ಅಟ್ಯಾಚ್ಮೆಂಟ್ ಪ್ರೇಮ ಅಲ್ಲ!

ಸಂಗ್ರಹ – ಅನುವಾದ: ಚಿದಂಬರ ನರೇಂದ್ರ

ಹೊಟೇಲಿನಲ್ಲಿ ರೂಂ ಮಾಡಿಕೊಂಡು ಒಂದು ಹತ್ತು ದಿವಸ ಸತತ ಇದ್ದುಬಿಡಿ. ಹತ್ತು ದಿನದ ನಂತರ ನೀವು ಆ ಹೊಟೇಲ್ ಬಿಟ್ಚು ಹೋಗುವಾಗ ನಿಮಗೆ ಏನೋ ಒಂದು ಸಣ್ಣ sadness ಫೀಲ್ ಆಗುತ್ತದೆ, ಇದು ಅಟ್ಯಾಚ್ಮೆಂಟ್. ಅದೇ ನೀವು ಪ್ರತಿ ಎರಡು ದಿನಕ್ಕೊಮ್ಮೆ ಹೊಟೇಲಿನಲ್ಲಿ ರೂಂ ಚೇಂಜ್ ಮಾಡ್ತಾ ಇದ್ರೆ ನಿಮಗೆ ಈ sadness ಫೀಲ್ ಆಗುವುದಿಲ್ಲ. ಸರಳವಾಗಿ ಹೇಳುವುದಾದರೆ ಅಟ್ಯಾಚ್ಮೆಂಟ್, ಟೈಂ ಗೆ ಸಂಬಂಧಿಸಿದ್ದು.

ಟೈಂ ಬದಲಾಗುತ್ತಿದ್ದರೂ ಆ ಸಂಗತಿ ( ಈ ಕೇಸಿನಲ್ಲಿ ರೂಂ) ಬದಲಾಗಲಿಲ್ಲವಲ್ಲ. ಆದ್ದರಿಂದ ನಮಗೆ ಆ ಸಂಗತಿ ಶಾಶ್ವತ ಎನ್ನುವ ಭಾವನೆ ಬಂದುಬಿಡುತ್ತದೆ. ಮತ್ತು ಈ ಸಂಗತಿ ಶಾಶ್ವತ ಎನ್ನುವ ಭ್ರಮೆ ನಮ್ಮೊಳಗೆ ಹುಟ್ಟಿಕೊಂಡುಬಿಟ್ಟಿತೆಂದರೆ ನಾವು ಆ ಸಂಗತಿಯನ್ನು ಸಿಕ್ಕಾಪಟ್ಚೆ desperate ಆಗಿ ಪ್ರೀತಿಸಲು ಶುರು ಮಾಡುತ್ತೇವೆ.

ಆದ್ದರಿಂದ ಯಾವುದೋ ಒಂದು ಸಂಗತಿ ಬಹಳಷ್ಟು ಕಾಲ ನಿಮ್ಮ ಜೊತೆ ಇದೆ ಎಂದರೆ ಖಂಡಿತ ನೀವು ಆ ಸಂಗತಿಯೊಂದಿಗೆ ಅಟ್ಯಾಚ್ಮೆಂಟ್ ಬೆಳೆಸಿಕೊಳ್ಳುತ್ತೀರಿ. ಈ ಅಟ್ಯಾಚ್ಮೆಂಟ್ ನ ಪ್ರೇಮ ಎಂದುಕೊಂಡು ಗೊಂದಲಕ್ಕೊಳಗಾಗ ಬೇಡಿ. ಅದು ಪ್ರೇಮ ಅಲ್ಲ.


ಆಕರ : You Tube podcast

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.