ತಂತ್ರ ( Technique ): ಓಶೋ 365 #Day 296



ವರ್ಕ್ ಆಗೋದು ಪ್ರೇಮ ಮಾತ್ರ; ತಂತ್ರ ಮುಂತಾದವುಗಳೆಲ್ಲ ಕೇವಲ ಸಮಜಾಯಿಷಿ. ವರ್ಕ್ ಆಗೋದು ಥೆರಪಿಸ್ಟ್, ಥೆರಪಿ ಅಲ್ಲ ~ ಓಶೋ ರಜನೀಶ್, ಕನ್ನಡಕ್ಕೆ: ಚಿದಂಬರ ನರೇಂದ್ರ


ಭೂಮಿಯ ಮೇಲಿರುವ
ನಕಲೀ ಗುರುಗಳ
ಮತ್ತು ಕಪಟಿ ಶಿಕ್ಷಕರ ಸಂಖ್ಯೆ
ಬ್ರಹ್ಮಾಂಡದಲ್ಲಿರುವ
ಒಟ್ಟು ನಕ್ಷತ್ರಗಳ ಸಂಖ್ಯೆಗಿಂತ ಹೆಚ್ಚು.

ಅಧಿಕಾರದ ಲಾಲಸೆ,
ಸ್ವಂತ ಹಿತಾಸಕ್ತಿಗಳೇ ಉಸಿರಾಗಿರುವ
ಇಂಥ ಮೋಸಗಾರರನ್ನ
ನಿಜದ ಮಾರ್ಗದರ್ಶಕರೆಂದು
ಗೊಂದಲ ಮಾಡಿಕೊಳ್ಳಬೇಡಿ.

ನಿಜದ ಅಧ್ಯಾತ್ಮ ಸಾಧಕ
ನಿಮ್ಮ ಗಮನವನ್ನ ತನ್ನೆಡೆಗೆ ಬಯಸುವುದಿಲ್ಲ,
ಸಂಪೂರ್ಣ ಶರಣಾಗತಿಯನ್ನ
ನಿಮ್ಮಿಂದ ನಿರೀಕ್ಷಿಸುವುದಿಲ್ಲ,
ನಿಮ್ಮ ಮೆಚ್ಚುಗೆ ಮತ್ತು ಹೊಗಳಿಕೆಯನ್ನ ಸಹಿಸುವುದಿಲ್ಲ.

ನಿಜದ ಗುರು,
ಗಾಜಿನಂತೆ ಪಾರದರ್ಶಕ,
ಭಗವಂತನ ಬೆಳಕು ಹಾಯ್ದು ಹೋಗಲು
ಅವಕಾಶ ಮಾಡಿಕೊಡುತ್ತಾನೆ
ತನ್ನ ಮೂಲಕ.

~ ಶಮ್ಸ್

ಒಂದೊಮ್ಮೆ Gestalt Therapy ಯ ಸ್ಥಾಪಕನಾದ Fritz Perl’s ನ ಜೊತೆ ಅಪರೂಪದ ಸಂಗತಿಗಳು ಸಂಭವಿಸತೊಡಗಿದವು. ಆದರೆ ಅದು Gestalt Therapy ಗೆ ಸಂಬಂಧಿಸಿದ್ದಲ್ಲ, ಅದು ಆ ವ್ಯಕ್ತಿಯ ವ್ಯಕ್ತಿತ್ವಕ್ಕೆ, ಅವನ ಪ್ರಚಂಡ ಧೈರ್ಯಕ್ಕೆ, ಅವನ ಅಪಾರ ಅಂತಃಕರಣಕ್ಕೆ ಸಂಬಂಧಿಸಿದ್ದು. ಅವನು ಸಹಾಯ ಮಾಡಲು ಪ್ರಯತ್ನಿಸುತ್ತಿದ್ದಾನೆ; ಅವನು ಇನ್ನೊಬ್ಬ ವ್ಯಕ್ತಿಯನ್ನು ಸಮೀಪಿಸಲು ಪ್ರಯತ್ನ ಮಾಡುತ್ತಿದ್ದಾನೆ.

ಆದರೆ ನಮ್ಮ ಲಾಜಿಕಲ್ ಮೈಂಡ್ ಗೆ ಅನಿಸುವುದೇನೆಂದರೆ ಸಹಾಯ ಮಾಡುತ್ತಿರುವುದು Gestalt Therapy. ಶತಮಾನಗಳಿಂದ ಇಂಥ ತಪ್ಪು ತಿಳುವಳಿಕೆಯೇ ನಮ್ಮನ್ನು ಆವರಿಸಿದೆ. ನಮಗೆ ಸಹಾಯ ಮಾಡೋದು ಕ್ರಿಶ್ಚಿಯಾನಿಟಿ ಅಲ್ಲ, ನಮಗೆ ಸಹಾಯ ಮಾಡೋದು ಕ್ರಿಸ್ತ. ನಮಗೆ ಸಹಾಯ ಮಾಡೋದು ಬುದ್ಧಿಸಂ ಅಲ್ಲ, ಬುದ್ಧ. ಎರಡು ಸಾವಿರದ ಐದು  ನೂರು  ವರ್ಷಗಳಿಂದ ಜನ ನಮಗೆ ಸಹಾಯ ಮಾಡುತ್ತಿರುವುದು ಬುದ್ಧಿಸಂ ಎಂದು ನಂಬಿದ್ದಾರೆ, ಆದರೆ ನಮಗೆ ಸಹಾಯ ಮಾಡುತ್ತಿರುವುದು ಬುದ್ಧ. ಬುದ್ಧ ಬೇರೇನೋ ಹೇಳಿದ್ದರೆ, ಅವನು ಈಗ ಹೇಳಿರುವುದರ ವಿರುದ್ಧ ಹೇಳಿದ್ದರೂ ಅದು ನಮಗೆ ಸಹಾಯ ಮಾಡುತ್ತಿತ್ತು. ಆ ಮನುಷ್ಯನ ಜೀವನ ಸಾಮರ್ಥ್ಯ ( life force) , ಅವನ ಅಂತಃಕರಣ, ಅವನ ಪ್ರೇಮ, ಅವನ ತಿಳುವಳಿಕೆ ನಮಗೆ ಸಹಾಯ ಮಾಡುತ್ತಿದೆ.

ಆದರೆ ನಮ್ಮ ಮೈಂಡ್ ಮೇಲ್ಮೈಯಲ್ಲಿರುವ ಟೆಕ್ನಿಕ್ ಗಳನ್ನು ಮಾತ್ರ ಗ್ರಹಿಸುತ್ತದೆ. ಆಗ ಮೇಲ್ಮೈಯಲ್ಲಿರುವ ಸಂಗತಿಗಳೇ ಮುಖ್ಯವಾಗಿ ನಾವು ಅತ್ಯವಶ್ಯಕವಾಗಿರುವುದರೊಂದಿಗೆ ಸಂಪರ್ಕ ಕಳೆದುಕೊಂಡು ಬಿಡುತ್ತೇವೆ. ಇಲ್ಲಿ ಹಲವು ಸಮಸ್ಯೆಗಳಿವೆ : ಅತ್ಯವಶ್ಯಕವಾದದ್ದನ್ನು ಕಲಿಸುವುದು ಸಾಧ್ಯವಿಲ್ಲ. ಆದ್ದರಿಂದ Fritz Perl ನ ಕಲಿಸುವುದು ಸಾಧ್ಯವಿಲ್ಲ, Gestalt Therapy ನ ಮಾತ್ರ ಕಲಿಸಬಹುದು. ಯಾವಾಗ ಸಾಧ್ಯವೋ ಆಗ Fritz Perl ಸಂಭವಿಸುತ್ತದೆ ; ಅದನ್ನು ಕಲಿಸುವುದು ಸಾಧ್ಯವಿಲ್ಲ! ಆದರೆ ಸಮಾಜಕ್ಕೆ ನಿಶ್ಚಿತತೆ ಬೇಕು ಆದ್ದರಿಂದ ಅದು ಏನೋ ಒಂದನ್ನು ಕಲಿಸಲು ಶುರು ಮಾಡುತ್ತದೆ. ಅನವಶ್ಯಕವಾದದ್ದನ್ನು ಮಾತ್ರ ಕಲಿಸಬಹುದು. ಆದ್ದರಿಂದ ಎಲ್ಲ ಕಲಿಕೆ ಕಲಿಸುವವನ ವಿರುದ್ಧವಾಗಿರುತ್ತದೆ, ಏಕೆಂದರೆ ಕಲಿಸುವವ ಅವಶ್ಯಕವನ್ನು ಕಲಿಸಬಯಸುತ್ತಾನೆ, ಆದರೆ teaching ಅನವಶ್ಯಕವಾದದ್ದನ್ನು ಮಾತ್ರ ಕಲಿಸುತ್ತದೆ.

********************************

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.