ನಾನು ತಪ್ಪಾಗಿರಬಹುದು. ನಾನು ಜೈಲಿನ ಹೊರಗೆ ಇರದೇ ಇರಬಹುದು, ಅಥವಾ ನಾನು ಕೇವಲ ಹಾಗೆ ನಟಿಸುತ್ತಿರಬಹುದು. ಸ್ವತಃ ನಾನೇ ಜೈಲರ್ ಕೂಡ ಆಗಿರಬಹುದು! ಈ ಬಗ್ಗೆ ಯಾರಿಗೂ ಖಚಿತವಾಗಿರುವುದು ಸಾಧ್ಯವಿಲ್ಲ. ಆದ್ದರಿಂದ ಇದು ಒಂದು ಜೂಜು, ಕೇವಲ ನಂಬಿಕೆಯ ವಿಷಯ. ನಂಬಿಕೆ ಯಾವತ್ತೂ ಜೂಜಿನ ಹಾಗೆ ~ ಓಶೋ ರಜನೀಶ್; ಕನ್ನಡಕ್ಕೆ : ಚಿದಂಬರ ನರೇಂದ್ರ
ತನಗೆ ಗೊತ್ತಿರುವ ಎಲ್ಲರ ಸುತ್ತ
ಪಂಜರಗಳನ್ನು ಕಟ್ಟುತ್ತ ಹೋದ
ಸಣ್ಣ ಮನುಷ್ಯ.
ಆದರೆ, ಚಂದ್ರ ನೆಲಕ್ಕೆ ಹತ್ತಿರವಿರುವಾಗ
ಬಗ್ಗಿ ನಡೆಯುವ ನಿರ್ದಯಿ ಸಂತ,
ರಾತೋ ರಾತ್ರಿ
ಸುಂದರ ರೌಡಿ ಕೈದಿಗಳ ಕೈಗೆ
ಸೆರೆಮನೆಯ ಕೀಲೀ ಕೈ ಕೊಟ್ಟು
ಹೊರಟು ಹೋದ
ಶಿಳ್ಳೆ ಹೊಡೆಯುತ್ತಾ.
~ ಹಾಫಿಜ್
ಸಿಗರೇಟು ಸೇದುವುದನ್ನು ಬಿಡಬೇಕೆಂದು ಯಾರಿಗೂ ಹೇಳದೇ, ನೀವೇ ನಿರ್ಧಾರ ಮಾಡಿದಾಗ ಬಹುಶಃ 99% ಪ್ರತಿಶತ ಮತ್ತೆ ನೀವು ಸಿಗರೇಟು ಸೇದುತ್ತೀರಿ. ಇನ್ನೂಬ್ಬರು ಕೂಡ ಇಂಥದೇ ನಿರ್ಧಾರ ಮಾಡಿದ್ದಾರೆ ಆದರೆ ಈ ಬಗ್ಗೆ ಅವರು ಕೆಲವರಿಗೆ ಹೇಳಿದ್ದಾರೆ. ಅಂಥವರು ಮತ್ತೇ ಸಿಗರೇಟು ಸೇದುವ ಚಾನ್ಸ್ ಪ್ರತಿಶತ ತೊಂಭತ್ತು ಪ್ರತಿಶತ. ಆದರೆ ಮತ್ತೊಬ್ಬರು ಕೂಡ ಸಿಗರೇಟು ಸೇದದಿರುವ ನಿರ್ಧಾರ ಮಾಡಿದ್ದಾರೆ ಮತ್ತು ಅವರು ಸಿಗರೇಟು ಸೇದದಿರುವವರ ಸಂಘ ಸೇರಿದ್ದಾರೆ. ಅಂಥವರು ಸಿಗರೇಟು ಸೇದದಿರುವ ಸಾಧ್ಯತೆ ಪ್ರತಿಶತ 90% ರಷ್ಟು.
ಗುರ್ಜೇಫ್ ಸದಾ ಹೇಳುತ್ತಿದ್ದರು, ನಿಮಗೆ ಏನೋ ಮಾಡಬೇಕಿದೆಯಾದರೆ, ನಿನ್ನ ಮನೋಭಾವದ ಕೆಲ ಗೆಳಯರನ್ನು ಸೇರಿಕೊಳ್ಳಿ. ನೀವು ಎಲ್ಲ ಸೇರಿಕೊಂಡು ಆ ಕೆಲಸವನ್ನು ಮಾಡಬಹುದು. ಇದು ಹೇಗೆಂದರೆ ನೀವೇ ಬಯಸಿ ಒಂದು ಜೈಲು ಸೇರಿಕೊಂಡಂತೆ : ನೀವು ಅಲ್ಲಿಂದ ಪಾರಾಗಲು ಬಯಸಿದರೂ ನೀವು ಒಬ್ಬರೇ ಪಾರಾಗುವುದು ಬಹಳ ಕಷ್ಟ. ನೀವು ಗ್ಯಾಂಗ್ ಕಟ್ಟಿಕೊಳ್ಳುವಿರಾದರೆ ಈ ಸಾಧ್ಯತೆ ಬಹಳ ಹೆಚ್ಚು. ಎಲ್ಲ ಸೇರಿಕೊಂಡು ನೀವು ಜೈಲಿನ ನ ಗಾರ್ಡ್ ನ ಕೊಲ್ಲಬಹುದು, ಎಲ್ಲ ಸೇರಿಕೊಂಡು ನೀವು ಜೈಲಿನ ಗೋಡೆಯನ್ನ ಒಡೆಯಬಹುದು. ಆದರೆ ಒಬ್ಬರಿಗೇ ಇದು ಸಾಧ್ಯವಿಲ್ಲ, ಬಹಳ ಕಷ್ಟ. ಆದರೆ ಇದೂ ಕೂಡ ಸಾಧ್ಯವಾಗದೇ ಇರುವ ಸಾಧ್ಯತೆ ಇದೆ, ಏಕೆಂದರೆ ನಿಮ್ಮದು ಅಸಹಾಯಕ ಜೈಲುವಾಸಿಗಳ ಗುಂಪಾಗಿರಬಹುದು. ಜೈಲ್ ನ ಮ್ಯಾನೇಜ್ ಮಾಡುವವರ ಸಾಮರ್ಥ್ಯ ನಿಮಗಿಂತ ಹೆಚ್ಚಿರಬಹುದು.
ಆದ್ದರಿಂದ ನನ್ನ ಪ್ರಕಾರ ನೀವು ಜೈಲಿನಿಂದ ಹೊರಗೆ ಇರುವವರ ಸಂಪರ್ಕ ಬೆಳೆಸುವುದು ಬಹಳ ಒಳ್ಳೆಯದು. ಅವರು ಈಗಾಗಲೇ ಫ್ರೀ ಆಗಿದ್ದಾರೆ ಮತ್ತು ಜೈಲಿನಿಂದ ಹೊರಗೆ ಇದ್ದಾರೆ. ಅವರು ನಿಮಗೆ ಜೈಲಿನ ಹೊರಗಿನಿಂದ ಸಾಮಗ್ರಿಗಳನ್ನು ಸಪ್ಲೈ ಮಾಡಬಹುದು , ಜೈಲಿನ ಗಾರ್ಡ್ ಗೆ ಲಂಚದ ಆಮಿಷ ನೀಡಬಹುದು, ನಿಮಗೆ ಜೈಲಿನಿಂದ ಪಾರಾಗುವ ನಕಾಶೆ ನೀಡಬಹುದು, ಜೈಲಿನ ಜೈಲರ್ ನ ಪಿಕ್ನಿಕ್ ಗೆಂದು ದೂರ ಕರೆದುಕೊಂಡು ಹೋಗಬಹುದು.
ಒಂದು ಶುಕ್ರವಾರ ಮಧ್ಯಾಹ್ನ ನಸ್ರುದ್ದೀನ್ ಮತ್ತು ಅವನ ಪಾರ್ಟನರ್, ಬೇಗ ಆಫೀಸ್ ಲಾಕ್ ಮಾಡಿಕೊಂಡು ಲಾಂಗ್ ಡ್ರೈವ್ ಮಾಡುತ್ತ ಹತ್ತಿರದ ಬೀಚ್ ರೆಸಾರ್ಟ್ ಗೆ ಬಂದರು. ಇಬ್ಬರು ಆರಾಮಾಗಿ ಕೂತು ಬಿಯರ್ ಕುಡಿಯುತ್ತಿದ್ದಾಗ, ಪಾರ್ಟನರ್ ಗೆ ಏನೋ ನೆನಪಾದಂತಾಗಿ ಅವನು ಗಾಬರಿಯಾದ,
“ ನಸ್ರುದ್ದೀನ್, ನಾನು ಸೇಫ್ಟೀ ಲಾಕರ್ ಲಾಕ್ ಮಾಡೋದನ್ನ ಮರೆತುಬಿಟ್ಟೆ, ಏನು ಮಾಡೋದು ಈಗ ? “
“ ಏನೂ ಅಪಾಯ ಆಗಲಾರದು ಗೆಳೆಯ, ನಾವಿಬ್ಬರೂ ಇಲ್ಲಿ ಜೊತೆಯಲ್ಲೇ ಇದ್ದೀವಲ್ಲ “
ನಸ್ರುದ್ದೀನ್ ಪಾರ್ಟನರ್ ನ ಸಮಾಧಾನ ಮಾಡಿದ.
*******************************

