ನಾವು ಬೌಂಡರಿಗಳನ್ನು ನಿರ್ಧರಿಸುವುದು ಸಂಬಂಧಗಳಲ್ಲಿ ಅಂತರವನ್ನು ಸೃಷ್ಟಿಸುವುದಕ್ಕಲ್ಲ, ಬದಲಾಗಿ ಇನ್ನಷ್ಟು ಹತ್ತಿರಕ್ಕೆ ಬರುವುದು ಸಾಧ್ಯವಾಗಲು… | ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
ಪ್ರೀತಿಸುವ ಜನರೊಂದಿಗೆ ನಾವು ಬೌಂಡರಿಗಳನ್ನು ಕಟ್ಟಿಕೊಳ್ಳುವುದಿಲ್ಲ. ಅಕಸ್ಮಾತ್ ನಾವೇನಾದರೂ ಬೌಂಡರಿಗಳನ್ನು ಸೆಟ್ ಮಾಡಿಕೊಂಡುಬಿಟ್ಟರೆ ಅವರು ಕೋಪಿಸಿಕೊಳ್ಳಬಹುದು ಎನ್ನುವ ಭಯ ನಮಗೆ. ಆದರೆ ನಾವು ಬೌಂಡರಿಗಳನ್ನು ಹಾಕಿಕೊಳ್ಳದಿದ್ದರೆ, ನಾವು ಪ್ರೀತಿಸುವ ಜನ ಎಷ್ಟು ಒಳಗೆ ಬಂದುಬಿಡುತ್ತಾರೆಂದರೆ, ನಮ್ಮ ಬದುಕನ್ನು ಕಷ್ಟಕ್ಕೆ ನೂಕಿಬಿಡುತ್ತಾರೆ. ಆಗ ನಮಗೆ ನಮ್ಮನ್ನು ರಕ್ಷಿಸಿಕೊಳ್ಳಲು ಇರುವ ದಾರಿ ಎಂದರೆ ಆ ಸಂಬಂಧದಿಂದ ಹೊರಗೆ ಬಂದು ಬಿಡುವುದು.
ನಾವು ಬೌಂಡರಿಗಳನ್ನು ನಿರ್ಧರಿಸುವುದು ಸಂಬಂಧಗಳಲ್ಲಿ ಅಂತರವನ್ನು ಸೃಷ್ಟಿಸುವುದಕ್ಕಲ್ಲ, ಬದಲಾಗಿ ಇನ್ನಷ್ಟು ಹತ್ತಿರಕ್ಕೆ ಬರುವುದು ಸಾಧ್ಯವಾಗಲು. ಬೌಂಡರಿ, ಸಂಬಂಧಗಳಲ್ಲಿ ಅಂತರವನ್ನು ಸೃಷ್ಟಿಸುತ್ತದೆ ಎನ್ನುವುದು ದೊಡ್ಡ ಮಿಥ್. ನನಗೆ ನಮ್ಮ ಮಧ್ಯೆ ಅಂತರ ಬೇಕಿಲ್ಲ ಆದರೆ, ನಾನು ನಿನ್ನೊಂದಿಗೆ ಸಾಧ್ಯವಾದಷ್ಟು ಸುರಕ್ಷಿತವಾಗಿರಲು ಬಯಸುತ್ತೇನೆ. ಕೆಲವೊಮ್ಮೆ ನಿನ್ನ ಮಾತುಗಳು, ನಿನ್ನ ಕ್ರಿಯಗಳು ನನ್ನಲ್ಲಿ ಅಸುರಕ್ಷಿತ ಭಾವವನ್ನು ಉಂಟು ಮಾಡುತ್ತವೆ. ಹಾಗಾಗಿ ಈ ಬೌಂಡರಿ, ಇದು ನಿನ್ನ ದೂರ ಮಾಡಲಿಕ್ಕಲ್ಲ, ಸುರಕ್ಷಿತವಾಗಿ ನಾನು ನಿನಗೆ ಹತ್ತಿರವಾಗುವುದಕ್ಕೆ. ಆದ್ದರಿಂದ ನಿಮ್ಮ ಸಂಬಂಧಗಳಲ್ಲಿ ಬೌಂಡರಿಗಳನ್ನು ಗುರುತಿಸಿಕೊಳ್ಳಿ, ಇದು ಸಂಬಂಧವನ್ನು ಇನ್ನಷ್ಟು ಗಾಢವಾಗಿಸುವ ರೀತಿ.
ಆಕರ : YouTube podcast

