ಸಿನೇಮಾ ಸೆನ್ಸಾರ್ ಮಂಡಳಿಯ ಕಾರ್ಯಶೈಲಿಯ ಬಗ್ಗೆ ಕಮೆಂಟ್ ಮಾಡುತ್ತ ಕವಿ, ಸಿನೇಮಾ ನಿರ್ದೇಶಕ, stand up comedian ವರುಣ್ ಗ್ರೋವರ್ ಹೇಳಿದ ಜೋಕ್… । ಸಂಗ್ರಹ – ಅನುವಾದ: ಚಿದಂಬರ ನರೇಂದ್ರ
ಒಬ್ಬ ಮನುಷ್ಯ ಕೋಳಿಗಳನ್ನು ಸಾಕಿದ್ದ. ಒಂದು ದಿನ ಪಶು ಪಾಲನಾ ಇಲಾಖೆಯ ಜನ ಅವನ ಮನೆಗೆ ಬಂದು ಅವನನ್ನು ಪ್ರಶ್ನೆ ಮಾಡಿದರು.
“ ಈ ಕೋಳಿಗಳಿಗೆ ತಿನ್ನಲಿಕ್ಕೆ ಏನು ಕೊಡ್ತೀರಾ?”
“ ಕಾಳುಗಳು, ಹುಳ ಮುಂತಾದವನ್ನು ಸ್ವಾಮಿ “ ಆ ಮನುಷ್ಯ ಉತ್ತರಿಸಿದ.
ಕೋಳಿಗಳನ್ನ ಮತ್ತು ಮೊಟ್ಟೆಗಳನ್ನ ಜನ ತಿನ್ನುವುದರಿಂದ ಕೋಳಿಗಳಿಗೆ ಒಳ್ಳೆಯ ಪೌಷ್ಟಿಕ ಆಹಾರ ಕೊಡಬೇಕು ಎಂದು ಕಾರಣ ಹೇಳಿ ಇಲಾಖೆಯವರು ಆ ಮನುಷ್ಯನಿಗೆ 1000 ರೂ ದಂಡ ವಿಧಿಸಿದರು.
ಮುಂದಿನ ವರ್ಷ ಮತ್ತೆ ಇಲಾಖೆಯ ಜನ ಆ ಕೋಳಿಸಾಕುವವನ ಮನೆಗೆ ಬಂದು ಮತ್ತೆ ಅದೇ ಪ್ರಶ್ನೆ ಕೇಳಿದರು.
“ಕೋಳಿಗಳಿಗಳಿಗೆ ಹಣ್ಣು, ಡ್ರೈಫ್ರುಟ್ ಕೊಡ್ತೀನಿ ಸ್ವಾಮಿ” ಆ ಮನುಷ್ಯ ಉತ್ತರಿಸಿದ.
ಇಂಥ ಫುಡ್ ತಿಂದರೆ, ಕೋಳಿಗಳ ಹೊಟ್ಟೆ ಕೆಟ್ಟು ಅವು ಬೇಗ ಸತ್ತೋಗ್ತವೆ ಅಂತ ಕಾರಣ ನೀಡಿ ಇಲಾಖೆಯವರು ಮತ್ತೆ ಆ ಮನುಷ್ಯನ ಮೇಲೆ 1000 ದಂಡ ಹಾಕಿದವರು.
ಮರು ವರ್ಷ ಇಲಾಖೆಯವರು ಮತ್ತೇ ಪರಿಶೀಲನೆಗೆ ಬಂದಾಗ ಆ ವ್ಯಕ್ತಿ ಉತ್ತರಿಸಿದ, “ ಬೆಳಿಗ್ಗೆ ಕೋಳಿಗಳಿಗೆ ತಲಾ 10 ರೂಪಾಯಿ ಕೊಡ್ತೀನಿ, ಅವಕ್ಕೆ ಏನು ಇಷ್ಟವೋ ಅವೇ ಕೊಂಡು ತಿಂತವೆ”.

