ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ಎಲ್ಲರೂ, ನೀವು ಕೊಡುವ ಎಲ್ಲವನ್ನೂ ಸ್ವೀಕರಿಸುವ ಸಾಮರ್ಥ್ಯ ಹೊಂದಿರುವುದಿಲ್ಲ. ನಿಮ್ಮ ಬಳಿ ಎರಡು ಲೀಟರ್ ಹಾಲು ಇದೆ ಮತ್ತು ನೀವು ಆ ಎಲ್ಲವನ್ನೂ ಇನ್ನೊಬ್ಬರಿಗೆ ಕೊಡಲು ಬಯಸುತ್ತೀರಿ. ಆದರೆ ಅವರ ಬಳಿ ಕೇವಲ 100 mL ಮಾತ್ರ ಹಾಲು ಹಿಡಿಸುವಂಥ ಕಪ್. ನೀವು ಅವರಿಗೆ ಎರಡು ಲೀಟರ್ ಹಾಲು ಕೊಟ್ಟರೂ ಅವರಿಗೆ ಅದನ್ನು ಹಿಡಿದಿಡುವಷ್ಟು ಕೆಪ್ಯಾಸಿಟಿ ಇಲ್ಲ. ಅವರು ನಿಮ್ಮ ಮೇಲೆ ರೇಗಿ ಬಿಡಬಹುದು, “ ಹುಚ್ಚಾ ನಿನಗೆ? ನೀನು, ನನ್ನ ಬಟ್ಟೆ ಎಲ್ಲ ಹಾಳು ಮಾಡಿಬಿಟ್ಟೆ” ಅಂತ.
ಅವರ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳುವ ಜವಾಬ್ದಾರಿಯೂ ನಮ್ಮದೇ. ಅವರನ್ನು ದೂರಿ ಪ್ರಯೋಜನವಿಲ್ಲ. ಯಾರು ನಮ್ಮಿಂದ ಎಷ್ಟು ಪಡೆದುಕೊಳ್ಳಲು ಸಮರ್ಥರೋ ಅವರಿಗೆ ಅಷ್ಟೇ ಕೊಡಿ. ಬಾಕಿ ಉಳಿದಿರುವುದನ್ನು ನಿಮಗಾಗಿ ಇಟ್ಟುಕೊಳ್ಳಿ. ಇದೇ self love. ಎಲ್ಲವನ್ನೂ ನಾನು ನಿನಗೆ ಕೊಡುವ ಅಶ್ಯಕತೆ ಇಲ್ಲ.
ಆಕರ : You Tube podcast

