ಬರ್ಟ್ರಾಂಡ್ ರಸೆಲ್ ಹೇಳಿದ ಫಿಲಾಸಫಿ

ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ

ಸಂದರ್ಶಕ : ಮಾರ್ಕ್ಸ್ ನನ್ನು ಅಷ್ಟಾಗಿ ಇಷ್ಟಪಡದ ನಮ್ಮಂಥವರು ಹೆಚ್ಚು ಭರವಸೆದಾಯಕ ಭವಿಷ್ಯದತ್ತ ಮುನ್ನಡೆಯಲು ನೀವೇನಾದರೂ ಧನಾತ್ಮಕ ಫಿಲೊಸೊಫಿಯನ್ನ ಒದಗಿಸಿ ಕೊಡ್ತೀರ?

ಬರ್ಟ್ರಾಂಡ್ ರಸೆಲ್ : ಈ ಜಗತ್ತಿನ ಬಹು ದೊಡ್ಡ ಸಮಸ್ಯೆಯೆಂದರೆ ನಾವೆಲ್ಲರೂ ಒಂದಿಲ್ಲೊಂದನ್ನು ಬಹಳ dogmatic (ಖಡಾಖಂಡಿತವಾಗಿ, ಅತಿಯಾಗಿ) ಆಗಿ ನಂಬುವುದು. ಮತ್ತು ನನ್ನ ಪ್ರಕಾರ ಈ ಎಲ್ಲ ಸಂಗತಿಗಳು ಬಹಳ ಸಂಶಯಾತ್ಮಕವಾದವು. ಒಬ್ಬ ತಾರ್ಕಿಕ (rational) ಮನುಷ್ಯನಿಗೆ ತಾನು ಸರಿ ಎನ್ನುವ ಬಗ್ಗೆ ಯಾವಾಗಲೂ ಖಚಿತತೆ ಇರುವುದಿಲ್ಲ. ಆದ್ದರಿಂದ ನಮ್ಮ ಅಭಿಪ್ರಾಯಗಳ ಬಗ್ಗೆ ನಾವು ಯಾವತ್ತೂ ಕೊಂಚ ಸಂಶಯ ಇಟ್ಟುಕೊಳ್ಳುವುದು ಒಳ್ಳೆಯದು. ಜನ dogmatically ಯಾವ ಫಿಲೊಸೋಫಿಯನ್ನೂ ನಂಬಲು ಹೋಗಬಾರದು, ನನ್ನದನ್ನೂ ಕೂಡ, not even mine. ಯಾವತ್ತೂ ಇಂಥದನ್ನೆಲ್ಲ ಸಂಶಯದ ಕಣ್ಣಿನಿಂದಲೇ ನೋಡಬೇಕು.

ನನ್ನ ಪ್ರಕಾರ, ಯಾವುದೇ ಒಂದು  ಫಿಲೊಸೊಫಿ ಖುಶಿಗೆ ಕಾರಣವಾಗುತ್ತದೆಯೆಂದರೆ, ಅದು ಕಾರುಣ್ಯ ಭಾವದಿಂದ ಪ್ರೇರಿತವಾಗಿರಬೇಕು. ಆದರೆ ನನ್ನ ಪ್ರಕಾರ ಮಾರ್ಕ್ಸ್ ಕಾರುಣ್ಯ ಭಾವದಿಂದ ಪ್ರೇರಿತನಾದವನಲ್ಲ. ಶ್ರಮಜೀವಿಗಳಿಗೆ ಸಂತೋಷ ಸಿಕ್ಕಬೇಕು ಎಂದು ಮಾರ್ಕ್ಸ್ ಬಯಸುತ್ತಾನೆ ಎನ್ನುವುದು ಎಲ್ಲರ ಅಭಿಪ್ರಾಯವಾಗರೂ, ಅವನು ನಿಜವಾಗಿ ಬಯಸಿದ್ದು ಬೂರ್ಜ್ವಾಗಳಿಗೆ ದುಃಖವನ್ನ. ಈ ಋಣಾತ್ಮಕ ಅಂಶದ ಕಾರಣವಾಗಿ, ಈ ದ್ವೇಷ ಅಂಶದ ಕಾರಣವಾಗಿ ಅವನು ಪ್ರಪೋಸ್ ಮಾಡಿದ ಫಿಲೊಸೊಫಿಯಿಂದ ವಿನಾಶವೇ ಹೆಚ್ಚಾಯಿತು. ಆದ್ದರಿಂದ ಜಗತ್ತಿಗೆ ಒಳ್ಳೆಯದನ್ನು ಬಯಸುವ ಫಿಲೊಸೊಫಿ ಯಾವತ್ತೂ kindly feeling ಇಂದ ಪ್ರೇರಿತವಾಗಿರಬೇಕೇ ಹೊರತು ದ್ವೇಷ ಭಾವದಿಂದಲ್ಲ.

********************************

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.