ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ನಿಮ್ಮ ಬಾಯ್ ಫ್ರೆಂಡ್ ಅಥವಾ ಗರ್ಲ್ ಫ್ರೆಂಡ್ ನಿಮಗೆ ಸುಮಾರು ಐವತ್ತು ಬಾರಿ ಫೋನ್ ಮಾಡ್ತಾರೆ ಆದರೆ ನೀವು ಫೋನ್ ರಿಸೀವ್ ಮಾಡಲ್ಲ, ಆಗ ನೀವು ಅವರ ಬಗ್ಗೆ ಏನು ಅಂದ್ಕೊಳ್ತೀರಿ? Dramatic, over sensitive, toxic, clingy ?
ಆದರೆ ಅದು ಹಾಗಿರಲಿಕ್ಕಿಲ್ಲ, ಇದು ಅವರು ಆಳವಾಗಿ ಅನುಭವಿಸುತ್ತಿರುವ ನೋವಿನ ಕಾರಣವಾಗಿರಬಹುದು. ಇದು ಒಂದು ಬಗೆಯ ಭಾವನಾತ್ಮಕ ನೋವು. ಅವರ ಮೆದುಳಿಗೆ ಇದನ್ನು ಹೇಗೆ ಪ್ರೊಸೆಸ್ ಮಾಡಬೇಕು ಎನ್ನುವುದು ಗೊತ್ತಾಗುತ್ತಿಲ್ಲ. ಇದು diagnosis ಅಲ್ಲವಾದರೂ ಈ ಬಗೆಯ ವರ್ತನೆ border line personality disorder (BPD) ಎನ್ನುವ ಸಮಸ್ಯೆಯ ಬಹುಮುಖ್ಯ ಸೂಚನೆ. BPD ಇರುವ ಜನರ ಭಾವನೆಗಳು ಯಾವಾಗಲೂ 200%. ಅವರು ಖುಶಿಯಾಗಿದ್ದರೆ ಅತೀ ಖುಶಿಯಾಗಿರುತ್ತಾರೆ, ದುಃಖದಲ್ಲಿದ್ದರೆ ಅಪಾರ ದುಃಖದಲ್ಲಿರುತ್ತಾರೆ, ಜಗತ್ತೇ ಮುಗಿದು ಹೋಯ್ತು ಅನ್ನುವಷ್ಟು. ಉದಾಹರಣೆಗೆ, ಅಕಸ್ಮಾತ್ ನೀವು ಅವರಿಗೆ good night ಹೇಳದೇ ನಿದ್ದೆ ಹೋಗಿಬಿಟ್ಟರೆ, ನೀವು ಅವರನ್ನ ಪೂರ್ತಿಯಾಗಿ ತ್ಯಜಿಸಿಬಿಟ್ಟಿದ್ದೀರೆಂದು ಅವರು ಭಾವಿಸಿಬಿಡುತ್ತಾರೆ. ಈ ಕಾರಣವನ್ನು ಇಟ್ಟುಕೊಂಡೇ ಅವರು ತಮಗೆ ಹಾನಿ ಕೂಡ ಮಾಡಿಕೊಳ್ಳಬಹುದು. ಅವರು ನಿಮ್ಮ attention ಗಾಗಿ ಹೀಗೆ ಮಾಡುತ್ತಿಲ್ಲ, ಅವರ ಮೆದುಳಿನ emotional system ಅತಿರೇಕದಲ್ಲಿ ಕೆಲಸ ಮಾಡುತ್ತಿದೆ. ಈ ಎಲ್ಲವನ್ನೂ ಮ್ಯಾನೇಜ್ ಮಾಡಬೇಕಾದ ಅವರ ಮೆದುಳಿನ ಭಾಗಕ್ಕೆ ಇದನ್ನ ಹ್ಯಾಂಡಲ್ ಮಾಡುವುದು ಸಾಧ್ಯವಾಗುತ್ತಿಲ್ಲ.
ಇವರಿಗೆ ನಿಮ್ಮ ನಿಜವಾದ ಸಹಾಯದ ಅಶ್ಯಕತೆ ಇದೆ. ಸರಿಯಾದ ಸಪೋರ್ಟ್ ಇದ್ದಾಗ ಅವರಿಗೆ ಮತ್ತು ಅವರ ಪ್ರೀತಿ ಪಾತ್ರರಿಗೆ ಸಂಗತಿಗಳು ಉತ್ತಮಗೊಳ್ಳುತ್ತ ಹೋಗುತ್ತವೆ.
ಆಕರ : YouTube podcast

