ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ನಿಮ್ಮ ಭಾವನಾತ್ಮಕ ಸಂಘರ್ಷಗಳನ್ನು ಈ ಮೂರು ಜನರೊಂದಿಗೆ ಮಾತ್ರ ಯಾವತ್ತೂ ಹಂಚಿಕೊಳ್ಳಬೇಡಿ. ಮೂರನೇ ಥರದ ಜನರಂತೂ ಮಹಾ ಅಪಾಯಕಾರಿ. ಈ ಮೂರು ಥರದ ಜನ ಯಾರೆಂದರೆ……
- ಕುಗ್ಗಿಸುವವರು ( Minimizers )
ನನಗೆ ಆತಂಕವಾಗುತ್ತಿದೆ ಎಂದು ನೀವು ಹೇಳಿದಾಗ,
ಅವರು ಹೇಳುತ್ತಾರೆ ಇದು ಎಲ್ಲರಿಗೂ ಆಗುತ್ತದೆ, ಜಾಸ್ತಿ ನಾಟಕ ಮಾಡಬೇಡ.
ಇದು ನನಗೆ ನೋವುಂಟು ಮಾಡಿತು ಎಂದು ನೀವು ಹೇಳಿದರೆ
ಅವರು ಹೇಳುತ್ತಾರೆ….. ಇದೇನು ದೊಡ್ಡ ವಿಷಯವಲ್ಲ.
ಇಂಥವರು ಅಪಾಯಕಾರಿ ಅಲ್ಲದಿದ್ದರೂ ಅವರಿಗೆ ಭಾವನಾತ್ಮಕ ಆಳ ಇಲ್ಲ. ಭಾವನೆಗಳನ್ನು ಹತ್ತಿಕ್ಕಿಕೊಳ್ಳುವಲ್ಲಿ ಅವರು ತಮ್ಮನ್ನು ತಾವು ತರಬೇತುಗೊಳಿಸಿಕೊಂಡಿದ್ದಾರೆ. ಆದ್ದರಿಂದ ನಿಮ್ಮ ಭಾವನೆಗಳನ್ನು ನೀವು ಅವರೆದುರು ಹಂಚಿಕೊಂಡಾಗ ಅವರು ನಿಮ್ಮನ್ನು ಶೇಮ್ ಮಾಡುತ್ತಾರೆ.
- ಸ್ಪರ್ಧಿಗಳು ( Competitors )
ಪ್ರತಿಬಾರಿ ನೀವು ಅವರೆದುರು ನಿಮ್ಮ ಭಾವನೆಗಳನ್ನು ತೆರೆದಿಟ್ಟಾಗ, ಅವರು ನಿಮ್ಮನ್ನು ಅವರಿಗಿಂತ ಕೆಳಗಿಟ್ಟು ನೋಡುತ್ತಾರೆ. ಅವರಿಗೆ ಅವರ ನೋವು ಮಾತ್ರ ದೊಡ್ಡದು, ಮಹತ್ವದ್ದು ಮತ್ತು ತೀವ್ರವಾದದ್ದು. ಆದ್ದರಿಂದ ನಿಮ್ಮ ನೋವನ್ನು ಅವರು ಡಿಸ್ಮಿಸ್ ಮಾಡಿಬಿಡುತ್ತಾರೆ. ಅವರು ನಿಮ್ಮ ಹೋರಾಟಗಳನ್ನು ಕ್ಷುಲ್ಲಕ ಮಾಡಿಬಿಡುತ್ತಾರೆ.
- ವದಂತಿಗಾರರು ( Gossiper )
ಇವರು ನಿಮ್ಮೆದುರು ತಾವು ಬಹಳ ಸುರಕ್ಷಿತ, ಕುತೂಹಲಿಗಳು ಮತ್ತು ಆಪ್ತ ಎನ್ನುವ ಭಾವನೆ ಹುಟ್ಟಿಸುತ್ತಾರೆ. ಆದರೆ ನಂತರ, ನಿಮ್ಮ ಕತೆ ಅವರ ಸಂಭಾಷಣೆಯ ಭಾಗವಾಗುತ್ತದೆ. ಅವರು ನಿಮ್ಮ ದೌರ್ಬಲ್ಯವನ್ನು (vulnerability) ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಾರೆ. ಇಲ್ಲಿ ನೀವು ಗಮನಿಸಬೇಕಾದದ್ದು ಏನೆಂದರೆ, ಅವರ ಬೇರೆಯವರ ಗಾಸಿಪ್ ನಿಮ್ಮೆದುರು ಹೇಳಬಲ್ಲರಾದರೆ ನಾಳೆ ನಿಮ್ಮ ವಿಷಯವನ್ನೂ ಬೇರೆಯವರೆದುರು ಗಾಸಿಪ್ ಮಾಡಬಹುದು.
ಆದ್ದರಿಂದ ನೆನಪಿರಲಿ, ಎಲ್ಲರೂ ನಿಮ್ಮ ದೌರ್ಬಲ್ಯಗಳನ್ನು ಪ್ರಾಮಾಣಿಕವಾಗಿ ಯಾವ ಜಡ್ಜ್‌ಮೆಂಟ್ ಇಲ್ಲದೇ ಕೇಳಿಸಿಕೊಳ್ಳುವಷ್ಟು ಒಳ್ಳೆಯವರಾಗಿರುವುದಿಲ್ಲ. ನಿಮ್ಮ ಅಂತರಂಗದ ಜಗತ್ತನ್ನು ಎಲ್ಲರೆದುರು ತೆರೆದಿಡುವ ಅವಶ್ಯಕತೆ ಇಲ್ಲ. ನಿಮ್ಮ ಭಾವನೆಗಳನ್ನ ಕೇವಲ ಎಲ್ಲಿ ಸೇಫ್ಚಿ, ಅಂತಃಕರಣ, ಮತ್ತು ಗೌರವ ಇದೆಯೋ ಅಲ್ಲಿ ಮಾತ್ರ ಹಂಚಿಕೊಳ್ಳಿ.
ಆಕರ : You Tube podcast


podcast link please
LikeLike