ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ಹದ್ದುಗಳು, ಹಾವುಗಳೊಂದಿಗೆ ಭೂಮಿಯ ಮೇಲೆ ಕದನಕ್ಕಿಳಿಯುವುದಿಲ್ಲ. ಹದ್ದಿಗೆ ಗೊತ್ತು ಭೂಮಿಯ ಮೇಲೆ ಹಾವಿನೊಡನೆ ಯುದ್ಧ ಮಾಡಿದರೆ ಅದನ್ನು ಸೋಲಿಸುವುದು ಕೊಲ್ಲುವುದು ಕಷ್ಟ. ಏಕೆಂದರೆ ಭೂಮಿಯ ಮೇಲೆ ಹಾವು ಕಂಫರ್ಟಬಲ್ ಆಗಿರುತ್ತದೆ. ಹದ್ದು ಏನು ಮಾಡುತ್ತದೆಂದರೆ, ಅದು ಹಾವನ್ನು ಅದರ ಕಂಫರ್ಟೇಬಲ್ ಜಾಗದಿಂದ ಎತ್ತಿಕೊಂಡು ಹೋಗಿ ಆಕಾಶದಲ್ಲಿ ಎಸೆಯುತ್ತದೆ. ಆಕಾಶದಲ್ಲಿ ಹಾವಿಗೆ ಸ್ಟ್ಯಾಮಿನಾ ಇಲ್ಲ, ಅಲ್ಲಿ ಅದು ನಿಸ್ಸಹಾಯಕ, ದುರ್ಬಲ. ಹೀಗೆ ಹದ್ದು ಹಲವಾರು ಬಾರಿ ಮಾಡುತ್ತದೆ. ಆಕಾಶದಲ್ಲಿ ಎಸೆದ ಹಾವನ್ನು ಮತ್ತೆ ಮತ್ತೆ ಹಿಡಿದುಕೊಳ್ಳುತ್ತದೆ ಹದ್ದು. ಆಕಾಶದಲ್ಲಿ ಹಾವಿಗೆ, ಹದ್ದಿನೊಂದಿಗೆ ಹೋರಾಡುವ ಸಾಮರ್ಥ್ಯ ಇಲ್ಲ. ಆಗ ಅದು ಸೋತು ಶರಣಾಗಿಬಿಡುತ್ತದೆ.
ಥೇಟ್ ಇದೇ ಫರ ನಿಮ್ಮ ಸಂಕಟಗಳ, ಕಷ್ಟಗಳ ವಿಷಯ. ಅವನ್ನು ದಿನ ನಿತ್ಯದ ಬದುಕಿನ ವಲಯದಲ್ಲಿ ಎದುರಿಸುವುದು ಕಷ್ಟ. ಯಾವಾಗ ನೀವು ಅವನ್ನು ಪ್ರಾರ್ಥನೆಯ ವಲಯಕ್ಕೆ ಎತ್ತಿಕೊಂಡು ಹೋಗುತ್ತೀರೋ ಅಲ್ಲಿ ಅವುಗಳನ್ನು ಸುಲಭವಾಗಿ ಸೋಲಿಸಬಹುದು. ಸಂಕಟಗಳನ್ನು ಪ್ರಾರ್ಥನೆಯ ವಲಯಕ್ಕೆ ತೆಗೆದುಕೊಂಡು ಹೋಗುವುದು ಥೇಟ್ ಹದ್ದು ಹಾವನ್ನು ಆಕಾಶಕ್ಕೆ ಎತ್ತಿ ಎಸೆದಂತೆ. ಪ್ರಾರ್ಥನೆಯ ವಲಯದಲ್ಲಿ ನೀವು ನಿಮ್ಮ ಕಷ್ಟಗಳ ಮೇಲೆ ಮೇಲುಗೈ ಸಾಧಿಸುತ್ತೀರಿ, ಅಲ್ಲಿ ನಿಮಗೆ ಭಗವಂತನ ಬೆಂಬಲವಿದೆ. ಅಲ್ಲಿ ನಿಮ್ಮ ಕಷ್ಟಗಳು ನಿಸ್ಸಹಾಯಕ ಮತ್ತು ದುರ್ಬಲ.
ಕೂಡಲೇ ನಿಮ್ಮ ಕಷ್ಟಗಳು ಮಾಯವಾಗದಿದ್ದರೂ ನಿಮ್ಮ ಪ್ರಾರ್ಥನೆ ಅವನ್ನು ನಿಮ್ಮ ಮುಂದೆ ಮಂಡಿಯೂರುವಂತೆ ಮಾಡುತ್ತದೆ. ಕೊನೆಗೆ ನೀವು ನಿಮ್ಮ ಕಷ್ಟಗಳ ಮೇಲೆ ಗೆಲುವು ಸಾಧಿಸುವಿರಿ.
ಆಕರ : You Tube podcast

