ಸಂಗ್ರಹ – ಅನುವಾಡ: ಚಿದಂಬರ ನರೇಂದ್ರ
ಅದು ಒಂದು ಕವಿಗೋಷ್ಟಿ. ಯುವಕವಿಯೊಬ್ಬ ಉತ್ಸಾಹದಿಂದ ಕವಿತೆಗಳನ್ನು ಓದುತ್ತಾನೆ. ಅವನ ಕಾವ್ಯವಾಚನ ಮುಗಿದ ಮೇಲೆ ಮುಶಾಯಿರಾದ ಅಧ್ಯಕ್ಷತೆ ವಹಿಸಿದ್ದ ಕವಿ ಫಿರಾಕ್ ಗೋರಖಪುರಿ ಆ ಯುವಕವಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ…
“ ನೀನು ನನ್ನ ಶಾಯರಿಗಳನ್ನೇ ಹಿಂದೆ ಮುಂದೆ ಮಾಡಿ, ಆ ಕಡೆ, ಈ ಕಡೆ ಜೋಡಿಸಿ ಓದಿದೆ. ನಿನಗೆ ಸ್ವಂತಿಕೆ ಇಲ್ಲ, ನೀನು ಒಬ್ಬ ಚೋರ ಕವಿ”
“ ಹಾಗಲ್ಲ ಫಿರಾಕ್ ಸಾಬ್, ಯಾಕೆ ನನ್ನ ನಿಮ್ಮ ಅಲೋಚನೆಗಳು ಒಂದೇ ಆಗಿರಬಾರದೇ? ಒಮ್ಮೊಮ್ಮೆ ಒಂದೇ ರೀತಿಯ ಆಲೋಚನೆಗಳು ಡಿಕ್ಕಿ ಹೊಡಿಯುತ್ತವೆ. ಇದನ್ನ ನೀವು ಕೃತಿಚೌರ್ಯ ಅನ್ನಬಾರದು” ಯುವಕವಿ ತನ್ನನ್ನು ತಾನು ಸಮರ್ಥಿಸಿಕೊಂಡ.
“ ಒಂದೇ ಬಗೆಯ ಆಲೋಚನೆಗಳು, ಭಾವಗಳು ಪರಸ್ಪರ ಡಿಕ್ಕಿ ಹೊಡೆಯುವುದನ್ನ ನಾನು ಒಪ್ಪಿಕೊಳ್ಳಬಹುದು. ಆದರೆ ಎಂದಾದರೂ ನೀನು ವಿಮಾನದ ಜೊತೆ ಸೈಕಲ್ ಡಿಕ್ಕಿ ಹೊಡೆದಿದ್ದನ್ನ ಕೇಳಿದ್ದೀಯಾ?” ಫಿರಾಕ್ ಆ ಯುವ ಕವಿಯನ್ನ ಮತ್ತೆ ತರಾಟೆಗೆ ತೆದುಕೊಂಡರು.
ಹೀಗೆ ಕವಿ ಫಿರಾಕ್ ಗೋರಖಪುರಿಯವರ ಭಿಡೆಯಿಲ್ಲದ ಸ್ವಭಾವವನ್ನು ವಿವರಿಸುತ್ತಾರೆ ಕವಿ ಜಾವೇದ್ ಅಖ್ತರ್.

