ಸಂಗ್ರಹ – ಅನುವಾದ: ಚಿದಂಬರ ನರೇಂದ್ರ
ಜಾವೇದ್ ಅಖ್ತರ್ ಒಬ್ಬ ಪತ್ರಕರ್ತನ ಜೊತೆ ಕಾರಲ್ಲಿ ಹೋಗ್ತಾ ಇರುವಾಗ, ಆ ಪತ್ರಕರ್ತನಿಗೆ ಒಂದು ಬಿಲ್ಡಿಂಗ್ ತೋರಿಸಿ ಹೇಳ್ತಾರೆ..
“ ನೋಡು ನನ್ನ ಕರಿಯರ್ ನ ಶುರುವಾತಿನಲ್ಲಿ ನಾನು ಆ ಬಿಲ್ಡಿಂಗ್ ನ ಪೋರ್ಟಿಕೋದಲ್ಲಿ ಮಲ್ಕೊಳ್ತಾ ಇದ್ದೆ”.
ಮುಂದೆ ಮಾತುಕತೆಯಲ್ಲಿ ಜಂಜಿರ್ ಸಿನೇಮಾದ ಪ್ರಸ್ತಾಪ ಬರುತ್ತದೆ. ಹೇಗೆ ಆ ಸಿನೇಮಾವನ್ನ ಅಂದಿನ ಘಟಾನುಘಟಿ ಹೀರೋಗಳು ಒಪ್ಪಿಕೊಳ್ಳಲಿಲ್ಲ, ಕೊನೆಗೆ ಹೇಗೆ ತಾವು ಅವತ್ತು ಹೊಸ ನಟನಾಗಿದ್ದ ಅಮಿತಾಭ್ ನ ಆ ಸಿನೇಮಾದ ಹೀರೋ ಆಗಿ ಸಿಲೆಕ್ಚ್ ಮಾಡಿದ್ವಿ ಅನ್ನೋದನ್ನ ಜಾವೇದ್, ಆ ಪತ್ರಕರ್ತನಿಗೆ ವಿವರಿಸ್ತಾರೆ. ಆಗ ಆ ಪತ್ರಕರ್ತ ಒಂದು ಪ್ರಶ್ನೆ ಕೇಳ್ತಾನೆ, “
“ಅಕಸ್ಮಾತ್ ಅಂದಿನ ಆ ಜನಪ್ರಿಯ ಹೀರೋಗಳಲ್ಲಿ ಯಾರಾದರೊಬ್ಬರು ಜಂಜೀರ್ ಸಿನೇಮಾ ಒಪ್ಪಿಕೊಂಡು ಬಿಟ್ಟಿದ್ರೆ ಏನಾಗ್ತಾ ಇತ್ತು?”
ಈ ಪ್ರಶ್ನೆಗೆ ಜಾವೇದ್ ನಗುನಗುತ್ತ ಉತ್ತರಿಸುತ್ತಾರೆ.
“ನಾನು ಇವತ್ತೂ ಆ ಬಿಲ್ಡಿಂಗ್ ನ ಪೋರ್ಟಿಕೋದಲ್ಲಿ ಮಲ್ಕೊಳ್ತಾ ಇದ್ದೆ”.

