ಭಾಷೆಯ ಸೌಂದರ್ಯ : coffee house ಕತೆಗಳು

ತಜ್ಞ ತರಬೇತುದಾರ ವಿಕಾಸ್ ದಿವ್ಯಕೀರ್ತಿ ಉರ್ದು ಭಾಷೆಯ ಚೆಲುವನ್ನು ಬಣ್ಣಿಸುವುದು ಹೀಗೆ… | ಚಿದಂಬರ ನರೇಂದ್ರ


ಉರ್ದು ಭಾಷೆಯ ಒಂದು ಅಪರೂಪದ ಮತ್ತು ಬಹಳ ಮಹತ್ವದ ವಿಶೇಷತೆ ಎಂದರೆ ಸಂಗತಿಗಳನ್ನು ಸರಳಗೊಳಿಸಿ ಪ್ರಸ್ತುತಪಡಿಸುವುದು. ನನ್ನ ವಿದ್ಯಾರ್ಥಿಯೊಬ್ಬ ಎರಡು ಮೂರು ತಿಂಗಳ ಹಿಂದೆ ನನಗೆ ಒಂದು ಶೇರ್ ಕೇಳಿಸಿದ್ದ. ಅಂದಿನಿಂದ ನಾನು ಆ ಶೇರ್ ನ ಅಭಿಮಾನಿಯಾಗಿಬಿಟ್ಟಿರುವೆ .

ಈ ಶೇರ್ ನ್ನು ನಾನು ಮೇಲಿಂದ ಮೇಲೆ ನನ್ನ ಮಾತುಗಳಲ್ಲಿ ಬಳಸುತ್ತಿರುತ್ತೇನೆ. ಇನ್ನೊಬ್ಬರೊಂದಿಗೆ ನೀವು ಭಾವನಾತ್ಮಕವಾಗಿ ಸಂಪರ್ಕ ಕಳೆದುಕೊಂಡಿರುವುದನ್ನು ಸೈಕಾಲೊಜಿ fear psychosis ಮುಂತಾಗಿ ಬಹಳ ಕಷ್ಟಕರವಾಗಿ ವಿವರಿಸುವ ಪ್ರಯತ್ನ ಮಾಡುತ್ತದೆ. ಆದರೆ ಒಬ್ಬ ಉರ್ದು ಕವಿ ಇದನ್ನು ಎಷ್ಟು ಸರಳವಾಗಿ ಹೇಳುತ್ತಾನೆ ನೋಡಿ.

ಅಗರ್ ವೋ ಪೂಛ್ ಲೇ ಹಂ ಸೇ ತುಮ್ಹೇ ಕಿಸ್ ಬಾತ್ ಕಾ ಗಮ್ ಹೈ,
ತೊ ಫಿರ್ ಕಿಸ್ ಬಾತ್ ಕಾ ಗಮ್ ಹೈ ಅಗರ್ ವೋ ಪೂಛ್ ಲೇ ಹಂ ಸೇ.

ಈ ಸುಂದರ ಸಾಲುಗಳ ಸರಳ ಭಾವಾನುವಾದ ಹೀಗಿದೆ.

ಅವಳು ಕೇಳಿದ್ದರೆ ನನ್ನ
ನಿನಗ್ಯಾವ ದುಃಖ ಕಾಡುತ್ತಿದೆಯೆಂದು……

ನನಗ್ಯಾವ ದುಃಖ ಕಾಡುತ್ತಿತ್ತು
ಅವಳು ಕೇಳಿದ್ದರೆ ನನ್ನ

********************************

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.