ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
ಒಮ್ಮೆ ಐನಸ್ಟೈನ್ ಗೆ ಬಹಳ ಮಹತ್ವದ ಪ್ರಶ್ನೆಯೊಂದನ್ನ. ಕೇಳಲಾಯಿತು….
“Is there a God?, ದೇವರಿದ್ದಾನೆಯೇ?, ಜಗತ್ತಿನ ಎಲ್ಲದಕ್ಕೂ ಅರ್ಥವಿದೆಯಾ?”
ಐನಸ್ಟೈನ್ ಉತ್ತರಿಸಿದ……
ಎರಡು ರೀತಿಯ ದೇವರುಗಳಿದ್ದಾರೆ. ನಾವು ಸೈಂಟಿಫಿಕ್ ಆಗಿ ದೇವರು ಎಂದರೇನು ಎನ್ನುವುದನ್ನ ಮೊದಲು ಡಿಫೈನ್ ಮಾಡಬೇಕು. ಆ ದೇವರು, ಹಸ್ತಕ್ಷೇಪದ ದೇವರಾಗಿದ್ದರೆ ( God of intervention), ವೈಯಕ್ತಿಕ ದೇವರು, ಪ್ರಾರ್ಥನೆಯ ದೇವರು, ನಾವು ಕೇಳಿದ್ದನ್ನ ಕೊಡುವ ದೇವರಾಗಿದ್ದರೆ ನನಗೆ ಇಂಥ ದೇವರನ್ನು ಒಪ್ಪಿಕೊಳ್ಳುವುದು ಕಷ್ಟ.
ಆದರೆ ನನಗೆ God of order, ಸೌಹಾರ್ದದ ದೇವರು, ಸೌಂದರ್ಯದ ದೇವರು, ಸರಳತೆಯ ದೇವರು, God of elegance, ಸ್ಪಿನೋಜ ನ ದೇವರಲ್ಲಿ ವಿಶ್ವಾಸ. ಈ ಬ್ರಹ್ಮಾಂಡ ಎಷ್ಟು ಅದ್ಭುತವಾಗಿದೆಯೆಂದರೆ, ಅದು ಹೀಗಿರಬೇಕಾಗಿರಲಿಲ್ಲ, ಅದು ಅಸ್ತವ್ಯಸ್ತವಾಗಿರಬಹುದಿತ್ತು, ಕುರೂಪಿಯಾಗಿರಬಹುದಿತ್ತು, ಗಲೀಜಾಗಿರಬಹುದಿತ್ತು, ಗೊಂದಲಮಯವಾಗಿರಬಹುದಿತ್ತು. ಆದರೆ ಜಗತ್ತು ಹಾಗಿಲ್ಲ. ಅದು ವ್ಯವಸ್ಥಿತವಾಗಿದೆ, ಸುಂದರವಾಗಿದೆ.
ಭೌತಶಾಸ್ತ್ರದ ಎಲ್ಲ ಸಮೀಕರಣಗಳನ್ನು ಒಂದು ಕಾಗದದ ಮೇಲೆ ಸರಳವಾಗಿ ಬರೆದುಬಿಡಬಹುದು. ನನ್ನ ಥಿಯರಿ ಆಫ್ ರಿಲೆಟಿವಿಟಿಯ ಇಕ್ವೇಷನ್ ಒಂದು ಇಂಚ್ ಕೂಡ ಉದ್ದ ಇಲ್ಲ. ಅಷ್ಟು ಸರಳವಾಗಿದೆ ಎಲ್ಲವೂ. ನಾನು ಈ ಎಲ್ಲದರ ಹಿಂದಿರುವ ವ್ಯವಸ್ಥೆಯನ್ನ ಬೇಕಾದರೆ ದೇವರು ಎಂದು ಒಪ್ಪಿಕೊಳ್ಳಲು ತಯಾರಾಗಿದ್ದೀನಿ.
ಆಕರ : You Tube podcast

