ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ಸಂದರ್ಶಕ : ನಿಮಗೆ ಧರ್ಮಗಳಲ್ಲಿ ನಂಬಿಕೆ ಇಲ್ಲ, ನಿಮ್ಮ ಮುಂಜಾನೆಯ ಮಾತುಗಳನ್ನ ಕೇಳಿದರೆ ನಿಮಗೆ ದೇವರಲ್ಲಿಯೂ ನಂಬಿಕೆ ಇಲ್ಲ ಅನಿಸುತ್ತದೆ ನನಗೆ. ಯಾಕೆ ಹೀಗೆ?
ಓಶೋ : ನನಗೆ ಧರ್ಮ ಮತ್ತು ದೇವರಲ್ಲಿ ಅಷ್ಟೇ ಅಲ್ಲ, ನನಗೆ ನಂಬಿಕೆಯಲ್ಲೂ ನಂಬಿಕೆ ಇಲ್ಲ. ನನಗೆ ಬೇಕಾದದ್ದು knowing ಮಾತ್ರ. ಮತ್ತು knowing ಗೆ ಸಂಪೂರ್ಣ ವಿಭಿನ್ನ ಆಯಾಮ ಇದೆ. ಇದು ಸಂಶಯದೊಂದಿದೆ ಶುರುವಾಗುತ್ತದೆಯೇ ಹೊರತು ನಂಬಿಕೆಯಿಂದಲ್ಲ. ಏನನ್ನಾದರೂ ನಂಬಿದ ಕ್ಷಣದಲ್ಲಿಯೇ ನೀವು ಹುಡುಕಾಟವನ್ನ, inquiring ನ ನಿಲ್ಲಿಸಿಬಿಡುತ್ತೀರಿ. ನಂಬಿಕೆ ಎನ್ನುವುದು ಮನುಷ್ಯನ ಬುದ್ಧಿಮತ್ತೆಯನ್ನು ನಾಶಮಾಡುವ ವಿಷಕಾರಿ ಸಂಗತಿ. ಎಲ್ಲ ಧರ್ಮಗಳು ನೆಲೆಯಾಗಿರುವುದು ನಂಬಿಕೆಯ ಅಡಿಪಾಯದ ಮೇಲೆ. ಕೇವಲ ವಿಜ್ಞಾನ ಮಾತ್ರ ಸಂಶಯದ ಮೇಲೆ ಅವಲಂಬಿತವಾಗಿದೆ. ಧಾರ್ಮಿಕ inquiry ಗಳು ಕೂಡ ಸಂಶಯದ ಮೇಲೆ ಆಧರಿತವಾಗಿ ವೈಜ್ಞಾನಿಕವಾಗಿರಬೇಕೆಂದು ನಾನು ಬಯಸುತ್ತೇನೆ. ಹೀಗಾದರೆ, ಒಂದಲ್ಲ ಒಂದು ದಿನ ನಾವು ಕೇವಲ ನಂಬಬೇಕಿಲ್ಲ, ನಮ್ಮ ಅಸ್ತಿತ್ವದ ಸತ್ಯ ಮತ್ತು ನಮ್ಮ ಇಡೀ ಬ್ರಹ್ಮಾಂಡದ ಸತ್ಯವನ್ನು ತಿಳಿದುಕೊಳ್ಳುವುದು ಸಾಧ್ಯವಾಗುತ್ತದೆ.

