ಸಂಗ್ರಹ – ಅನುವಾದ: ಚಿದಂಬರ ನರೇಂದ್ರ
ಇಪ್ಪತ್ತನೇ ಶತಮಾನದ ಪ್ರಖ್ಯಾತ ಭೌತ ಶಾಸ್ತ್ರಜ್ಞ ಜಾನ್ ವ್ಹೀಲರ್ ಹೇಳುತ್ತಾರೆ….
ನಾನು ಬದುಕುತ್ತಿರುವುದು ಜ್ಞಾನ ಎನ್ನುವ ಪುಟ್ಟ ದ್ವೀಪದಲ್ಲಿ. ಈ ದ್ವೀಪವನ್ನ ಅಜ್ಞಾನ ಎನ್ನುವ ಮಹಾ ಸಾಗರ ಸುತ್ತುವರೆದಿದೆ.
ನಮ್ಮ ಜ್ಞಾನದ ವಲಯ ವಿಸ್ತಾರಗೊಳ್ಳುತ್ತಿದ್ದಂತೆಯೇ ನಮ್ಮ ಅಜ್ಞಾನದ ಪರಿಧಿಯೂ ದೊಡ್ಡದಾಗುತ್ತ ಹೋಗುತ್ತದೆ.
ಇದು ನಮ್ಮ ಗಮನದಲ್ಲಿರಬೇಕು.

