ತಮ್ಮ ಲಾಪತಾ ಲೇಡೀಸ್ ಸಿನೇಮಾದ ಪ್ರಚಾರದ ಕಾರ್ಯಕ್ರಮದಲ್ಲಿ ಕಿರಣ ರಾವ್ ನೆನಪಿಸಿಕೊಂಡ ಒಂದು ಪ್ರಶ್ನೋತ್ತರ… । ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ
ನಟ ಅಮೀರ್ ಖಾನ್ ಸತ್ಯಮೇವ ಜಯತೇ ಅಂತ ಒಂದು TV ಕಾರ್ಯಕ್ರಮ ನಡೆಸಿಕೊಡ್ತಾ ಇದ್ರು. ಈ ಕಾರ್ಯಕ್ರಮದಲ್ಲಿ ಬಹುತೇಕ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ, ಶೋಷಿತರ ಬಗ್ಗೆ, ಅಸಮಾನತೆಯ ಬಗ್ಗೆ ಸಾಮಾನ್ಯ ಜನರೊಡನೆ, ವಿದ್ವಾಂಸರೊಂಡನೆ ಅಮೀರ್ ಚರ್ಚೆ ಮಾಡ್ತಾ ಇದ್ರು.
ಇಂಥ ಒಂದು ಎಪಿಸೋಡ್ ಲ್ಲಿ ಸ್ತ್ರೀವಾದಿ ಕಮಲಾ ಭಸೀನ್ ಆಮಿರ್ ನ ಪ್ರಶ್ನೆ ಮಾಡ್ತಾರೆ, “ಪಿತೃಪ್ರಧಾನ ವ್ಯವಸ್ಥೆ ತಪ್ಪು ಅಲ್ವಾ, ಹಾಗಾದರೆ ವ್ಯವಸ್ಥೆ ಯಾವ ರೀತಿ ಇರಬೇಕು?”
“ಹೆಣ್ಣಿನ ಶೋಷಣೆ ಆಗ್ತಿದೆ ಆದ್ದರಿಂದ ಮೊದಲು ಇದ್ದ ಹಾಗೆ ಮಾತೃಪ್ರಧಾನ ವ್ಯವಸ್ಥೆ ಇರಬೇಕು” ಅಮೀರ್ ಉತ್ತರಿಸುತ್ತಾರೆ.
“ತಪ್ಪು. ಪಿತೃಪ್ರಧಾನ ವ್ಯವಸ್ಥೆಗೆ ಪರಿಹಾರ ಮಾತೃಪ್ರಧಾನ ವ್ಯವಸ್ಥೆ ಅಲ್ಲ. ಒಂದು ಅತಿರೇಕಕ್ಕೆ ಇನ್ನೊಂದು ಅತಿರೇಕ ಉತ್ತರವಾಗಲಾರದು. ಇದಕ್ಕೆ ಪರಿಹಾರ ಏನೆಂದರೆ, ಸಮಾನತೆ, Equality” ಅನ್ನುತ್ತಾರೆ ಕಮಲಾ ಭಸೀನ್.

