ಸಂಗ್ರಹ – ಅನುವಾದ: ಚಿದಂಬರ ನರೇಂದ್ರ
ಮದುವೆ ಆಗಿ ತುಂಬ ದಿನ ಆದರೂ ಮಕ್ಕಳಾಗಲಿಲ್ಲ ಆದ್ದರಿಂದ ಮತ್ತೊಂದು ಮದುವೆಯಾಗುವಂತೆ ಕುಟುಂಬದಲ್ಲಿನ ಸಂಬಂಧಿಕರು ಜ್ಯೋತಿಬಾ ಅವರನ್ನು ಪೀಡಿಸಲಾರಂಭಿಸಿದರು. ಜ್ಯೋತಿಬಾ ಅವರಿಗೆ ತಿಳಿ ಹೇಳಲಿಕ್ಕೆ ಪ್ರಯತ್ನ ಮಾಡಿದರೂ ಮನೆಯವರು ಜ್ಯೋತಿಬಾ ಅವರ ಮಾತು ಕೇಳಲು ಸಿದ್ಧರಿರಲಿಲ್ಲ. ಕೊನೆಗೆ ಮನೆಯವರ ಕಾಟ ತುಂಬ ಜಾಸ್ತಿ ಆದಾಗ ಜ್ಯೋತಿಬಾ ಒಂದು ಪರಿಹಾರವನ್ನು ಅವರ ಮುಂದೆ ಇಟ್ಟರು.
ನಮ್ಮಿಬ್ಬರದೂ ವೈದ್ಯಕೀಯ ತಪಾಸಣೆ ಆಗಲಿ, ಸಾವಿತ್ರಿಯಲ್ಲಿ ಸಮಸ್ಯೆ ಇದ್ದರೆ ನಾನು ಇನ್ನೊಂದು ಮದುವೆಯಾಗುತ್ತೇನೆ, ಅವಳಿಗೊಬ್ಬಳು ಸವತಿ ಬರಲಿ, ಆದರೆ ನನ್ನೊಳಗೆ ಸಮಸ್ಯೆ ಇದೆ ಎಂದು ಕಂಡುಬಂದರೆ ಸಾವಿತ್ರಿಗೆ ನೀವು ಒಬ್ಬ ಸವತಾ ( ಸವತಿಯ male version ಮರಾಠಿಯಲ್ಲಿ) ತರಲಿಕ್ಕೆ ಸಿದ್ಧರಾಗಿದ್ದೀರಾ? ಜ್ಯೋತಿಬಾ ಅವರ ಪಂಥದ ಎದುರು ಮನೆಯವರೆಲ್ಲ ಸುಮ್ಮನಾಗಿಬಿಟ್ಟರು. ಮರಾಠಿ ಭಾಷೆಯಲ್ಲಿಯೂ ಸವತಾ ಎನ್ನುವ ಪದ ಮೊದಲ ಬಾರಿ ಪ್ರಯೋಗವಾಯಿತು ಅದೂ ಜ್ಯೋತಿಬಾ ಅವರ ಕಾರಣದಿಂದ.

