ಸಂಯಮ ( Austerity) : ಓಶೋ 365 #Day 135

Listening ಗೆ ಲ್ಯಾಟಿನ್ ಲ್ಲಿ ಒಂದು ಪದವಿದೆ, Obedire. ಇಂಗ್ಲೀಷ ಪದ obedience ನ ಮೂಲ ಇದು. ಸರಿಯಾಗಿ ಕೇಳಿಸಿಕೊಂಡರೆ ಅದು obedience ~ ಓಶೋ ರಜನೀಶ್, ಕನ್ನಡಕ್ಕೆ: ಚಿದಂಬರ ನರೇಂದ್ರ

ಇಡೀ ಬ್ರಹ್ಮಾಂಡ ಅಡಗಿರುವುದು
ಒಬ್ಬನೇ ಒಬ್ಬ ಮನುಷ್ಯನಲ್ಲಿ,
ಮತ್ತು ಅದು ನೀನು.

ನೀನು ಸುತ್ತ ಕಾಣುತ್ತಿರುವ ಎಲ್ಲವೂ,
ನಿನಗೆ ಇಷ್ಟ ಆಗದ ಸಂಗತಿಗಳನ್ನೂ ಒಳಗೊಂಡು,
ನೀನು ತಿರಸ್ಕಾರದಿಂದ, ಅಸಹ್ಯವಾಗಿ ಕಾಣುವ
ಜನರನ್ನೂ ಸೇರಿಸಿ,
ಎಲ್ಲ ಒಂದಿಲ್ಲ ಒಂದು ಮಟ್ಟದಲ್ಲಿ
ನಿನ್ನೊಳಗೇ ಮನೆ ಮಾಡಿದ್ದಾರೆ.

ಸೈತಾನನಿಗಾಗಿ ಹೊರಗೆಲ್ಲೂ ಹುಡುಕಬೇಡ.

ನೀನು ನಿನ್ನನ್ನು ಪೂರ್ಣವಾಗಿ, ಪ್ರಾಮಾಣಿಕವಾಗಿ,
ಧೈರ್ಯದಿಂದ ಎದುರಗೊಂಡಾಗ,

ಸೈತಾನ, ಎಲ್ಲಿಂದಲೋ ಅಚಾನಕ್ ಆಗಿ ಬಂದು
ನಿನ್ನ ಮೇಲೆ ಆಕ್ರಮಣ ಮಾಡುವ
ಅಸಾಧಾರಣ ಶಕ್ತಿಯಲ್ಲ.
ಬದಲಾಗಿ, ನಿನ್ನೊಳಗೇ ಅಡಗಿಕೊಂಡಿರುವ
ಸಾಮಾನ್ಯ ದನಿ.

~ ಶಮ್ಸ್ ತಬ್ರೀಝಿ

Listening, ಸರಿಯಾಗಿ ಗಮನಿಸಿದರೆ ಅದು ತನ್ನದೇ ಆದ ಶಿಸ್ತೊಂದನ್ನು ಸಾಧ್ಯ ಮಾಡುತ್ತದೆ. ಮೂಲ ಪ್ರಶ್ನೆ ಎಂದರೆ, ಕೇಳುವಾಗ ಒಳಗೆ ನಾವು ಪೂರ್ತಿಯಾಗಿ ಖಾಲೀಯಾಗಿರಬೇಕು, ನೋಡುವಾಗ ಪೂರ್ತಿಯಾಗಿ ಖಾಲೀಯಾಗಿರಬೇಕು, ಮುಟ್ಟುವಾಗ ಪೂರ್ತಿಯಾಗಿ ಖಾಲೀಯಾಗಿರಬೇಕು, ಪರ ಅಥವಾ ವಿರೋಧದ ಯಾವ ಪೂರ್ವಾಗ್ರಹವೂ ನಮ್ಮೊಳಗೆ ಇರಬಾರದು. ನಮ್ಮೊಳಗೆ ಯಾವುದರ ಪರವಾಗಿಯೂ ಯಾವ ಸೂಕ್ಷ್ಮ ಒಲವು ಇರಬಾರದು, ನಾವು ಯಾವುದರೊಳಗೂ ಇನ್ವಾಲ್ವ ಆಗಿರಬಾರದು. ಏಕೆಂದರೆ ನಮ್ಮ ಒಲವು ಸತ್ಯವನ್ನು ನಾಶ ಮಾಡಿಬಿಡಬಹುದು. ಯಾವುದರ ಪರವಾಗಿಯೂ ಒಲವು ಬೆಳೆಸಿಕೊಳ್ಳದೆ, ಅದು ಏನೇ ಇರಲಿ, ಸತ್ಯವನ್ನು ಅದು ಇರುವ ಹಾಗೆ ಇರಲು ನಾವು ಅವಕಾಶ ಮಾಡಿಕೊಡಬೇಕು.

ಇದು ಧಾರ್ಮಿಕ ವ್ಯಕ್ತಿಯ ಸಂಯಮದ ಬದುಕು. ಇದು ನೈಜ ಸಂಯಮ : ಸತ್ಯವನ್ನು ಡಿಸ್ಟರ್ಬ್ ಮಾಡದೇ ಅದು ಇರುವ ಹಾಗೆ ಇರಲು ಅವಕಾಶ ಮಾಡಿಕೊಡುವುದು, ಅದಕ್ಕೆ ಯಾವ ಬಣ್ಣ ಹಚ್ಚದೇ, ಅದನ್ನು ಮ್ಯಾನ್ಯುಪುಲೇಟ್ ಮಾಡದೇ, ನಿಮ್ಮ ಸ್ವಂತದ ನಂಬಿಕೆಗೆ ಅನುಸಾರವಾಗಿ ಅದನ್ನು ಮ್ಯಾನೇಜ್ ಮಾಡದೇ, ಅದು ಇರುವ ಹಾಗೆ ಇರಲು ಅವಕಾಶ ಮಾಡಿಕೊಡುವುದು. ಯಾವಾಗ ನೀವು ಸತ್ಯವನ್ನು ಅದು ಇರುವ ಹಾಗೆ ಇರಲು ಅವಕಾಶ ಮಾಡಿಕೊಡುತ್ತೀರೋ, ನಿತ್ಯ ನೂತನವಾಗಿ, ಬೆತ್ತಲೆಯಾಗಿ, ಆಗ ಒಂದು ಮಹಾ ಶಿಸ್ತು ನಿಮ್ಮೊಳಗೆ ಹುಟ್ಟಿಕೊಳ್ಳುತ್ತದೆ – obedience . ನಿಮ್ಮೊಳಗೆ ಒಂದು ಮಹಾ ವ್ಯವಸ್ಥೆಯ ಉಗಮವಾಗುತ್ತದೆ.

ಆಗ ನೀವು ಯಾವ ಅವ್ಯವಸ್ಥೆಯ ಸುಳಿಗೆ ಸಿಲುಕಿಕೊಳ್ಳುವುದಿಲ್ಲ ; ಮೊಟ್ಟ ಮೊದಲ ಬಾರಿಗೆ ನೀವು ಕೇಂದ್ರವನ್ನು ಆಕ್ರಮಿಸಿಕೊಳ್ಳುತ್ತೀರಿ, ಏಕೆಂದರೆ, ನಿಮಗೆ ಗೊತ್ತಿರುವ ಸತ್ಯ, ನಿಮ್ಮ ಸತ್ಯವಾಗುತ್ತದೆ. ನಿಮಗೆ ಗೊತ್ತಿರುವ ಸತ್ಯ ಕೂಡಲೇ ನಿಮ್ಮ ಬದಲಾವಣೆಗೆ ಕಾರಣವಾಗುತ್ತದೆ. ಆಗ ನೀವು ಅದೇ ಹಳೆಯ ಮನುಷ್ಯ ಅಲ್ಲ. ಮತ್ತು ಸತ್ಯದ ಕುರಿತಾದ ಆ ದರ್ಶನ, ಆ ಸ್ಪಷ್ಟತೆ, ಮತ್ತು ಆ ಅನುಭವ ಥಟ್ಚನೇ ನಿಮ್ಮನ್ನು ರೂಪಾಂತರಗೊಳಿಸುತ್ತದೆ. ನಿಜದ ಧರ್ಮ ಸಾಧ್ಯಮಾಡಬಲ್ಲ ಕ್ರಾಂತಿ ಇದು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.