ನೀವು ತಲೆಯಿಂದ ಕೆಳಗೆ ಇಳಿಯುತ್ತ ಬಂದಾಗ ಹೃದಯವನ್ನು ದಾಟಿಯೇ ಹೋಗಬೇಕು – ಅದು ಕ್ರಾಸ್ ರೋಡ್. ನೀವು ನೇರವಾಗಿ being ಗೆ ಹೋಗುವುದು ಸಾಧ್ಯವಾಗುವುದಿಲ್ಲ, ಹೃದಯವನ್ನು ದಾಟಿಯೇ ಹೋಗಬೇಕು ನೀವು. ಆದ್ದರಿಂದಲೇ ಹೃದಯವನ್ನು ಒಂದು ಮೆಥಡ್ ಆಗಿ ಬಳಸಬೇಕು ~ ಓಶೋ ರಜನೀಶ್; ಕನ್ನಡಕ್ಕೆ ಚಿದಂಬರ ನರೇಂದ್ರ
ಮನುಷ್ಯರೇ
ನಿಮ್ಮೊಳಗೆ ಅದ್ಭುತಗಳ ಬೀಜ ಅಡಗಿದೆ,
ಈ ಗುಲಾಬಿಯೊಳಗಿನ ಗುಲಾಬಿಯ
ಆಹ್ಲಾದದೊಡನೆ ಒಂದಾಗಿ,
ಇಷ್ಟು ಮಾತ್ರ ಒತ್ತಿ ಹೇಳುವುದು
ಪ್ರವಾದಿಯ ಬದುಕಿನ ಒಂದೇ ಒಂದು ಕಾರಣ.
ಸಂಶಯ, ಅಸ್ತಿತ್ವದ ಒಂದು ಭಾಗ.
ಆತ್ಮದ ಬಗ್ಗೆ ಯಾರು ತಾನೆ ಸಾಕ್ಷಿ ಹೇಳಬಲ್ಲರು?
ಪ್ರಾರ್ಥನೆಯಲ್ಲಿ, ಅಂತಃಕರಣದಲ್ಲಿ
ಆತ್ಮದೊಂದಿಗೆ ಮಾತಿಗಿಳಿದಾಗ ಪ್ರಶ್ನೆ ಮಾಡುತ್ತೇನೆ,
ಆತ್ಮ ನನ್ನ ದೇಹವನ್ನು ಬಿಟ್ಟು ಹೋದಾಗ
ಕವಿತೆಗಳ ಗತಿ ಏನು ?
ಉತ್ತರ ನೋಡಿ ಹೇಗಿದೆ,
ಮೊದಲು ಹಾಗಿತ್ತು
ಯಾವುದರ ಬಗ್ಗೆ ಭಯ ನಿನಗೆ ?
ಪ್ರೇಮ,
ದಯವಿಟ್ಟು ಈ ಕವಿತೆ ಪೂರ್ಣ ಮಾಡು,
ಯಾವ ಪದಗಳು ಅನನ್ಯ ಎನ್ನುವುದು
ನಿನಗೆ ಮಾತ್ರ ಗೊತ್ತು.
ಶಮ್ಸ್ , ಹೆಸರುಗಳ ಅರ್ಥ ಹೇಳು
ನೀನು ಸ್ವತಃ ಒಳಗಿನ ಆಕಾಶ .
~ ರೂಮಿ
ಯೋಚಿಸುವಿಕೆ (thinking) , ಅನುಭವಿಸುವಿಕೆ (feeling) ಮತ್ತು ಇರುವಿಕೆ (being) ಇವು ನಮ್ಮ ಮೂರು ಕೇಂದ್ರಗಳು. ಆದರೆ ಖಂಡಿತವಾಗಿ, ಅನುಭವಿಸುವಿಕೆ, ಇರುವಿಕೆಗೆ ಯೋಚಿಸುವಿಕೆ ಗಿಂತಲೂ ಹತ್ತಿರ, ಮತ್ತು ಫೀಲಿಂಗ್, ಒಂದು ಮೆಥಡ್ ನ ರೀತಿಯಲ್ಲಿ ಕೆಲಸ ಮಾಡುತ್ತದೆ. ನೀವು ಹೆಚ್ಚು ಫೀಲ್ ಮಾಡುವಾಗ, ಕಡಿಮೆ ಥಿಂಕ್ ಮಾಡುತ್ತೀರ. ಥಿಂಕಿಂಗ್ ಜೊತೆ ಜಗಳಕ್ಕಿಳಿಯಬೇಡಿ, ಏಕೆಂದರೆ ಥಿಂಕಿಂಗ್ ಜೊತೆ ಜಗಳಾಡುವುದೆಂದರೆ, ಜಗಳಕ್ಕೆ ಮತ್ತಷ್ಟು ಥಾಟ್ ಗಳನ್ನು ಹುಟ್ಟುಹಾಕುವುದು. ಯಾವತ್ತೂ ಥಿಂಕಿಂಗ್ ಜೊತೆ ಜಗಳಕ್ಕಿಳಿಯಬೇಡಿ; ಇದು ವ್ಯರ್ಥ.
ಥಿಂಕಿಂಗ್ ಜೊತೆ ಜಗಳಕ್ಕೆ ಇಳಿಯುವುದರ ಬದಲಿಗೆ, ನಿಮ್ಮ ಎನರ್ಜಿಯನ್ನ ಫೀಲಿಂಗ್ ನಲ್ಲಿ ತೊಡಗಿಸಿ. ಯೋಚನೆಯ ಬದಲಿಗೆ ಹಾಡು ಹಾಡಿ, ತತ್ವಜ್ಞಾನ ಮಾತನಾಡುವುದಕ್ಕೆ ಬದಲಾಗಿ ಪ್ರೇಮದಲ್ಲಿ ತೊಡಗಿಕೊಳ್ಳಿ, ಗದ್ಯದ ಬದಲಿಗೆ ಪದ್ಯವನ್ನು ಓದಿಕೊಳ್ಳಿ, ಡಾನ್ಸ್ ಮಾಡಿ, ಪ್ರಕೃತಿಯಲ್ಲಿ ಕಳೆದು ಹೋಗಿ. ನೀವು ಏನನ್ನೇ ಮಾಡಿದರೂ ಹೃದಯಪೂರ್ವಕವಾಗಿ ಮಾಡಿ. ಹೃದಯ ಒಂದು ನಿರ್ಲಕ್ಷಿತ ಕೇಂದ್ರ : ಒಮ್ಮೆ ನೀವು ಅದರತ್ತ ಗಮನಕೊಡಲು ಶುರು ಮಾಡಿದಿರಾದರೆ, ಅದು ಕೆಲಸ ಮಾಡಲು ಶುರು ಮಾಡುತ್ತದೆ. ಹೃದಯ ಕೆಲಸ ಮಾಡಲು ಶುರು ಮಾಡಿದೊಡನೆ, ಮೈಂಡ್ ನಲ್ಲಿ ಹರಿದಾಡುತ್ತಿದ್ದ ಎನರ್ಜಿ ಈಗ ಅಟೋಮ್ಯಾಟಿಕಲೀ ಹೃದಯದ ಮೂಲಕ ಚಲಿಸಲು ಪ್ರಾರಂಭಿಸುತ್ತದೆ. ಶಕ್ತಿ ಕೇಂದ್ರ ಇರುವುದು ಹೊಕ್ಕಳದ ಬಳಿ, ಹೃದಯ ಹೊಕ್ಕಳಕ್ಕೆ ಹತ್ತಿರವಾಗಿರುವುದರಿಂದ, ತಲೆಗಿಂತ, ಹೃದಯಕ್ಕೆ ಎನರ್ಜಿಯನ್ನ ಪಂಪ್ ಮಾಡುವುದು ಸುಲಭವಾಗುತ್ತದೆ
ಆದ್ದರಿಂದಲೇ ಹೃದಯವನ್ನು ಬೈ ಪಾಸ್ ಮಾಡಿ ನಮ್ಮ ಎನರ್ಜಿಯನ್ನು ತಲೆಗೆ ಹೇಗೆ ಪಂಪ್ ಮಾಡಬೇಕು ಎನ್ನುವುದನ್ನ ಕಲಿಸುವದಕ್ಕಾಗಿಯೇ ನಮ್ಮ ಎಲ್ಲ ಶಿಕ್ಷಣ ಪದ್ಧತಿಗಳು ಸೃಷ್ಟಿಯಾಗಿರುವುದು. ಆದ್ದರಿಂದಲೇ ಯಾವ ಶಾಲೆ, ಯಾವ ಕಾಲೇಜು, ಯಾವ ಯುನಿವರ್ಸಿಟಿ ಫೀಲ್ ಮಾಡಿಕೊಳ್ಳುವುದನ್ನ ಕಲಿಸುವುದಿಲ್ಲ. ಅವು ಫೀಲಿಂಗ್ ನ ನಾಶ ಮಾಡಿಬಿಡುತ್ತವೆ, ಏಕೆಂದರೆ ಅವಕ್ಕೆ ಗೊತ್ತು ಒಮ್ಮೆ ನೀವು ಫೀಲ್ ಮಾಡಿಕೊಳ್ಳುವುದನ್ನ ಕಲಿತು ಬಿಟ್ಟರೆ, ನಿಮಗೆ ಥಿಂಕ್ ಮಾಡುವುದು ಸಾಧ್ಯವಾಗುವುದಿಲ್ಲ. ಆದರೆ ತಲೆಯಿಂದ ಹೃದಯಕ್ಕೆ ಸಾಗುವುದು ಸುಲಭ ಮತ್ತು ಹೃದಯದಿಂದ ಹೊಕ್ಕಳದೆಡೆಗಿನ ಪ್ರಯಾಣ ಇನ್ನೂ ಸುಲಭ. ಹೊಕ್ಕಳದಲ್ಲಿ ಕೇವಲ ನಿಮ್ಮ ಇರುವಿಕೆ (being) ಇದೆ, ಯಾವ ಫೀಲಿಂಗ್, ಯಾವ ಥಿಂಕಿಂಗ್ ಇಲ್ಲದ ಶುದ್ಧ being; ಅಲ್ಲಿ ಯಾವ ಕದಲಿಕೆಯೂ ಇಲ್ಲ, ಇದೇ ಚಂಡಮಾರುತದ ಕೇಂದ್ರ.
*********************************

