ಸಂಗ್ರಹ – ಅನುವಾದ: ಚಿದಂಬರ ನರೇಂದ್ರ
“ಕಿಶೋರ ದಾ, ನೀವು ಹಾಡಿದ ಹೊಸ ಸಿನೇಮಾದ ಹಾಡುಗಳು ಎಷ್ಟು ಮಸ್ತಾಗಿವೆ, ಆದರೆ ಯಾಕೆ ಸಿನೇಮಾ ರಿಲೀಸ್ ಆಗ್ತಿಲ್ಲ”
“ಏನು ಮಾಡಲಿ ನಾನು? ನಿರ್ದೇಶಕ ಮತ್ತು ನಿರ್ಮಾಪಕರ ಜಗಳದ ನಡುವೆ ಸಿಕ್ಕಿಹಾಕಿಕೊಂಡಿದೀನಿ”
“ಏನಾಯ್ತು”
“ನಿರ್ದೇಶಕ, ಇನ್ನೂ ದೊಡ್ಡ ಸೆಟ್ ಹಾಕಬೇಕು, extra ಡಾನ್ಸರ್ಸ್ ಬೇಕು, ಅದಕ್ಕಾಗಿ ಹಣ ಬೇಕು ಅಂತಾನೆ. ಆದರೆ ನಿರ್ಮಾಪಕ ಒಂದು ಪೈಸೆ ದುಡ್ಡೂ ಖರ್ಚು ಮಾಡಲಿಕ್ಕೆ ತಯಾರಿಲ್ಲ. ನಾನೇನು ಮಾಡಲಿ?”
“ಸಿನ್ಮಾದ ನಿರ್ದೇಶಕ ಯಾರು?”
“ನಾನು”
“ನಿರ್ಮಾಪಕ ಯಾರು?”
“ನಾನೇ”
ಹಿಗೊಂದು ಕಿಶೋರ್ ದಾ ತರಲೆಯನ್ನ ವಿವರಿಸುತ್ತಾರೆ ಅವರ ಮಗ ಅಮೀತ್ ಕುಮಾರ್.

