ಹೊಗೆಯಿಲ್ಲದ ಜ್ವಾಲೆ ( Smokeless Flame ) :  ಓಶೋ 365 #Day 51

ನಿಮಗೆ ಎಲ್ಲಾದರೂ ಬೆಳಕು ಕಾಣಿಸಿತೆಂದರೆ ಕೈ ಮುಗಿಯಿರಿ. ಅಲ್ಲೊಂದು ದೇವಸ್ಥಾನ ಉಂಟು… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಬೆಳಕಿನ ರಹಸ್ಯಗಳ ಬಗ್ಗೆ ಕೊಂಚ ಗಮನಹರಿಸಿ. ಕೇವಲ ಒಂದು ಪುಟ್ಟ ಜ್ವಾಲೆ, ಜಗತ್ತಿನ ಅತ್ಯಂತ ರಹಸ್ಯಮಯ ಸಂಗತಿ, ಮತ್ತು ಇಡೀ ಬದುಕು ಅದರ ಮೇಲೆ ಡಿಪೆಂಡ್ ಆಗಿದೆ.

ಆ ಜ್ವಾಲೆಯೇ ನಿಮ್ಮೊಳಗೂ ಉರಿಯುತ್ತಿದೆ. ಆದ್ದರಿಂದರಲೇ ನಿಮಗೆ ನಿರಂತರವಾಗಿ ಆಕ್ಸಿಜನ್ ನ ಅವಶ್ಯಕತೆಯಿದೆ. ಏಕೆಂದರೆ ಆಕ್ಸಿಜನ್  ಇಲ್ಲದೇ ಜ್ವಾಲೆ ಬದುಕಲಾರದು. ಆದ್ದರಿಂದಲೇ ಯೋಗ ಆಳ ಉಸಿರಾಟಕ್ಕೆ ಒತ್ತು ನೀಡುತ್ತದೆ. ನೀವು ಹೆಚ್ಚು ಹೆಚ್ಚು ಆಕ್ಸೀಜನ್ ಬ್ರೀದ್ ಮಾಡಿದಾಗ ನಿಮ್ಮ ಬದುಕು ಆಳವಾಗುತ್ತ ಹೋಗುತ್ತದೆ ಮತ್ತು ನಿಮ್ಮೊಳಗಿನ ಜ್ವಾಲೆ ಸ್ಪಷ್ಟಗೊಳುತ್ತ ಹೋಗುತ್ತದೆ ಮತ್ತು ನಿಮ್ಮೊಳಗೆ ಯಾವ ಹೊಗೆಗೂ ಅವಕಾಶವಿರುವುದಿಲ್ಲ. ಹೊಗೆಯಿಲ್ಲದ ಜ್ವಾಲೆಯನ್ನು ಸಾಧ್ಯ ಮಾಡಿಕೊಳ್ಳುವುದೇ ಉದ್ದೇಶವಾಗಬೇಕು.

ಒಮ್ಮೆ ಒಬ್ಬ ಸೂಫಿ ಅನುಭಾವಿ ಒಂದು ಹಳ್ಳಿಯನ್ನು ಪ್ರವೇಶ ಮಾಡುವ ದಾರಿಯಲ್ಲಿ ಮೇಣದ ಬತ್ತಿಯನ್ನು ಬೆಳಗುತ್ತಿದ್ದ ಒಬ್ಬ ಮುಗ್ಧ ಹುಡುಗನನ್ನು ಗಮನಿಸಿದ.

ಮೇಣದ ಬತ್ತಿಯ ಬೆಳಕಲ್ಲಿ ಹುಡುಗನ ಮುಖ ಕಾಂತಿಯಿಂದ ಬೆಳಗುತ್ತಿತ್ತು. ಸೂಫಿ ಕುತೂಹಲದಿಂದ ಆ ಹುಡುಗನನ್ನು ಪ್ರಶ್ನೆ ಮಾಡಿದ.

“ ನೀನು ಬೆಳಗಿದ್ದ ಈ ಕ್ಯಾಂಡಲ್ ? “

“ ಹೌದು “ ಹುಡುಗ ಉತ್ತರಿಸಿದ.

“ ಹಾಗಾದರೆ ಕ್ಯಾಂಡಲ್ ನ ಜ್ವಾಲೆ ಎಲ್ಲಿಂದ ಬಂತು, ನೀನು ನೋಡಿರಬೇಕು ಅಲ್ವಾ ? ಹೇಳು ಆ ಜ್ವಾಲೆ ಎಲ್ಲಿಂದ ಬಂತು ? “

ಸೂಫಿ ತಮಾಷೆ ಮಾಡಿದ.

ಹುಡುಗ ನಗುತ್ತ, ಕ್ಯಾಂಡಲ್ ನ ಊದಿ ಆರಿಸಿಬಿಟ್ಟ. ಮತ್ತು ಸೂಫಿಯನ್ನ ಪ್ರಶ್ನೆ ಮಾಡಿದ.

“ ಈ ಜ್ವಾಲೆ ಆರಿ ಹೋಗುವುದನ್ನ ನೀನು ನೋಡಿದೆ ಅಲ್ವ, ಹೇಳು ಆ ಜ್ವಾಲೆ ಎಲ್ಲಿ ಹೋಯಿತು ? “

ಜ್ವಾಲೆ ಎಲ್ಲಿಂದ ಬಂತು, ಎಲ್ಲಿಗೆ ಹೋಯಿತು ಯಾರಿಗೂ ಗೊತ್ತಿಲ್ಲ. ಜ್ವಾಲೆ ದಾಖಲಾಗಿದ್ದು ಅನಸ್ತಿತ್ವದಿಂದ ಅಥವಾ ಎಲ್ಲದರ ಮೂಲಕ , ಈ ಎರಡೂ ಒಂದೇ. ಅದು ಹೋದದ್ದು ಅನಸ್ತಿತ್ವದ ಒಳಗೆ ಅಥವಾ ಎಲ್ಲದರ ಒಳಗೆ ಈ ಎರಡೂ ಕೂಡ ಒಂದೇ. ಇದು ನಿರ್ವಾಣ.

ಸೂಫಿಗಳು, ಇದನ್ನೇ ಫನಾ ಎನ್ನುತ್ತಾರೆ ; ಸಂಪೂರ್ಣವಾಗಿ ಕಳೆದು ಹೋಗುವುದು.

*******************************

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.