ ಮುಂಚೆ. ಈ ಸಮಾಜ, ಈ ಸಂಸ್ಕೃತಿ ಮುಂದೆ ಹೇಗೆ ಅವನತಿ ಹೊಂದಿತು ಎನ್ನುವುದು ಇಡೀ ಜಗತ್ತಿಗೆ ಪಾಠವಾಗಬೇಕು.

ಎಪ್ಪತ್ತರ ದಶಕದಲ್ಲಿ ಬಹುತೇಕ ಸರಕಾರಿ ಅಧಿಕಾರಿಗಳು, ಅರ್ಧಕ್ಕೂ ಹೆಚ್ಚು ಸಂಖ್ಯೆಯ ಟೀಚರ್ ಗಳು, ಡಾಕ್ಟರ್ ಗಳು ಮಹಿಳೆಯರಾಗಿದ್ದರು. ನ್ಯಾಯಾಧೀಶರು, ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಾಗಿದ್ದರು. ನಂತರ ಜಗತ್ತು ಬದಲಾಯಿತು.

ಇವತ್ತು ಕಾಬೂಲ್ ನಲ್ಲಿ, ಒಬ್ಬ ಮಹಿಳೆಗಿಂತ ಒಂದು ಹೆಣ್ಣು ಬೆಕ್ಕಿಗೆ ಹೆಚ್ಚು ಸ್ವಾತಂತ್ರ್ಯ ಇದೆ. ಹೆಣ್ಣು ಬೆಕ್ಕು ಮನೆಯ ಅಂಗಳದಲ್ಲಿ ಕೂತು ಬಿಸಿಲು ಕಾಯಿಸಬಹುದು, ಗಾರ್ಡನ್ ಲ್ಲಿ ಅಳಿಲನ್ನು ಬೆನ್ನಟ್ಟಿ ಓಡಬಹುದು. ಹೆಣ್ಣಿ ಮಗುವಿಗಿಂತ ಅಳಿಲಿಗೆ ಹೆಚ್ಚು ಹಕ್ಕುಗಳಿವೆ ಇವತ್ತು ಅಫಘಾನಿಸ್ತಾನದಲ್ಲಿ, ಏಕೆಂದರೆ ಎಲ್ಲ ಸಾರ್ವಜನಿಕ ಪಾರ್ಕ್ ಗಳನ್ನು ಹೆಂಗಸರಿಗೆ ಮತ್ತು ಹೆಣ್ಣು ಮಕ್ಕಳಿಗೆ ತಾಲೀಬಾನ್ ಮುಚ್ಚಿಹಾಕಿಬಿಟ್ಟಿದೆ. ಕಾಬೂಲ್ ನಲ್ಲಿ ಇಂದು ಒಂದು ಹಕ್ಕಿ ಹಾಡಬಹುದು ಆದರೆ ಪುಟ್ಟ ಹುಡುಗಿಗೆ, ಹೆಂಗಸಿಗೆ ಇದು ಸಾಧ್ಯವಿಲ್ಲ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.