ವಚನ ಸಂವಾದ : ಒಲುಮೆ ಒಚ್ಚತವಾಗಿ…

ಅರಳಿಮರದಲ್ಲಿ ಪ್ರಕಟವಾಗಿದ್ದ ಅಕ್ಕ ಮಹಾದೇವಿಯವರ ವಚನ ಸಂವಾದ ಅಂಕಣವು ‘ಒಲುಮೆ ಒಚ್ಚತವಾಗಿ’ ಹೆಸರಿನಿಂದ ಪುಸ್ತಕವಾಗಿ ಪ್ರಕಟಗೊಂಡಿದ್ದು, ಮೈಸೂರಿನ ಅಭಿರುಚಿ ಪ್ರಕಾಶನ ಇದನ್ನು ಹೊರತಂದಿದೆ.

ಓ.ಎಲ್.ನಾಗಭೂಷಣ ಸ್ವಾಮಿಯವರು ಬರೆಯುತ್ತಿದ್ದ ಅಕ್ಕ ಮಹಾದೇವಿಯವರ ವಚನ – ವ್ಯಾಖ್ಯಾನದ ‘ವಚನ ಸಂವಾದ’ ಸರಣಿ ಓದುಗರ ಮೆಚ್ಚುಗೆಗೆ ಪಾತ್ರವಾಗಿತ್ತು, ಅಕ್ಕನ ವಚನಗಳನ್ನು ಅರ್ಥೈಸಿಕೊಳ್ಳಲು ಅತ್ಯಂತ ಪ್ರಯೋಜನಕಾರಿಯಾಗಿಯೂ ಪರಿಣಮಿಸಿತ್ತು. ನಾಳೆಯಿಂದ ಈ ಸರಣಿಯು, ವಿವಿಧ ವಚನಕಾರರ ರಚನೆಗಳ ‘ವಚನ ವೈವಿಧ್ಯ’ ಅಂಕಣದ ಮೂಲಕ ಮುಂದುವರಿಯಲಿದೆ.

ಅಕ್ಕ ಮಹಾದೇವಿಯವರ ವಚನ ಸಂವಾದ ಅಂಕಣವು ‘ಒಲುಮೆ ಒಚ್ಚತವಾಗಿ’ ಹೆಸರಿನಿಂದ ಪುಸ್ತಕವಾಗಿ ಪ್ರಕಟಗೊಂಡಿದೆ. ಅಕ್ಕ ಮಹಾದೇವಿಯವರ 75 ವಚನಗಳಿಗೆ ನಾಗಭೂಷಣ ಸ್ವಾಮಿಯವರು ಬರೆದ ಕಿರು ಟಿಪ್ಪಣಿಗಳು ಈ ಕೃತಿಯಲ್ಲಿವೆ. ವಚನಗಳನ್ನು ಅರ್ಥ ಮಾಡಿಕೊಳ್ಳಲು ಕೇವಲ ಭಾಷೆ ತಿಳಿದಿದ್ದರೆ ಸಾಲದು, ಅದರ ಭಾವವೂ ತಿಳಿದಿರಬೇಕು. ಹೆಚ್ಚುವರಿಯಾಗಿ, ವಚನಕಾರರ ಬದುಕೂ ತಿಳಿದಿರಬೇಕು. ಆಗ ಮಾತ್ರ ವಚನಗಳಲ್ಲಿ ಬಳಸಲಾದ ಪದಗಳ, ವಾಕ್ಯಗಳ, ನುಡಿಗಟ್ಟುಗಳ ಸಂಪೂರ್ಣ ಅರ್ಥ ಗ್ರಹಿಸಲು ಸಾಧ್ಯವಾಗುವುದು. ಓ.ಎಲ್.ಎನ್ ಅವರ ವ್ಯಾಖ್ಯಾನಗಳು ಈ ನಿಟ್ಟಿನಲ್ಲಿ ದಿಕ್ಸೂಚಿಯಂತೆ ಸಹಾಯಕ್ಕೆ ಒದಗುತ್ತವೆ.

ಮೈಸೂರಿನ ಅಭಿರುಚಿ ಪ್ರಕಾಶನ ಇದನ್ನು ಹೊರತಂದಿದೆ. ಪ್ರತಿಗಳಿಗಾಗಿ 99805 60013 ಸಂಖ್ಯೆಗೆ ವಾಟ್ಸಪ್ ಮಾಡಿ ವಿಚಾರಿಸಬಹುದು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.