ಸಂಬಂಧದಲ್ಲಿ ಮೂರು ಮುಖ್ಯ ಸಂಗತಿಗಳು …

ಸಂಗ್ರಹ – ಅನುವಾದ : ಚಿದಂಬರ ನರೇಂದ್ರ

ಸಂಬಂಧಗಳಲ್ಲಿ ಈ ಮೂರು ಸಂಗತಿಗಳು ಬಹಳ ಮುಖ್ಯ
1. ಕೆಮಿಸ್ಟ್ರಿ
2. ಹೊಂದಾಣಿಕೆ ( Compatibility)
3. ಸಂಪರ್ಕ ( Connection )

ಕೆಮಿಸ್ಟ್ರಿ ಒಂದು ಕಿಡಿ ಇದ್ದ ಹಾಗೆ. ಒಬ್ಬ ವ್ಯಕ್ತಿ ನಿಮಗೆ ಥಟ್ಟನೇ ಇಷ್ಟವಾಗುತ್ತಾನೆ/ಳೆ. ಅವನನ್ನು ಅಥವಾ ಅವಳನ್ನು ಕಂಡೊಡನೆ ನಿಮ್ಮಲ್ಲೊಂದು ಕಿಡಿ ಹೊತ್ತಿಕೊಳ್ಳುತ್ತದೆ. ಇಂಥದು ನಿಮಗೆ ನೂರಾರು ಜನರ ಜೊತೆ ಆಗಬಹುದು. ಈ ಕೆಮಿಸ್ಟ್ರಿ ಏನಿದೆಯಲ್ಲ ಅದು ಪ್ರೇಮ ಅಲ್ಲ.

ಎರಡನೇಯದು ಹೊಂದಾಣಿಕೆ. ಒಬ್ಬ ವ್ಯಕ್ತಿ ಎಷ್ಟು ನಿಮ್ಮ ಅನಿಸಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಾನೆ/ಳೆ. ಎಷ್ಟು ನಿಮ್ಮ ಅವಶ್ಯಕತೆಗನುಸಾರವಾಗಿ ನಡೆದುಕೊಳ್ಳುತ್ತಾರೆ, ಹೊಂದಿಕೊಳ್ಳುತ್ತಾರೆ. ಎಷ್ಟು ನಿಮ್ಮ ರೀತಿ ನೀತಿಗಳಿಗೆ ಹೊಂದಿಕೊಳ್ಳುತ್ತಾರೆ. ಇತ್ಯಾದಿಯಾಗಿ. ಇದು ಕೂಡ ತನ್ನಷ್ಟಕ್ಕೇ ಪ್ರೇಮವಲ್ಲ.

ಮೂರನೇಯದು ಮತ್ತು ಬಹಳ ಮಹತ್ವದ್ದು ಕನೆಕ್ಷನ್. ಯಾವಾಗ ಈ ಕನೆಕ್ಷನ್, ಹೊಂದಾಣಿಕೆ ಮತ್ತು ಕೆಮಿಸ್ಟ್ರಿಯ ಜೊತೆ ಸಾಧ್ಯವಾಗುತ್ತದೆಯೋ ಅದು ಪ್ರೇಮ.


ಆಕರ : You Tube podcast

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply

This site uses Akismet to reduce spam. Learn how your comment data is processed.