ಸಂಗ್ರಹ ಮತ್ತು ಅನುವಾದ ಚಿದಂಬರ ನರೇಂದ್ರ
ಯಾವಾಗ ಮದುವೆಯಂಥ ಸಂಬಂಧಗಳಲ್ಲಿ ಹೆಚ್ಚು ಬೋರಿಂಗ್ ಆವರಿಸಿಕೊಂಡಿರುತ್ತವೆಯೋ ಅಂಥವು ಬೆಸ್ಟ್ ಸಂಬಂಧಗಳು. ನಿಮ್ಮ ಸಂಗಾತಿಯೊಂದಿಗಿನ ಸಂಬಂಧ ನಿಮಗೆ ಬೋರಿಂಗ್ ಅನಿಸುತ್ತಿಲ್ಲವಾದರೆ ಅದು ಒಳ್ಳೆಯ ಸಂಬಂಧ ಅಲ್ಲ.
ಏಕೆಂದರೆ ತೊಂಭತ್ತು ಪ್ರತಿಶತ ಬದುಕು ನಿಜವಾಗಿಯೂ ಬೋರಿಂಗ್. ನೀವು ಬೆಳಿಗ್ಗೆ ನಿದ್ದೆಯಿಂದ ಏಳುತ್ತೀರ, ರೆಡಿ ಆಗುತ್ತೀರ, ಕೆಲಸಕ್ಕೆ ಹೋಗುತ್ತೀರ, ವಾಪಸ್ ಬರುತ್ತೀರ ಮತ್ತೆ ನಿದ್ದೆ ಹೋಗುತ್ತೀರ. ತೊಂಭತ್ತು ಪ್ರತಿಶತ ಬದುಕು ಪ್ರಯಾಣ ಅಲ್ಲ, ಬದುಕಿನ ಉತ್ಕರ್ಷ ಅಲ್ಲ, ಖುಶಿ ಅಲ್ಲ.
ಅತ್ಯುತ್ತಮ ಮದುವೆಯ ಸಂಬಂಧಗಳನ್ನು ಕಟ್ಟಿಕೊಳ್ಳುವ ಕುರಿತಾದ ನನ್ನ ಕೋರ್ ಫಿಲಾಸೊಫಿ ಏನೆಂದರೆ, ಯಾವುದು too high on dopamine ಮತ್ತು too high on adrenaline ಇದೆಯೋ ಅಂಥ ಎಲ್ಲವನ್ನೂ ಅವೊಯಿಡ್ ಮಾಡುವುದು.
ಇಂಥ ಬೋರಿಂಗ್ ಸಂಬಂಧವನ್ನು ಎಂಜಾಯ್ ಮಾಡುತ್ತ ನಿಮ್ಮ ಸಂಗಾತಿಯೊಂದಿಗೆ ನಿಮಗೆ ಖುಶಿಯಾಗಿರುವುದು ಸಾಧ್ಯವಾದರೆ, ಅದು ಅತ್ಯುತ್ತಮ ಮದುವೆಯ ಸಂಬಂಧ.
ಹೀಗೆ ಮದುವೆಯ ಕುರಿತಾದ ಕುತೂಹಲಕಾರಿಯಾದ ಮತ್ತು ಬಹುತೇಕ ಎಲ್ಲರಿಗೂ ಸಹಾಯಕಾರಿಯಾಗಬಹುದ ವಿಷಯವನ್ನು ಹೇಳುತ್ತಾರೆ ಡಾ. ರಿತೇಶ್ ಮಲಿಕ್.

