ಜಾವೇದ್ ಅಖ್ತರ್ ಬದುಕನ್ನು ಸಿನೆಮಾಕ್ಕೆ ಹೋಲಿಸುತ್ತ ವ್ಯಾಖ್ಯಾನ ಮಾಡಿದ್ದು ಹೀಗೆ … । ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ
ಬದುಕು ಒಂದು ಸಿನೆಮಾ ಸ್ಕ್ರಿಪ್ಟ್ ನ ಹಾಗೆ. ಯಾಕೋ ಫಸ್ಟ್ ಹಾಫ್ ಸ್ಲೋ ಆಗ್ತಾ ಇದೆ, ಸೀನ್ ನಂಬರ್ 36 ತೆಗೆದುಬಿಡೋಣ, ಈ ಸೀನ್ ಲ್ಲಿ ತುಂಬಾ ತೊಂದರೆ ಇದೆ. ಸರಿ ಸೀನ್ ನಂಬರ್ 36 ತೆಗೆದುಬಿಡೋಣ.
ಆದರೆ ಆಮೇಲೆ ಗೊತ್ತಾಯ್ತು ಸೀನ್ ನಂಬರ್ 36 ಲ್ಲಿ ಏನಾಗತ್ತೋ ಆ ಕಾರಣದಿಂದಲೇ ಸಿನೇಮಾ, ಸೀನ್ ನಂಬರ್ 68 ರ ತನಕ ಬಂದು ಮುಟ್ಟಿದೆ. ಮತ್ತು ಸೀನ್ ನಂಬರ್ 68 ಸಿನೆಮಾದ ಹೈ ಲೈಟ್ ಆಗಿದೆ. ಹಾಗಾಗಿ ಸೀನ್ 36 ತೆಗೆದುಹಾಕಿದರೆ ಸೀನ್ 68 ತಾನೇ ತಾನಾಗಿ ಮಾಯವಾಗಿಬಿಡುತ್ತದೆ. ಆದ್ದರಿಂದ ಸೀನ್ ಗಳನ್ನ ಹಾಗೆಲ್ಲ ಡಿಲೀಟ್ ಮಾಡಕಾಗಲ್ಲ. ಇದು ಒಂದು ಪ್ಯಾಕೇಜ್.
ಇಲ್ಲಿ ಒಂದಿಷ್ಟು ಒಳ್ಳೆಯದಿದೆ ಒಂದಿಷ್ಟು ಕೆಟ್ಟದಿದೆ. ಒಂದಿಷ್ಟು ಖುಶಿ ಇರುತ್ತದೆ ಒಂದಿಷ್ಟು ದುಃಖ ಇರುತ್ತದೆ. ಒಂದಿಷ್ಟು ನಗು ಒಂದಿಷ್ಟು ಅಳು. ಇವುಗಳಲ್ಲಿ ನಿಮಗೆ ಚೇರ್ರೀ ಪಿಕ್ ಮಾಡುವುದು ಸಾಧ್ಯವಾಗುವುದಿಲ್ಲ. ನಿಮಗೆ ಬೇಕಾದದ್ದನ್ನ ಮಾತ್ರ ಆಯ್ಕೆ ಮಾಡಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಎಲ್ಲ ಒಂದಕ್ಕೊಂದು ಹೆಣೆದುಕೊಂಡಿರುತ್ತವೆ. ಬದುಕು ಹೇಗಿದೆಯೋ ಅದನ್ನು ಹಾಗೇ ಸ್ವೀಕರಿಸಬೇಕು.

