ಹಳೆಯ ಮನಸ್ಸು ( Old Mind ): ಓಶೋ 365 #Day 233

ನಿಮ್ಮ ಇಷ್ಟಗಳ ಮಾತು ಕೇಳುತ್ತಿದ್ದೀರಾದರೆ, ನೀವು ನಿಮ್ಮ ಹಳೆಯ ಮನಸ್ಸಿನ ಮಾತು ಕೇಳುತ್ತಿದ್ದೀರಿ. ಬೆಳವಣಿಗೆ ಹೊಂದಬೇಕಾದರೆ, ನಾವು ಹಳೆಯ ಇಷ್ಟಗಳ ವಿರುದ್ಧ ಹೋಗಬೇಕಾಗಬಹುದು ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ
ಯಾವ ದಿಕ್ಕಾದರೂ  ಸರಿ
ಅಂಥ ವ್ಯತ್ಯಾಸವೆನೂ ಆಗದು.

ನಿಮ್ಮ ಗುರಿ ಏನಾದರೂ ಇರಲಿ,
ಆದರೆ ಪ್ರತೀ ಪ್ರಯಾಣ
ನಿಮ್ಮ ಆಂತರ್ಯದ  ಪ್ರಯಾಣವಾಗುವುದನ್ನ
ಖಚಿತಪಡಿಸಿಕೊಳ್ಳಿ ದಯಮಾಡಿ.

ನೀವು ನಿಮ್ಮ ಅಂತರಂಗವನ್ನು ಪ್ರವೇಶಿಸಿದಾಗ
ಇಡೀ ಜಗತ್ತನ್ನೇ ಎದುರುಗೊಳ್ಳುತ್ತೀರಿ
ಮತ್ತು ಜಗತ್ತಿನಾಚೆಗೂ ಹೆಜ್ಜೆ ಹಾಕುತ್ತೀರಿ.

~ ಶಮ್ಸ್

ಜನ ತಿಳಿದುಕೊಂಡಿರುವಷ್ಟು ಬೆಳವಣಿಗೆ ಸರಾಗವಲ್ಲ. ಇದು ಯಾತನಾಮಯ,….. ಮತ್ತು ಯಾವಾಗ ನಾವು ನಮ್ಮ ಇಷ್ಟಪಡುವಿಕೆ ಮತ್ತು ಇಷ್ಟಪಡದಿರುವಿಕೆಯ ವಿರುದ್ಧ ಹೋಗಬೇಕಾಗುವುದೋ ಆಗ ಈ ಯಾತನೆ ಇನ್ನೂ ಅಪಾರವಾಗುತ್ತದೆ.

“ಇದನ್ನು ನಾನು ಇಷ್ಟಪಡುತ್ತೇನೆ, ಇದನ್ನು ಇಷ್ಟಪಡುವುದಿಲ್ಲ” ಎಂದು ಸದಾ ಹೇಳುತ್ತಿರುವವರು ಯಾರು? ಇದು ನಿಮ್ಮ ಹಳೆಯ ಮೈಂಡ್, ನೀವಲ್ಲ. ಇದನ್ನು ಒಪ್ಪಿಕೊಂಡು ಬಿಟ್ಟರೆ ಯಾವ ಬದಲಾವಣೆಯೂ ಸಾಧ್ಯವಿಲ್ಲ. ಹಳೆಯ ಗೊಂದಲದಲ್ಲಿಯೇ ಮುಂದುವರೆಯಲು ನಿಮ್ಮ ಮೈಂಡ್ ಒತ್ತಾಯ ಮಾಡುತ್ತದೆ. ಏಕೆಂದರೆ ಅದಕ್ಕೆ ಇಷ್ಟವಾದ ಸಂಗತಿ ಅದು. ಆದ್ದರಿಂದ ಇದನ್ನು ಬಿಟ್ಟು ನಾವು ಹೊರಗೆ ಬರಬೇಕಾಗಿದೆ. ಕೆಲವೊಮ್ಮೆ ನಾವು, ನಮ್ಮ ಇಷ್ಟಪಡುವಿಕೆ ಮತ್ತು ಇಷ್ಟಪಡದಿರುವಿಕೆಯ ವಿರುದ್ಧ ಹೋಗಬೇಕಾಗುತ್ತದೆ.

ಯಾವಾಗ ನಾವು ನಮ್ಮ ಹಳೆಯ ಶೈಲಿಯನ್ನು ಬದಲಾಯಿಸುಕೊಳ್ಳುತ್ತದೆಯೋ ಅದು ನಮಗೆ ಯಾತನೆಯನ್ನು, ನೋವನ್ನು ಉಂಟು ಮಾಡುತ್ತದೆ. ಇದು ಹೊಸ ಸ್ಕಿಲ್ ಒಂದನ್ನ ಕಲಿಯುವಂತೆ. ಹಳೆಯದರ ಬಗ್ಗೆ ನಿಮಗೆ ಪರಿಪೂರ್ಣವಾಗಿ ಗೊತ್ತು, ಹಾಗಾಗಿ ಅದರ ಸಂಬಂಧಿತವಾದ ಎಲ್ಲವೂ ಸರಾಗ. ಹೊಸ ಸ್ಕಿಲ್ ಕಲಿಯುವಾಗ ಅದು ಕಠಿಣ. ಇದು ಕೇವಲ ಹೊಸ ಸ್ಕಿಲ್ ಮಾತ್ರ ಕಲಿಯುವುದಲ್ಲ , ಇದು ಹೊಸ ಅಸ್ತಿತ್ವವೊಂದನ್ನು ( being) ಕಲಿಯುವಂತೆ. ಹೊಸದು ಹುಟ್ಟ ಬೇಕಾದರೆ ಹಳೆಯದು ಸಾಯಬೇಕಿದೆ. ನೀವು ಹಳೆಯದಕ್ಕೆ ಅಂಟಿಕೊಂಡರೆ, ಹೊಸದಕ್ಕೆ ಜಾಗ ಇರುವುದಿಲ್ಲ.

ನಸ್ರುದ್ದೀನ್, ಪಾದ್ರಿಯೊಬ್ಬರ ಮನೆ ಬಾಗಿಲು ತಟ್ಟಿದ.

“ ಫಾದರ್, ಮನೆಯಲ್ಲಿದೀರಾ ? ಬ್ಯುಸಿ ನಾ ? “

“ ಹಾಗೇನಿಲ್ಲ ಒಳಗೆ ಬಾ ನಸ್ರುದ್ದೀನ್, ಇವತ್ತು ಚರ್ಚ್ ಲ್ಲಿ ಹೇಳಬೇಕಾಗಿರುವ ಮಾತುಗಳನ್ನ ಪ್ರ್ಯಾಕ್ಟೀಸ್ ಮಾಡುತ್ತಿದ್ದೆ. “

“ ಓಹ್, ನೀವು ಪ್ರ್ಯಾಕ್ಚೀಸ್ ಮಾಡಿ ಉಪದೇಶ ಹೇಳುತ್ತೀರಿ, ಆದರೆ ನಾವು ನಿಮ್ಮ ಉಪದೇಶ ಕೇಳಿ ಪ್ರ್ಯಾಕ್ಟೀಸ್ ಮಾಡಬೇಕು ಅಲ್ವಾ ? “

ನಸ್ರುದ್ದೀನ್, ತಮಾಷೆ ಮಾಡಿದ.

********************************

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.