ನಮ್ಮ ವ್ಯಸನಗಳಿಗೆ ಕಾರಣ ಹೇಳುತ್ತಾರೆ ಖ್ಯಾತ ನ್ಯೂರೋ ಸೈಂಟಿಸ್ಟ್ ಸಿದ್ಧಾರ್ಥ ವಾರಿಯರ್… । ಸಂಗ್ರಹ – ಅನುವಾದ: ಚಿದಂಬರ ನರೇಂದ್ರ
ನೀವು ಮತ್ತೆ ಹಳೆಯ ಸಿರೀಸ್ ಗಳನ್ನ, ಹಳೆಯ ಸಿನೇಮಾಗಳನ್ನ ನೋಡಲು ಇಷ್ಟಪಡುತ್ತಿದ್ದೀರಿ ಎಂದರೆ, ಇದಕ್ಕೆ ನ್ಯೂರೊಲಾಜಿಕಲ್ ಕಾರಣ ಇದೆ. ನಿಮ್ಮ ಮೆದಳು ತಿಳುವಳಿಕೆಯ ಅತೀಭಾರದ ಸಮಸ್ಯೆಯನ್ನು ( problem of cognitive overload) ಅನುಭವಿಸುತ್ತಿದೆ. ಹಾಗೆಂದರೆ ನಿಮ್ಮ ಮೆದುಳು ಕ್ಷಣದಿಂದ ಕ್ಷಣಕ್ಕೆ ಅಸಂಖ್ಯಾತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ ಆದರೆ ಅದಕ್ಕೆ ಹಾಗೆ ಮಾಡುವ ಯಾವ ಆಸಕ್ತಿಯೂ ಇಲ್ಲ.
ನೀವು ಯಾವುದಾದರೂ ಇಂಟೆನ್ಸ್ ಆದ TV ಶೋ ನೋಡುತ್ತಿದ್ದೀರಿ ಎಂದರೆ, ನಿಮ್ಮ ಮೆದುಳು ಆ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ. ಅದು ತನ್ನ ಗಮನವನ್ನು ಹೊಸ ಪಾತ್ರಗಳಲ್ಲಿ ಇನ್ವೆಸ್ಚ್ ಮಾಡಬೇಕು, ಆ ಕುರಿತು ವಿಚಾರ ಮಾಡಬೇಕು, ಮುಂದೆ ಏನಾಗಬಹುದೆಂದು ಊಹಿಸಬೇಕು, ಅದು ಸರಿಯೋ ತಪ್ಪೋ ಎಂದು ನಿರ್ಧಾರ ಮಾಡಬೇಕು.
ಆದರೆ ನೀವು ಸುಮ್ಮನೇ ಕುಳಿತು TV ಶೋ ನೋಡುತ್ತ ಟೈಂ ಪಾಸ್ ಮಾಡಲು ಬಯಸುತ್ತಿರುವಾಗ, ನಿಮಗೆ ಮೆದಳಿನ ಮೇಲೆ ಅಷ್ಟೆಲ್ಲ ಭಾರ ಹಾಕಲು ಮನಸ್ಸಾಗುವುದಿಲ್ಲ. ಆಗ ನೀವು ಈ ಹಿಂದೆ ನೋಡಿದ friends, Big Bang theory ಮುಂತಾದ ಜನಪ್ರೀಯ ಸಿರೀಸ್ ಗಳನ್ನೇ ನೋಡುತ್ತ ಕುಳಿತುಬಿಡುತ್ತೀರಿ, ಏಕೆಂದರೆ ಅದು familiar ಮತ್ತು predictable.

